ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯು ಕಳೆದ 19 ವರ್ಷಗಳಿಂದ ಆಚರಿಸುತ್ತಾ ಬರುತ್ತಿರುವ `ಅಬ್ಬಕ್ಕ ಉತ್ಸವ -2016′ ಈ ಸಲವೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಮೇ 7 ಮತ್ತು 8ರಂದು ತೊಕ್ಕೊಟ್ಟು ಕಲ್ಲಾಪುವಿನ ಯುನಿಟಿ ಹಾಲ್ ನಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಉತ್ಸವದ ಅಂಗವಾಗಿ ನಡೆದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಭಾರತ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ವೀರರಾಣಿ ಅಬ್ಬಕ್ಕನ ಶೌರ್ಯ, ದೇಶಾಭಿಮಾನ, ಸಹಬಾಳ್ವೆ, ಕೋಮು ಸೌರ್ದತೆಯನ್ನು ಎತ್ತಿ ತೋರಿಸುವ ಈ ಉತ್ಸವದ ಆಚರಣೆಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಮೇ 1ರಂದು ಮಹಿಳೆಯರಿಗಾಗಿ ರಾಜ್ಯಮಟ್ಟದ ಮಹಿಳೆಯರ ಭಾರ ಎತ್ತುವ ಸ್ಪರ್ಧೆ “ರಾಣಿ ಅಬ್ಬಕ್ಕ ಶಕ್ತಿ ಟ್ರೋಫಿ-2016” ಮತ್ತು ಮಹಿಳಾ ತಂಡಗಳಿಂದ ಸಾಂಸ್ಕøತಿಕ ವೈವಿಧ್ಯಗಳ ಸ್ಪರ್ಧಾಗುಚ್ಚವಾಗಿ “ರಾಣಿ ಅಬ್ಬಕ್ಕ ಕಲಾವೈಭವ-2016ನ್ನು ಮಂಗಳೂರು ತಾಲೂಕಿನ ಪೆರ್ಮನ್ನೂರು ಸಂತ ಸೆಬೆಸ್ಟಿಯನ್ನರ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ.
ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಮಾತನಾಡಿ ಅಬ್ಬಕ್ಕ ಉತ್ಸವದಿಂದ ಇಂದಿನವರೆಗೆ ಉತ್ಸವ ಸಮಿತಿಯ ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು , ರಾಜ್ಯದ ವಿವಿಧ ಕಡೆಗಳಿಂದ ಸಾಂಸ್ಕøತಿಕ ತಂಡಗಳು ಪ್ರದರ್ಶನ ನೀಡಿರುತ್ತವೆ. ಈ ಬಾರಿಯ ಅಬ್ಬಕ್ಕ ಉತ್ಸವವನ್ನು ಸಾರ್ವಜನಿಕರು ಯಶಸ್ವಿಗೊಳಿಸಬೇಕು ಹಾಗೂ ಸಾರ್ವಜನಿಕರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಬ್ಬಕ್ಕನ ಹೆಸರಿಡಬೇಕೆಂದು ಸರಕಾರವನ್ನು ಒತ್ತಾಯಿಸುವಂತೆ ಮನವಿ ಮಾಡಿದರು.
ಉಳ್ಳಾಲ ನಗರಸಭಾ ಅದ್ಯಕ್ಷ ಕುಂಞಮೋನು, ಕೆ. ಕೃಷ್ಣಪ್ಪ ಸಾಲಿಯಾನ್, ಆನಂದ ಅಸೈಗೋಳಿ, ತೋನ್ಸೆ ಪುಷ್ಕಳ್ ಕುಮಾರ್, ಪಿ.ಡಿ.ಶೆಟ್ಟಿ, ಯು.ಪಿ. ಆಲಿಯಬ್ಬ, ಲಕ್ಷಿ ್ಮೀನಾರಾಯಣ ರೈ , ಹರೇಕಳ, ತ್ಯಾಗಂ ಹರೇಕಳ, ಲೋಕನಾಥ ರೈ, ತುಕರಾಮ, ಕೆ.ಎಂ.ಕೆ. ಮಂಜನಾಡಿ, ರಾಧಕೃಷ್ಣ ರೈ, ಗಣೇಶ್ ಬಿ. ಕುಲಾಲ್, ನಿರ್ಮಲ್ ಕುಮಾರ್, ಬಾದ್ ಷಾ ಸಾಂಬರ್ ತೋಟ, ಬಾಜಲ್ ಡಿಸೋಜಾ, ಬಾವಾ ಎಂ. ಸಿ.ಎಮ್ ಹನೀಫ್, ಮಹಮ್ಮದ್ ಅಶ್ರಫ್, ಗಂಗಾಧರ್ ಶೆಟ್ಟಿ, ಎನ್. ಟಿ. ರಾಮಕೃಷ್ಣ ನಾಯಕ್, ಪದ್ಮಾವತಿ ಎಸ್. ಶೆಟ್ಟಿ, ರಜಿಯಾ ಇಬ್ರಾಹಿಂ, ವಿಜಯಲಕ್ಷಿ ್ಮೀ ಬಿ. ಶೆಟ್ಟಿ, ನಮಿತಾ ಶ್ಯಾಂ, ದೇವಕಿ ಆರ್ ಉಳ್ಳಾಲ್, ಧನಲಕ್ಷಿ ್ಮೀ , ಮಲ್ಲಿಕಾ ಭಂಡಾರಿ, ಅನುಪಮಾ ಜೆ. ಬಬ್ಬುಕಟ್ಟೆ, ಸರೋಜಾ, ಹೇಮಾ, ಶಶಿಕಲಾ ಎ. ಶೆಟ್ಟಿ, ದೇವಕಿ, ಅಸ್ಮಾ, ಗೀತಾ ಎಸ್. ಮಂಜುಳಾ ಕುರ್ಡೆಕರ್, ಪದ್ಮಲತಾ, ವಿಲಾಸಿನಿ ಉಪಸ್ಥಿತರಿದ್ದರು.
ಕಾರ್ಯಧ್ಯಕ್ಷರಾದ ದಿನಕರ್ ಉಳ್ಳಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಪ್ರಸ್ತಾವನೆಗೈದು ಕಾರ್ಯಕ್ರಮ ನಿರ್ವಹಿಸಿದರು. ಅಬ್ದುಲ್ ಅಜೀಜ್ ಹಕ್ ವಂದಿಸಿದರು.


