ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ನಿಟ್ಟೆ ವಿಶ್ವವಿದ್ಯಾಲಯದ ಕ್ಷೇಮ ಕಾಲೇಜಿನ ಸ್ಕಿಲ್ ಲ್ಯಾಬ್ನಲ್ಲಿ ಎ. 16ರಂದು ನಡೆದ ಕಾರ್ಯಗಾರದಲ್ಲಿ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸಿಪಿಆರ್ ಮತ್ತು ಪ್ರಥಮ ಚಿಕಿತ್ಸೆಯಲ್ಲಿ ತರಬೇತಿ ನೀಡಲಾಯಿತು. ಗೈಡ್ಸ್ ಕ್ಯಾಪ್ಟನ್ ಫ್ಲೇವೀ ಡಿ’ಸೋಜ ನೇತೃತ್ವದ ಅಬ್ಬಕ್ಕ ದಳದಿಂದ ಆಯೋಜಿಸಲ್ಪಟ್ಟಿದ್ದ ಈ ಶಿಬಿರದಲ್ಲಿ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಹಾಗೂ ಬಂಟ್ವಾಳ ತಾಲೂಕುಗಳ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಕ್ಷೇಮ ಕಾಲೇಜಿನ ಅರಿವಳಿಕೆ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ| ಶ್ರೀಪಾದ ಜಿ ಮೆಹೆಂದಳೆ ಹಾಗೂ ಡಾ| ಸುಮಲತಾ ಆರ್. ಶೆಟ್ಟಿ ಆಕಸ್ಮಿಕ ಹೃದಯ ಸ್ತಂಭನದ ತುರ್ತು ಸಂದರ್ಭದಲ್ಲಿ ನೀಡಲೇಬೇಕಾದ ಚಿಕಿತ್ಸೆಯ ಕೌಶಲ್ಯವನ್ನು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.



