ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಅಬ್ಬಕ್ಕ ಉತ್ಸವಕ್ಕೆ ಸರಕಾರ ಬಜೆಟ್‍ನಲ್ಲಿ ಅನುದಾನಕ್ಕೆ ಅವಕಾಶ ಕಲ್ಪಿಸಿದ್ದು ಈ ಉತ್ಸವವನ್ನು ಸೌಹಾರ್ಧ, ಸಾಮರಸ್ಯದ ಉತ್ಸವವವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕ ೃತಿ ಇಲಾಖೆ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಮೇ 7ಹಾಗೂ 8ರಂದು ತೊಕ್ಕೊಟ್ಟಿನ ಖಾಸಗಿ ಸಭಾಂಗಣದಲ್ಲಿ ನಡೆಯಲಿರುವ ಅಬ್ಬಕ್ಕ ಉತ್ಸವ ಪ್ರಯುಕ್ತ ಪೆರ್ಮನ್ನೂರಿನ ಸಂತ ಸೆಬಾಸ್ಟಿಯನ್ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಣಿ ಅಬ್ಬಕ್ಕ ಕ್ರೀಡೋತ್ಸವ ಮತ್ತು ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಅಂತಾರಾಷ್ಟಿ ್ರೀಯ ವೈಟ್‍ಲಿಫ್ಟರ್‍ಶ್ಯಾಮಲಾ ಶೆಟ್ಟಿ ರಾಣಿ ಅಬ್ಬಕ್ಕ ಶಕ್ತಿ ಟ್ರೋಫಿ-2016 ಉದ್ಘಾಟಿಸಿದರು.
ರಾಣಿ ಅಬ್ಬಕ್ಕ ಕಲಾವೈಭವ 2016ಕ್ಕೆ ಶಿಕ್ಷಣ ಸಿರಿ ಪ್ರಶಸ್ತಿ ಪುರಸ್ಕ ೃತ ನಿವೃತ್ತ ಶಿಕ್ಷಕಿ ಸಾವಿತ್ರಿ ಎಸ್. ರಾವ್ ಚಾಲನೆ ನೀಡಿದರು.
ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನಕರ್ ಉಳ್ಳಾಲ್ ಅಬ್ಬಕ್ಕ ಉತ್ಸವ ಆಚರಣೆಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಆನಂದ ಕೆ. ಅಸೈಗೋಳಿ, ಪೆರ್ಮನ್ನೂರು ಸಂತ ಸೆಬಾಸ್ಟಿಯನ್ನರ ಪ್ರೌಢಶಾಲೆಯ ಧರ್ಮಗುರು ರೆ.ಫಾ. ಜೆ.ವಿ.ಸಲ್ದಾನ, ರಾಜ್ಯ ಪವರ್‍ಲಿಫ್ಟಿಂಗ್ ಎಸೋಸಿಯೇಶನ್‍ನ ಕಾರ್ಯದರ್ಶಿ ದರ್ಬೆ ಚಂದ್ರಹಾಸ್ ರೈ, ಅಂತರಾಷ್ಟಿ ್ರೀಯ ದೇಹದಾರ್ಢ್ಯಪಟು ಮಿಸ್ಟರ್ ವರ್ಲ್ಡ್, ಏಕಲವ್ಯ ಪ್ರಶಸ್ತಿ ವಿಜೇತ ದೇಹದಾರ್ಢ್ಯಪಟು ಭಾಸ್ಕರ ತೊಕ್ಕೊಟ್ಟು, ಅಂತರಾಷ್ಟಿ ್ರೀಯ ಪವರ್ ಲಿಫ್ಟರ್ ಗೀತಾಬಾಯಿ ಉಳ್ಳಾಲ, ಉಳ್ಳಾಲ ನಗರ ಸಭೆಯ ಕೌನ್ಸಿಲರ್ ರಜಿಯಾ ಇಬ್ರಾಹಿಂ, ಛೋಟಾ ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ರಾಜೇಶ್ ಶೆಟ್ಟಿ, ಮಂಗಳೂರು ಕ್ಷೇತ್ರ ಶಿಕ್ಷಣಾ„ಕಾರಿ e್ಞÁನೇಶ್, ಜಿಲ್ಲಾ ಪಶು ಅಭಿವೃದ್ಧಿ ಯೋಜನಾ„ಕಾರಿ ಶ್ಯಾಮಲಾ, ಜಿಲ್ಲಾ ಕ್ರೀಡಾ„ಕಾರಿ ಪಾಂಡುರಂಗ, ಸಂಚಾಲಕರುಗಳಾದ ಯು.ಪಿ.ಆಲಿಯಬ್ಬ, ತೋನ್ಸೆ ಪುಷ್ಕಳ್ ಕುಮಾರ್, ಡಿ.ಎನ್. ರಾಘವ, ಅಬ್ದುಲ್ ಅಜೀಝ್ ಹಕ್, ತ್ಯಾಗಂ ಹರೇಕಳ, ಸುವಾಸಿನಿ ಬಬ್ಬುಕಟ್ಟೆ, ರತ್ನಾವತಿ ಜೆ. ಬೈಕಾಡಿ, ಕಾರ್ಯದರ್ಶಿಗಳಾದ ಲಕ್ಷಿ ್ಮೀ ನಾರಾಯಣ ರೈ ಹರೇಕಳ, ನಿರ್ಮಲ ಕುಮಾರ್, ಕೆ.ಎಂ.ಕೆ. ಮಂಜನಾಡಿ, ತುಕರಾಮ್, ಮೋಹನ್‍ದಾಸ್ ರೈ, ಕೆ. ಲೋಕನಾಥ ರೈ, ಫ್ರಭಾಕರ ಜೋಗಿ, ಗಣೇಶ್ ಕುಲಾಲ್, ಸತೀಶ್ ಭಂಡಾರಿ, ಭರತ್ ಶೆಟ್ಟಿ, ಬಾದಶಹಾ, ದೇವಕಿ ಆರ್. ಬಲ್ಲಾಳ್, ಧನಲಕ್ಷಿ ್ಮ, ಶಶಿಕಲಾ, ಅನುಪಮ ಜೆ. ಬಬ್ಬುಕಟ್ಟೆ, ಲೀಲಾವತಿ, ಸುರೇಖ, ನಮಿತಾ ಶ್ಯಾಮ್ ಉಪಸ್ಥಿತರಿದ್ದರು.
ನಿವೃತ್ತ ದೈಹಿಕ ಶಿಕ್ಷಕ ತಾರಾನಾಥ ರೈ ಸ್ವಾಗತಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾಸುದೇವ ರಾವ್ ವಂದಿಸಿದರು. ಪಿ.ಡಿ.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.


