ಪಿಲಾರು: ಜೀವನದಲ್ಲಿ ಬದಲಾವಣೆ ಅಗತ್ಯ, ಅದನ್ನು ಅನುಸರಿಸುವ ಮೂಲಕ ಮಾನವ ಜೀವನದಲ್ಲಿ ಯಶಸ್ವಿಗೊಳಿಸಲು ಸಾಧ್ಯ ಎಂದು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನ ನಡುಬೊಟ್ಟು ಇದರ ಧರ್ಮದರ್ಶಿ ರವಿ.ಎನ್ ಅಭಿಪ್ರಾಯಪಟ್ಟರು.
ಅವರು ಭಾನುವಾರ ನಡೆದ ಶ್ರೀ ನಾಗಬ್ರಹ್ಮ ಕ್ಷೇತ್ರ ಪಿಲಾರು ಲಕ್ಷ್ಮೀಗುಡ್ಡೆ ಇದರ 7ನೇ ವರ್ಷದ ವಾರ್ಷಿಕ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ಮಾತಿನಿಂದ ಪ್ರೀತಿ, ಪ್ರೀತಿಯಿಂದ ಸಂಬಂಧಗಳನ್ನು ಉಳಿಸುವ ಕಾರ್ಯ ಆಗಬೇಕು. ನಾಲಗೆಯಿಂದ ಬರುವ ಮಾತುಗಳು ಮಾಣಿಕ್ಯದಿಂದ ಇದ್ದಲ್ಲಿ ಸಂಬಂಧಗಳು ಗಟ್ಟಿಯಾಗಲು ಸಾಧ್ಯ ಎಂದರು.
ಸೈಂಟ್ ಸೆಬೆಸ್ಟಿಯನ್ ಕಾಲೇಜಿನ ಪ್ರಾಂಶುಪಾಲ ಎಡ್ವಿನ್ ಮಸ್ಕರೇನಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಗೌರವಾಧ್ಯಕ್ಷ ಕೆ.ನಾರಾಯಣ ಭಟ್, ಅಧ್ಯಕ್ಷ ಸಂಜೀವ ಗಟ್ಟಿ ಮೇಸ್ತ್ರಿ, ಅಧ್ಯಕ್ಷೆ ಪುಷ್ಪ, ಕಾರ್ಯದರ್ಶಿ ಸುರೇಖಾಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಾಧ್ಯಕ್ಷ ಸಂಜೀವ ಪಿಲಾರು ಪ್ರಸ್ತಾವನೆಗೈದರು. ಕಾರ್ಯದರ್ಶಿ ಚಂದ್ರಹಾಸ ಪಿಲಾರು ಸ್ವಾಗತಿಸಿದರು. ಕೋಶಾಧಿಕಾರಿ ನಾಗೇಶ್ ದಾಸ್ ವಂದಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನಾಗಬ್ರಹ್ಮ ಸೇವಾ ಸಮಿತಿ ಇದರ ನೇತೃತ್ವದಲ್ಲಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಮತ್ತು ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದಿಂದ ಗೀತಾ ಸಾಹಿತ್ಯ ವೈಭವ ಕಾರ್ಯಕ್ರಮ ನಡೆಯಿತು.


