ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಪಿಲಾರ್: ಬೆಂಗಳೂರಿನ ರಾಜೀವ ಗಾಂಧಿ ವಿಶ್ವವಿದ್ಯಾಲಯದಲ್ಲಿ ನಡೆದ ವೈದ್ಯಕೀಯ ಸ್ನಾತ್ತಕೋತ್ತರ ಪರೀಕ್ಷೆಯಲ್ಲಿ ಫಾರೆನಿಕ್ಸ್ ಮೆಡಿಸಿನ್ ವಿಭಾಗದ ಪಿಲಾರ್ ಅಂಬಿಕಾರೋಡ್ ನಿವಾಸಿ ಡಾ.ಶೃತಿ.ಪಿ ಎಂಟನೇ ರ್ಯಾಂಕನ್ನು ಗಳಿಸಿರುತ್ತಾರೆ.
ವರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪೂರೈಸಿದ್ದು, ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತ್ತಕೋತ್ತರ ಪದವಿಯನ್ನು ಪಡೆದಿದ್ದರು.
ಸದ್ಯ ಚೆನ್ನೈನ ಸವೀತಾ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಕೋಟೆಕಾರು ಸಿಂಡಿಕೇಟ್ ಬ್ಯಾಂಕಿನ ಉಪಪ್ರಬಂಧಕ ಪ್ರಭಾಕರ್ ಕೆ. ಮತ್ತು ಶಾರದಾ ದಂಪತಿ ಪುತ್ರಿ.


