ಉಳ್ಳಾಲ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ವಿದ್ಯಾರ್ಥಿ ಜೀವನದಲ್ಲಿ ಕಾಲೇಜಿನ ಕ್ಲಾಸ್ ರೂಂ ಮತ್ತು ಪುಸ್ತಕದಲ್ಲಿ ಸಿಗುವ ಜ್ಞಾನದೊಂದಿಗೆ ಕ್ರೀಡಾಂಗಣದಲ್ಲಿ ಸಿಗುವ ಜ್ಞಾನವು ಸೇರಿದರೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾ„ಪತಿ ಪ್ರೊ. ಡಾ| ಶಾಂತಾರಾಮ ಶೆಟ್ಟಿ ಅಬಿಪ್ರಾಯಪಟ್ಟರು.
ಅವರು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಆಡಿಟೋರಿಯಂನಲ್ಲಿ ದಕ್ಷಿಣ ಭಾರತ ಮಟ್ಟದ ದಂತ ಮತ್ತು ವೈದ್ಯಕೀಯ ವಿಜ್ಞಾನ ಕಾಲೇಜುಗಳ ಅಂತರ್ ಕಾಲೇಜು ಕ್ರೀಡಾಕೂಟ ` 6ನೇ ನಿಟ್ಟೆ ಎಕೋಲೇಟ್ಸ್ 2016′ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುಸ್ತಕಗಳು ನಮ್ಮ ಜೀವನದಲ್ಲಿ ಅತೀ ಮುಖ್ಯ ಅಲ್ಲ. ಹೊಸ ಹೊಸ ತಂತ್ರಜ್ಞಾನಗಳ ಜ್ಞಾನ ಅಗತ್ಯ ಅದರೊಂದಿಗೆ ಕ್ರೀಡಾಕೂಟದಲ್ಲಿ ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳು, ಒದೆಡೆ ಸೇರಿದಾಗ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು, ಸೋಲು, ಗೆಲುವಿನ ಬಗ್ಗೆ ಚಿಂತನೆ ನಡೆಸಲು ಸಹಕಾರಿ. ಕ್ರೀಡೆಯಲ್ಲಿ ಸೂಲು ಗೆಲವು ಸಹಜ ಆದರೆ ಅದರೊಂದಿಗೆ ಮುಂದಿನ ದಿನಗಳಲ್ಲಿ ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವು ಸಾ„ಸುವ ಪ್ರಯತ್ನ ಅತೀ ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ| ಎಸ್. ರಮಾನಂದ ಶೆಟ್ಟಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಸಚಿವ ಡಾ| ಎಂ.ಎಸ್. ಮೂಡಿತ್ತಾಯ, ಎ.ಬಿ.ಶೆಟ್ಟಿ ಮೆಮೋರಿಯಲ್ ದಂತ ವಿಜ್ಞಾನ ಮಹಾವಿದ್ಯಾಲಯದ ವೈಸ್ ಡೀನ್ ಡಾ| ಮಿತ್ರಾ ಎನ್. ಹೆಗ್ಡೆ, ನಿಟ್ಟೆ ಇನ್‍ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಕಾಲೇಜಿನ ಪ್ರಂಶುಪಾಲ ಡಾ| ಧನೇಶ್ ಕುಮಾರ್, ಕ್ಷೇಮದ ಕುಲಸಚಿವ ಡಾ| ಜಯಪ್ರಕಾಶ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಜಯಶೀಲ ಶೆಟ್ಟಿ , ರಾಜಾರಾಮ ಶೆಟ್ಟಿ , ಕರುಣಾಕರ ಶೆಟ್ಟಿ , ಕ್ಷೇಮ ವಿದ್ಯಾರ್ಥಿ ನಾಯಕ ಸಯ್ಯೂಜ್ ಸುಕ್ರೇತನ್, ಕ್ರೀಡಾ ಕಾರ್ಯದರ್ಶಿ ಇತಿಹಾಸ್ ಗೌಡ ಉಪಸ್ಥಿತರಿದ್ದರು.
ಮೂರು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟದಲ್ಲಿ ದಕ್ಷಿಣ ಬಾರತದ 30 ಕಾಲೇಜುಗಳು ಭಾಗವಹಿಸಿದ್ದವು.
ಕೆ.ಎಸ್.ಮೆಡಿಕಲ್ ಅಕಾಡೆಮಿ ಡೀನ್ ಡಾ| ಸತೀಶ್ ಭಂಡಾರಿ ಸ್ವಾಗತಿಸಿದರು. ನಿಟ್ಟೆ ವಿಶ್ವವಿದ್ಯಾನಿಯದ ಕ್ರೀಡಾ ಸಲಹೆಗಾರರದ ಡಾ| ಮುರಳೀಕೃಷ್ಣ ವಿ. ವಂದಿಸಿದರು. ವಿದ್ಯಾರ್ಥಿ ಅಶ್ವತ್ ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಿಸಿದರು.


