ಕೊಣಾಜೆ: ಜೀವನದಲ್ಲಿ ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಬೇಕಾದರೆ ನಿರಂತರ ಪ್ರಯತ್ನ, ಪರಿಶ್ರಮ ಅಗತ್ಯ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷರಾದ ಪ್ರಶಾಂತ ಕಾಜವ ಹೇಳಿದರು. ಮುಡಿಪುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾಲೇಜು ವಾರ್ಷಿಕೋತ್ಸವ ಹಾಗೂ ಕಾಲೇಜು ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರಿಗೂ ಒಂದು ಸ್ಪಷ್ಟ ಗುರಿ ಇರಬೇಕು.ಆ ಗುರಿ ತಲುಪಲು ಪ್ರಾಮಾಣಿಕ ಪ್ರಯತ್ನವಿದ್ದಾಗ ಮಾತ್ರ ಗೆಲವು ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ನಾಗಪ್ಪ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ನಾಯಕತ್ವ ಗುಣವನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಹೊರಹೊಮ್ಮಬೇಕು. ತಾವು ಕಲಿತ ಕಾಲೇಜಿಗೆ ಗೌರವ ತರುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಸತೀಶ್ ಗಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಿಎಚ್ ಡಿ ಪದವಿ ಪಡೆದ ಅಕ್ಷತಾ ಸುವರ್ಣ ಸನ್ಮಾನಿಸಲಾಯಿತು.
ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಕವಿತಾ ಎಂ.ಎಲ್.ವಾರ್ಷಿಕ ವರದಿ ಮಂಡಿಸಿದರು. ಪ್ರಾಧ್ಯಾಪಕರಾದ ಡಾ.ಪವನ್ ಬಿ.ಪಿ.ಕಾಲೇಜು ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಹಿರಿಯ ಪ್ರಾಧ್ಯಾಪಕರಾದ ಹೈದರಾಲಿ ಹಾಗೂ ಉಪನ್ಯಾಸಕರಾದ ಪ್ರಮೀಳಾ ಸಿ.ಎಚ್.ಸಾಂಸ್ಕೃತಿಕ ಚಟುವಟಿಕೆಯ ವಿಜೇತರ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು.
ವೇದಿಕೆಯ ಮೇಲೆ ಕಾಲೇಜು ಅಭಿವೃದ್ಧಿ ಆಡಳಿತ ಮಂಡಳಿ ಸದಸ್ಯರಾದ ಪ್ರವೀಣ್ ಆಳ್ವ, ನಾಸಿರ್ ನಡುಪದವು, ಇಬ್ರಾಹಿಂ ನಡುಪದವು, ಸುರೇಖಾ ಅಮನಾಥ, ಯೋಗೇಶ್ ಆಚಾರ್ಯ, ಶೀನ ಶೆಟ್ಟಿ, ದೇವಪ್ಪ ನಾಯಕ, ಜಯಂತಿ ಶೆಟ್ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ.ಶೇಷಪ್ಪ ಅಮೀನ್ ಕೆ.ಸ್ವಾಗತಿಸಿದರು.ವಿದ್ಯಾರ್ಥಿ ಪ್ರತಿನಿಧಿಗಳಾದ ಅನನ್ಯ ಎ.ಆರ್.ನಿರೂಪಿಸಿದರು.ನಿಯಾಜ್ ಮಹಮ್ಮದ್ ವಂದಿಸಿದರು.

