ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಬಾಳೆಪುಣಿ :ಶುಭ ಸಮಾರಂಭ ಮತ್ತು ದೈವದ ಕೋಲ ಮೊದಲಾದ ಸಂದರ್ಭದಲ್ಲಿ ಅಮಲು ಪದಾರ್ಥ ಸೇವಿಸುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು. ದುಶ್ಚಟಗಳಿಂದ ಮುಕ್ತರಾಗಬೇಕು. ಹಣ ಕೂಡಿಡುವ ಅತಿಯಾದ ಆಸೆಗಳೇ ಎಲ್ಲರನ್ನೂ ಹಾಳು ಮಾಡುತ್ತದೆ. ಯಾವತ್ತೂ ಹಣದ ಹಿಂದೆ ಬೀಳದೇ ಸತ್ಯ, ನ್ಯಾಯ, ಧರ್ಮವನ್ನು ಅನುಸರಿಸಬೇಕು ಎಂದು ಮಾಣಿಲ ಶ್ರೀ ಧಾಮ ಶ್ರೀ ಮಹಾಲಕ್ಷ್ಮೀಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಕರೆ ನೀಡಿದರು.
ಅವರು ಸೋಮವಾರ ಬಾಳೆಪುಣಿ ಗ್ರಾಮದ ಮೂಳೂರು ಶ್ರೀ ಮೂಲಾಪುರ ಪರಮೇಶ್ವರ ದೇವಸ್ಥಾನದ ಶ್ರೀ ದೇವರ ಪುನಃಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಎತ್ತಿನಹೊಳೆ ಯೋಜನೆಯಿಂದ ಸಮಾಜ ಅಧಃಪತನ : ಮಾಣಿಲ ಶ್ರೀ
ಎತ್ತಿನಹೊಳೆ ಯೋಜನೆಯಿಂದ ಸಮಾಜದ ಅಧಃಪತನ ಖಂಡಿತ. ಪ್ರಜೆಗಳು ಪಾವತಿಸಿದ ತೆರಿಗೆಯನ್ನು ಪೆÇೀಲು ಮಾಡುವ ಈ ಯೋಜನೆಯ ಮೂಲಕ ಪ್ರಸ್ತುತ ಸಾವಿರಾರು ಕೋಟಿ ರೂ.ಗಳಲ್ಲದೇ ಪ್ರತಿವರ್ಷವೂ 2500 ಕೋಟಿ ರೂ.ಗಳನ್ನು ಖಾಲಿ ಮಾಡುವ ಸಾಧ್ಯತೆಯಿದೆ ಎಂದು ಮಾಣಿಲ ಶ್ರೀಗಳು ನುಡಿದರು.
ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ಕ್ಷೇತ್ರದ ಧರ್ಮದರ್ಶಿ ರವಿ ಎನ್. ಮಾತನಾಡಿದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ನಿರ್ದೇಶಕ ತುಕಾರಾಂ ಪೂಜಾರಿ ಮಾತನಾಡಿ ತುಳು ಸಂಸ್ಕøತಿಯ ಮಹತ್ವ ತಿಳಿದಿರಬೇಕು. ಮಗುವಿನ ಮತ್ತು ವೃದ್ಧರ ಮುಖದಲ್ಲಿ ದೇವರನ್ನು ಕಾಣಬೇಕು. ಜಾತಿ ವ್ಯವಸ್ಥೆಯನ್ನು ಮೀರಿ ನಡೆದಾಗ ಸಮಾಜದಲ್ಲಿ ಪರಿವರ್ತನೆಯಾಗುತ್ತದೆ ಎಂದು ಹೇಳಿದರು.
ಜಿ.ಪಂ.ಮಾಜಿ ಸದಸ್ಯ ಮಾಜಿ ಸದಸ್ಯ ಸಂತೋಷಕುಮಾರ್ ರೈ ನಾರ್ಯ, ತಾ.ಪಂ.ಸದಸ್ಯ, ಮುಡಿಪು ಧರ್ಮಜಾಗೃತಿ ಸಮಿತಿ ಅಧ್ಯಕ್ಷ ನವೀನ್ ಪಾಗಲ್ಪಾಡಿ, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಕೆ.ಪಿ.ಭಟ್, ಕಾರ್ಯದರ್ಶಿ ಸತ್ಯನಾರಾಯಣ ಎಡಂಬಳೆ, ಸೇವಾ ಸಮಿತಿ ಅಧ್ಯಕ್ಷ ಜಲ್ಲಿ ಈಶ್ವರ ಭಟ್, ಕಾರ್ಯದರ್ಶಿ ಶಂಕರಯ್ಯ ಮೂಳೂರು ಉಪಸ್ಥಿತರಿದ್ದರು.
ಸ್ವಾಗತ ಸಮಿತಿಯ ಟಿ.ಜಿ.ರಾಜಾರಾಮ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದು ಈ ದೇಗುಲವು ಬಾಳೆಪುಣಿ ಗ್ರಾಮ ದೇವಸ್ಥಾನವಾಗಿದೆ. ಇಲ್ಲಿ ಸಹಭೋಜನವನ್ನು ಆರಂಭಿಸಲಾಗಿದೆ. ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಂತೆಯೇ ಈ ದೇಗುಲದ ಕಾರ್ಯಗಳು ನಡೆದಿವೆ ಎಂದರು. ಮುಡಿಪು ಹವ್ಯಕ ವಲಯ ಅಧ್ಯಕ್ಷ ಪೆರಡೆ ತಿರುಮಲೇಶ್ವರ ಭಟ್ ವಂದಿಸಿದರು. ಸೌಮ್ಯ ಬಿ.ಆರ್., ಸ್ವಾತಿ ಎಚ್. ಆಶಯಗೀತೆ ಹಾಡಿದರು. ಸಭಾ ಕಾರ್ಯಕ್ರಮ ಮತ್ತು ಸಾಂಸ್ಕøತಿಕ ಸಮಿತಿಯ ಸುಬ್ರಹ್ಮಣ್ಯ ಕುಮಾರ್ ಸಿ.ಎಚ್. ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಭಟ್ ಪೆದಮಲೆ, ಟಿ.ವಿ.ಗಿರಿ ಸಹಕರಿಸಿದರು.



