Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಬಿಜೆಪಿ ಬಿಟ್ಟು `ಕೈ’ ಹಿಡಿದ ಕುರ್ನಾಡು ಕ್ಷೇತ್ರ , ಮಮತಾ ಗಟ್ಟಿಗೆ ಹ್ಯಾಟ್ರಿಕ್ ಜಯ

UllalaVaniBy UllalaVaniFebruary 24, 2016No Comments4 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ:ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿರುವ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದ್ದು, ವ್ಯಾಪ್ತಿಗೆ ಬರುವ ಐದು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಮೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಕಾಂಗ್ರೆಸ್ ಪಾಲಾದರೆ ಎರಡು ಕ್ಷೇತ್ರ ಬಿಜೆಪಿ ವಿಜಯಿಯಾಗಿದೆ. ಕ್ಷೇತ್ರದ 16 ತಾಲೂಕು ಪಂಚಾಯತ್‍ನಲ್ಲಿ 12 ತಾಲೂಕು ಪಂಚಾಯತ್ ಕ್ಷೇತ್ರವನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡರೆ ಬಿಜೆಪಿ ನಾಲ್ಕು ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ತೃಪ್ತಿ ಪಟ್ಟುಕೊಂಡಿದೆ. ಪ್ರತಿಷ್ಠಿತ ಕುರ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಬಿಜೆಪಿಯಿಂದ `ಕೈ’ವಶ ಮಾಡಿಕೊಂಡಿದೆ.

Congress 1

Congress 2

Congress 3ಮಂಗಳೂರು ಮತ್ತು ಬಂಟ್ವಾಳ ತಾಲೂಕಿಗೆ ಒಳಪಡುವ ಮಂಗಳೂರು ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಪುದು, ಸೋಮೇಶ್ವರ ಮತ್ತು ಕುರ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಈ ಬಾರಿ ತನ್ನಲ್ಲೇ ಉಳಿಕೊಳ್ಳುವ ಕಾರ್ಯತಂತ್ರ ನಡೆಸಿದರೂ ಕುರ್ನಾಡು ಕ್ಷೇತ್ರವನ್ನು ಉಳಿಸುವಲ್ಲಿ ವಿಫಲವಾಗಿದೆ. ಈ ಹಿಂದೆ 17 ತಾಲೂಕು ಪಂಚಾಯತ್ ಕ್ಷೇತ್ರದಲ್ಲಿ ಕಾಂಗ್ರೆಸ್ 9 ಕ್ಷೇತ್ರದಲ್ಲಿದ್ದರೆ ಬಿಜೆಪಿ 8 ಕ್ಷೇತ್ರದಲ್ಲಿ ಸದಸ್ಯರನ್ನು ಹೊಂದಿತ್ತು. ಆದರೆ ಈ ಬಾರಿ 16 ಸ್ಥಾನಗಳಲ್ಲಿ ನಾಲ್ಕು ಮಾತ್ರ ಬಿಜೆಪಿ ಪಾಲಾದರೆ, 12 ಸ್ಥಾನವನ್ನು ಕಾಂಗ್ರೆಸ್ ಪಡೆದು ತನ್ನ ಶಕ್ತಿಯನ್ನು ವೃದ್ಧಿಸಿಕೊಂಡಿದೆ.

ಜಿಲ್ಲಾ ಪಂಚಾಯತ್ ಕ್ಷೇತ್ರ ಕಾಂಗ್ರೆಸ್ – 3, ಬಿಜೆಪಿ -2
ಮಮತಾ ಗಟ್ಟಿಗೆ ಹ್ಯಾಟ್ರಿಕ್ ಗೆಲುವು : ಕುರ್ನಾಡು ಜಿಲ್ಲಾ ಪಂಚಾಯತ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್„ಸಿ ಈ ಬಾರಿ ಗೆಲುವು ಸಾ„ಸಿರುವ ಮಮತಾ ಗಟ್ಟಿಗೆ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸತತ ಮೂರು ಬಾರಿ ಆಯ್ಕೆಯಾಗುವ ಮೂಲಕ ಈ ಬಾರಿ ಹ್ಯಾಟ್ರಿಕ್ ಗೆಲುವು. ಒಂದು ಅವ„ಗೆ ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದ ಮಮತಾ ಗಟ್ಟಿ ಅದೇ ಅವ„ಯಲ್ಲಿ ಉಪಾಧ್ಯಕ್ಷರಾಗಿ ಅ„ಕಾರ ನಡೆಸಿದ್ದರು. ಕೊಳ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಪ್ರಥಮ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿ ಅದೇ ಅವ„ಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಅ„ಕಾರ ನಡೆಸಿದ್ದರು. ಕಳೆದ ಬಾರಿ ತುಂಬೆ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಈ ಬಾರಿ ಕುರ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ವಿಜಯವನ್ನು ಪಡೆದುಕೊಂಡಂತಾಗಿದೆ.

ಉಪನ್ಯಾಸಕಿ ಜಿ. ಪಂ. ಸದಸ್ಯೆ :

ಕೊಣಾಜೆ ಜಿಲ್ಲಾ ಪಂಚಾಯತ್ ಕ್ಷೇತ್ರದಿಮದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್„ಸಿದ್ದ ರಶೀದಾ ಬಾನು ರಾಜಕೀಯವಾಗಿ ಹೊಸಬರಾಗಿದ್ದರೂ ರಾಜಕೀಯ ಶಾಸ್ತ್ರ ಪಾಠ ಮಾಡುವ ಉಪನ್ಯಾಸಕಿ. 2012ರಲ್ಲಿ ರಾಜಕೀಯ ಶಾಸ್ತ್ರ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ರಶೀದಾ ಬಾನು ಎರಡು ವರ್ಷಗಳ ಕಾಲ ಮಂಗಳೂರು ವಿಶ್ವದ್ಯಾನಿಲಯದ ಸಂಯೋಜಿತ ಕಾಲೇಜು ಮಡಿಕೇರಿಯ ಫೀಲ್ಡ್‍ಮಾರ್ಷಲ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ಕಳೆದ ಒಂದು ವರ್ಷದಿಂದ ಉಳ್ಳಾಲದ ಹಝ್ರತ್ ಸಯ್ಯದ್ ಮದನಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಶೀದಾ ಅವರ ತಂದೆ ಮಹಮ್ಮದ್ ಮುಸ್ತಾಫ ಕಾಂಗ್ರೆಸ್ ಮುಖಂಡರೂ, ತಾಲೂಕು ಪಂಚಾಯತ್ ಸದಸ್ಯರಾಗಿದ್ದು, ರಶೀದಾ ಆವರಿಗೆ ಇನ್ನಷ್ಟು ಬಲ ನೀಡಿದೆ.

ಸಾಮಾಜಿಕ ಕಾರ್ಯಕರ್ತೆ ಜಿ. ಪಂ. ಸದಸ್ಯೆ :

ಸೋಮೇಶ್ವರ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಧನಲಕ್ಷ್ಮಿ ಗಟ್ಟಿ ಸಾಮಾಜಿಕ ಕಾರ್ಯಕರ್ತೆಯಾಗಿದ್ದವರು. ಪ್ರe್ಞÁ ಸಲಹಾಕೇಂದ್ರದಲ್ಲಿ ಕಳೆದ 11 ವರ್ಷಗಳಿಂದ ಸಮಾಜ ಸೇವಕಿಯಾಗಿ ಕಾರ್ಯ ನಿರ್ವಹಿಸಿದ್ದು, ಅಂತರಾಷ್ಟ್ರೀಯ ರೋಟರಿ ಸೇವಾಶ್ರೀ ಪ್ರಶಸ್ತಿ ಪುರಸ್ಕøತೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರೇರಕಿಯಾಗಿ, ಕುಡ್ಸೆಂಪ್ ಸಲಹೆಗಾರರಾಗಿ ನರ್ಸರಿ ಶಿಕ್ಷಕಿಯಾಗಿ, ಎನ್‍ಆರ್‍ಎಚ್‍ಎಂ ಯೋಜನೆಯಲ್ಲಿ ಸಂಪನ್ಮೂಲವ್ಯಕ್ತಿಯಾಗಿ, ದುರ್ಗಾವಾಹಿ ಮಹಿಳಾ ಮಂಡಲದ ಸ್ಥಾಪಕಾಧ್ಯಕ್ಷೆಯಾಗಿದ್ದು, ಜೇಸಿಐ, ಅಬ್ಬಕ್ಕ ಉತ್ಸವ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸ್ವ- ಸಹಾಯ ಸಂಘಗಳ ರಚನೆ, ವ್ಯಕ್ತಿತ್ವ ವಿಕಸನ , ಮಾದಕ ದ್ರವ್ಯ ನಿವಾರಣಾ, ಮಕ್ಕಳ ಹಕ್ಕುಗಳ ಹಾಗೂ ಆರೋಗ್ಯದ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂತರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿರುವ ಇವರು ಸಮಾಜಿಕ, ಧಾರ್ಮಿಕ, ಸಾಂಸ್ಕøತಿಕ, ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ನೀರುಮಾರ್ಗ ಜಿಲ್ಲಾ ಪಂಚಾಯತ್ ಕ್ಷೇತ್ರ :

ಮಂಗಳೂರು ಮತ್ತು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ಮಾಜಿ ಸದಸ್ಯ ಮೆಲ್ವಿನ್ ಡಿ.ಸೋಜ ಅವರ ಪತ್ನಿ ಕಾಂಗ್ರೆಸ್ ಅಭ್ಯರ್ಥಿ ಸೀಮಾ ಮೆಲ್ವಿನ್ ಡಿ.ಸೋಜಾ ಆಯ್ಕೆಯಾಗಿದ್ದು ಇವರು ದಾದಿಯಾಗಿ ಕೆಲಸ ನಿರ್ವಹಿಸಿದವರು.

ಪುದು ಜಿಲ್ಲಾ ಪಂಚಾಯತ್ ಕ್ಷೇತ್ರ : ರವೀಂದ್ರ ಕಂಬಳಿ
ತಾಲೂಕು ಪಂಚಾಯತ್ : ಒಟ್ಟು ಸ್ಥಾನ : 16, ಕಾಂಗ್ರೆಸ್ : 12, ಬಿಜೆಪಿ : 4
ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ 16 ತಾಲೂಕು ಪಂಚಾಯತ್‍ನಲ್ಲಿ 10 ಮಂಗಳೂರು ತಾಲೂಕು ಮತ್ತು 6 ಬಂಟ್ವಾಳ ತಾಲೂಕು ಪಂಚಾಯತ್‍ಗೆ ಸೇರಿದೆ. ಮಂಗಳೂರು ತಾಲೂ ಪಂಚಾಯತ್‍ನಲ್ಲಿ 8 ಕ್ಷೇತ್ರಗಳನ್ನು ಕಾಂಗ್ರೆಸ್ ಪಡೆದುಕೊಂಡರೆ, ಬಿಜೆಪಿ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಬಂಟ್ವಾಳ ತಾಲೂಕಿನ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ 4 ಸ್ಥಾನಗಳನ್ನು ಪಡೆದುಕೊಂಡರೆ, 2 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದೆ.

ಮಂಗಳೂರು ತಾಲೂಕು ಪಂಚಾಯತ್ ತಲಪಾಡಿ – ಕಿನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಅಬೂಬಕ್ಕಾರ್ ಸಿದ್ಧಿಕ್, ಮಂಜನಾಡಿ ಕ್ಷೇತ್ರದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಕಾಂಗ್ರೆಸ್‍ನ ಸುರೇಖ ಚಂದ್ರಹಾಸ್, ಕೊಣಾಜೆ ಕ್ಷೇತ್ರದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಕಾಂಗ್ರೆಸ್‍ನ ಪದ್ಮಾವತಿ ಎಸ್., ಬೋಳಿಯಾರ್‍ಕ್ಷೇತ್ರದಲ್ಲಿ ಬೋಳಿಯಾರ್ ಗ್ರಾಮ ಪಂಚಾಯತ್ ಸದಸ್ಯ ಕಾಂಗ್ರೆಸ್‍ನ ಅಬ್ದುಲ್ ಜಬ್ಬಾರ್ ಬೋಳಿಯಾರ್, ಪಾವೂರು ಕ್ಷೇತ್ರದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಕಾಂಗ್ರೆಸ್‍ನ ಮಹಮ್ಮದ್ ಮೋನು, ಹರೇಕಳ – ಅಂಬ್ಲಮೊಗರು ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಶಶಿಪ್ರಭ ಡಿ. ಶೆಟ್ಟಿ, ಮುನ್ನೂರು ಕ್ಷೇತ್ರದಲ್ಲಿ ವಿಲ್ಮಾ ವಿಲ್‍ಪ್ರೆಡ್ ಡಿ.ಸೋಜಾ, ಬೆಳ್ಮ ಕ್ಷೇತ್ರದಲ್ಲಿ ನೂರ್ ಜಹಾನ್, ಬಂಟ್ವಾಳ ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಒಳಪಡುವ ನರಿಂಗಾನ – ಇರಾ ಕ್ಷೇತ್ರದಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಕಾಂಗ್ರೆಸ್‍ನ ಚಂದ್ರಹಾಸ್ ಕರ್ಕೇರ, ಬಾಳೆಪುಣಿ – ಕೈರಂಗಳ ಕ್ಷೇತ್ರಕ್ಕೆ ಬಾಳೆಪುಣಿ ಗ್ರಾಮ ಪಂಚಾಯತ್ ಸದಸ್ಯ ಹೈದರ್ ಕೈರಂಗಳ, ಸಜಿಪ ಪಡು ಕ್ಷೇತ್ರದಲ್ಲಿ ಸವಿತಾ ಹೇಮಂತ್ ಕರ್ಕೇರ, ಮತ್ತು ಪುದು ಕ್ಷೇತ್ರದಲ್ಲಿ ಪದ್ಮಶ್ರೀ ದುರ್ಗೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಬಿಜೆಪಿಗೆ ಮಂಗಳೂರು ತಾಲೂಕು ಪಂಚಾಯತ್‍ನಲ್ಲಿ ಸೋಮೇಶ್ವರ 1 ಕ್ಷೇತ್ರದಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಮಚಂದ್ರ ಕುಂಪಲ ಮತ್ತು ಸೋಮೇಶ್ವರ -2ರಲ್ಲಿ ರವಿಶಂಕರ್ ಸೋಮೇಶ್ವರ ಆಯ್ಕೆಯಾದರೆ. ಬಂಟ್ವಾಳ ತಾಲೂಕು ಪಂಚಾಯತ್ ಕ್ಷೇತ್ರದಲ್ಲಿ ಪಜೀರು – ಕುರ್ನಾಡು ಕ್ಷೇತ್ರದಲ್ಲಿ ನವೀನ್ ಪೂಜಾರಿ ಪಾದಲ್ಪಾಡಿ ಮತ್ತು ತುಂಬೆ ಕ್ಷೇತ್ರದಲ್ಲಿ ಗಣೇಶ್ ಸುವರ್ಣ ಆಯ್ಕೆಯಾಗಿದ್ದಾರೆ.

ಕ್ಷೇತ್ರ ಪುನರ್‍ವಿಂಗಡನೆ ಬಿಜೆಪಿಗೆ ಹಿನ್ನಡೆ :

ಈ ಬಾರಿ ಕ್ಷೇತ್ರ ಪುನರ್‍ವಿಂಗಡನೆಯಿಂದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕ್ಷೇತ್ರದಲ್ಲಿ ಕಾಂಗ್ರೆಸ್‍ಗಿಂತ ಬಿಜೆಪಿಗೆ ಹಿನ್ನಡೆಯಾಗಿದೆ, ಈ ಹಿನ್ನಡೆ ಮತಗಳ ಅಂತರದಲ್ಲೂ ವ್ಯತ್ಯಾಸಗಳು ಕಂಡು ಬಂದಿದೆ. ಈ ಹಿಂದೆ ಕೋಟೆಕಾರು ಪಂಚಾಯತ್ ಈಗಿನ ಸೋಮೇಶ್ವರ ಜಿಲ್ಲಾ ಪಂಚಾಯತ್‍ನಲ್ಲಿತ್ತು. ಪಟ್ಟಣ ಪಂಚಾಯತ್ ಆಗಿ ಕೋಟೆಕಾರು ಪುನರ್‍ವಿಂಗಡನೆಯಾಗಿದ್ದರಿಂದ ಎರಡು ತಾಲೂಕು ಪಂಚಾಯತ್ ಕ್ಷೇತ್ರ ಕಳಕೊಂಡಿದ್ದು ಬಿಜೆಪಿಗೆ ದೊಡ್ಡ ನಷ್ಟವಾಗಿದೆ. ಜಿಲ್ಲಾ ಪಂಚಾಯತ್‍ನಲ್ಲಿ 2500ಗಿಂತ 517 ಮತಗಳ ಅಂತರದಿಂದ ಬಿಜೆಪಿ ಜಯಗಳಿಸಿದರೆ. ಕುರ್ನಾಡು ಕ್ಷೇತ್ರದಲ್ಲಿ ಎರಡಂಕಿ ಇದ್ದ ಅಂತರ ಮೂರಂಕಿಗೆ ಏರಿದೆ. ಉಳಿದಂತೆ ಕೊಣಾಜೆ, ಪುದು ಕ್ಷೇತ್ರದಲ್ಲೂ ಈ ಅಂತರ ವ್ಯತ್ಯಾಸವಾಗಿದೆ. ಕೆಲವೆಡೆ ಹೊಸ ಮತದಾರರ ಸೇರ್ಪಡೆಯಾದರೆ ಕೆಲವೆಡೆ ಕ್ಷೇತ್ರ ಪುನರ್‍ವಿಂಗಡನೆಯಿಂದ ಬಿಜೆಪಿಗೆ ಮತ್ತು ಕಾಂಗ್ರೆಸ್‍ನ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದೆ.

ಕೊಣಾಜೆ ಕ್ಷೇತ್ರ ಜಿಲ್ಲೆಯಲ್ಲಿ ಹೆಚ್ಚು ಅಂತರದ ವಿಜಯ
ಪಡೆದ ಮತಗಳು
ಪೂರ್ಣಿಮಾ ಶೆಟ್ಟಿ (ಬಿಜೆಪಿ)6443
ರಶೀದಾ ಬಾನು (ಕಾಂಗ್ರೆಸ್ ) 10, 981
ಸುಹೈಲಾ ಉಸ್ಮಾನ್ : ಜೆಡಿಎಸ್ (1150)
ನೋಟಾ ( 297)

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೇಪುಣಿಯವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಬಾಳೇಪುಣಿ ದತ್ತಿನಿಧಿ ಪ್ರತಿಭಾ ಪುರಸ್ಕಾರ

June 27, 2026

ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠಕ್ಕೆ ಆನಂದ ಕೆ. ಅಸೈಗೋಳಿ ನೂತನ ಸದಸ್ಯರಾಗಿ ನೇಮಕ

June 26, 2026

ಬಹುಮುಖ ಪ್ರತಿಭೆಯ ಸುರೇಶ್ ಕೆ. ರಾವ್ ಅವರಿಗೆ ಪ್ರತಿಷ್ಠಿತ ಡಾ. ವಿಷ್ಣುವರ್ಧನ್ ಪ್ರಶಸ್ತಿ

June 25, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
KARNATAKA

ಸಂಸ್ಕಾರ ಮತ್ತು ಉತ್ತಮ ನಡವಳಿಕೆಯಿಂದ ಅತ್ಯುತ್ತಮ ನಾಯಕರಾಗಿ ಮೂಡಿ ಬರಲು ಸಾಧ್ಯ – ಎ ಸಿ ಪಿ ವಿಜಯಕ್ರಾಂತಿ

By UllalaVaniJune 27, 20260

ಹರೇಕಳ : ಒಳ್ಳೆಯ ಸಂಸ್ಕಾರ, ಉತ್ತಮ ವ್ಯಕ್ತಿತ್ವ, ಉತ್ತಮ ಮಾತುಗಾರಿಕೆ ಹಾಗು ಕಠಿಣ ಪರಿಶ್ರಮದಿಂದ ಅತ್ಯುತ್ತಮ ನಾಯಕರಾಗಿ ಮೂಡಿಬರಲು ಸಾಧ್ಯ…

ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೇಪುಣಿಯವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಬಾಳೇಪುಣಿ ದತ್ತಿನಿಧಿ ಪ್ರತಿಭಾ ಪುರಸ್ಕಾರ

June 27, 2026

ಕರ್ನಾಟಕ ವಿಧಾನ ಪರಿಷತ್ ನೂತನ ಶಾಸಕರಿಗೆ ಯುವ ಕಾಂಗ್ರೆಸ್ ವತಿಯಿಂದ ಸನ್ಮಾನ

June 27, 2026

ಉರ್ವ ಸಂತ ಅಲೋಶಿಯಸ್ ಇಂಗ್ಲೀಷ್‌ ಮೀಡಿಯಂ ಸ್ಕೂಲ್ ನಲ್ಲಿ ಕಂಪ್ಯೂಟರ್ ಕ್ಲಬ್ ಉದ್ಘಾಟನೆ

June 27, 2026
1 2 3 … 1,987 Next
Automatic YouTube Gallery

ಕೋಟೆಕಾರು ರಾಮಾಶ್ರಯ ರಸ್ತೆ ಉದ್ಘಾಟಿಸಿದ ಹರ್ಷರಾಜ್‌ ಮುದ್ಯ

ಒಂದೇ ರಸ್ತೆ ಎರಡು ಬಾರಿ ಉದ್ಘಾಟನೆ

ಬಿಜೆಪಿ , ಕೋಟೆಕಾರು ಪ.ಪಂ ಅಧ್ಯಕ್ಷರ ವಿರುದ್ಧ ಪ್ರತ್ಯಾರೋಪ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೋಟೆಕಾರು ರಾಮಾಶ್ರಯ ರಸ್ತೆ ಉದ್ಘಾಟಿಸಿದ ಹರ್ಷರಾಜ್‌ ಮುದ್ಯ
Now Playing
ಕೋಟೆಕಾರು ರಾಮಾಶ್ರಯ ರಸ್ತೆ ಉದ್ಘಾಟಿಸಿದ ಹರ್ಷರಾಜ್‌ ಮುದ್ಯ
ಒಂದೇ ರಸ್ತೆ ಎರಡು ಬಾರಿ ಉದ್ಘಾಟನೆ ಬಿಜೆಪಿ , ಕೋಟೆಕಾರು ಪ.ಪಂ ಅಧ್ಯಕ್ಷರ ವಿರುದ್ಧ ...
ಒಂದೇ ರಸ್ತೆ ಎರಡು ಬಾರಿ ಉದ್ಘಾಟನೆ

ಬಿಜೆಪಿ , ಕೋಟೆಕಾರು ಪ.ಪಂ ಅಧ್ಯಕ್ಷರ ವಿರುದ್ಧ ಪ್ರತ್ಯಾರೋಪ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
೫ ಲಕ್ಷ  ರೂ.  ಅನುದಾನದಲ್ಲಿ ಕಾಂಕ್ರೀಟಿಕರಣಗೊಂಡ ರಾಮಾಶ್ರಯ ರಸ್ತೆಯ ಉದ್ಘಾಟನೆ
Now Playing
೫ ಲಕ್ಷ ರೂ. ಅನುದಾನದಲ್ಲಿ ಕಾಂಕ್ರೀಟಿಕರಣಗೊಂಡ ರಾಮಾಶ್ರಯ ರಸ್ತೆಯ ಉದ್ಘಾಟನೆ
ಕೋಟೆಕಾರು ಪಟ್ಟಣ ಪಂಚಾಯತ್‌ನ ೧೧ನೇ ವಾರ್ಡಿನ ಶ್ರೀ ರಾಮಾಶ್ರಯ ರಸ್ತೆಯ ಉದ್ಘಾಟನೆ 📍 ...
ಕೋಟೆಕಾರು ಪಟ್ಟಣ ಪಂಚಾಯತ್‌ನ ೧೧ನೇ ವಾರ್ಡಿನ ಶ್ರೀ ರಾಮಾಶ್ರಯ ರಸ್ತೆಯ ಉದ್ಘಾಟನೆ



📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay ...
connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version