ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಸೋಮೇಶ್ವರದಲ್ಲಿ ಧನಲಕ್ಷ್ಮೀ ಗಟ್ಟಿ 517 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರೆ, ಕುರ್ನಾಡಿನಲ್ಲಿ ಕಾಂಗ್ರೆಸ್ನ ಮಮತಾ ಗಟ್ಟಿ ಹಾಗೂ ಕೊಣಾಜೆಯಲ್ಲಿ ರಶೀದಾ ಭಾನು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ತಾಲೂಕು ಪಂಚಾಯಿತಿನಲ್ಲಿ ಸೋಮೇಶ್ವರ 1- ಬಿಜೆಪಿಯ ರಾಮಚಂದ್ರ ಕುಂಪಲ, ಸೋಮೇಶ್ವರ 2- ಬಿಜೆಪಿಯ ರವಿಶಂಕರ್ ಸೋಮೇಶ್ವರ , ಮುನ್ನೂರು- ವಿಲ್ಫ್ರೆಡ್ ವಿಲ್ಮಾ ಡಿಸೋಜಾ, ಅಂಬ್ಲಮೊಗರು-ಹರೇಕಳ ಕಾಂಗ್ರೆಸ್ ನ ಪ್ರಭಾ.ಡಿ.ಶೆಟ್ಟಿ

ಕುರ್ನಾಡು- ಪಜೀರು : ಬಿಜೆಪಿಯ ನವೀನ್ ಪಾದಲ್ಪಾಡಿ 12 ಮತಗಳ ಅಂತರ, ಬಾಳೆಪುಣಿ- ಕೈರಂಗಳ : ಹೈದರ್ ಕೈರಂಗಳ 403 ಮತಗಳ ಅಂತರ, ಇರಾ -ನರಿಂಗಾನ: ಚಂದ್ರಹಾಸ್ ಕರ್ಕೇರ
ಕೊಣಾಜೆ : ಕಾಂಗ್ರೆಸ್ ನ ಪದ್ಮಾವತಿ .ಯಸ್ , ಬೆಳ್ಮ-ನೂರ್ ಜಹಾನ್, ತಲಪಾಡಿ-ಕಿನ್ಯಾ: ಸಿದ್ಧೀಕ್ , ಮಂಜನಾಡಿ -ಸುರೇಖಾ ಚಂದ್ರಹಾಸ್ ಗೆಲುವು ಸಾಧಿಸಿದ್ದಾರೆ.











