ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಮೀನುಗಾರಿಕೆ ನಡೆಸುತ್ತಿರುವಾಗ ಬೋಟ್ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಉಳ್ಳಾಲ ಮೊಗವೀರಪಟ್ಣ ನಿವಾಸಿ ರಾಜ್ಯ ಪ್ರಶಸ್ತಿ ಪುರಸ್ಕøತ ಜೀವರಕ್ಷಕ ಈಜುಗಾರ ಜಯಂತ ಸಾಲಿಯಾನ್(48) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ತಿಂಗಳ ಹಿಂದೆ ತನ್ನದೇ ಪಾಲುದಾರಿಕೆಯ ಬೋಟ್‍ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬೋಟ್‍ನಲ್ಲಿದ್ದ ಕಂಬ ತುಂಡಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಉಸ್ತಾದ್ ದಿ.ವೀರಪ್ಪ ಪುತ್ರನ್ ಅವರ ಪುತ್ರರಾಗಿದ್ದ ಅವರು ಕಬಡ್ಡಿ ಆಟಗಾರರಾಗಿದ್ದರು.
ಬ್ರದರ್ಸ್ ಸ್ಪೋರ್ಟ್ ಕ್ಲಬ್, ಶ್ರೀ ಮಾರುತಿ ವ್ಯಾಯಾಮ ಶಾಲೆಯ ಸಕ್ರೀಯರಾಗಿದ್ದ ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


