ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಉಳ್ಳಾಲ ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ದ್ವಾರದ ಮುಖಮಂಟಪ ಶಿಖಿರ ಗೋಪುರದ ಪಾದುಕನ್ಯಾಸವು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ವೆಂಕಟಕೃಷ್ಣ ಅಡಿಗರ ನೇತೃತ್ವದಲ್ಲಿ ವೈಧಿಕ ವಿಧಿ ವಿಧಾನದೊಂದಿಗೆ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ಪದ್ಮಶಾಲಿ ಸಮಾಜದ ಅಧ್ಯಕ್ಷ ನ್ಯಾಯವಾದಿ ವಿಜಯ್ ಕುಮಾರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದೇರಳಕಟ್ಟೆ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ನಿರ್ದೇಶಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಉಪಾಧ್ಯಕ್ಷ ಸುರೇಶ್ ಭಟ್ನಗರ, ನಿವೃತ್ತ ಸೇನಾನಿ ಕೃಷ್ಣಗಟ್ಟಿ ಸೋಮೇಶ್ವರ, ಧಾರ್ಮಿಕ ಪರಿಷತ್ತು ಸದಸ್ಯ ಮಹಾಬಲ ಚೌಟ, ಕಾರ್ತಿಕ್ ಕರ್ಕೇರ ಮೊಗವೀರ ಪಟ್ಣ ಉಳ್ಳಾಲ, ಕಿಶೋರ್ ಡಿ. ಶೆಟ್ಟಿ, ಲೀಡ್ಸ್ ಗ್ರೂಪ್ ಮಂಗಳೂರು. ಪ್ರಧಾನ ಕಾರ್ಯದರ್ಶಿ ಐತಪ್ಪ ನೆಟ್ಟಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸೀತಾರಾಮ ದಂಪತಿ ಮುಳಿಹಿತ್ಲು ಮಂಗಳೂರು ಇವರು ವಿಜ್ಞಾಪನ ಪತ್ರವನ್ನು ಬಿಡುಗಡೆ ಮಾಡಿದರು. ಪದ್ಮಶಾಲಿ ಸಮಾಜದ ಕಾರ್ಯದರ್ಶಿ ನಾಗಪ್ಪ ನೆಟ್ಟಿಗಾರ ವಂದಿಸಿದರು.
ಚೆಲುವಯ್ಯ ನೆಟ್ಟಿಗಾರ ಕುಂಪಲ ಕಾರ್ಯಕ್ರಮ ನಿರೂಪಿಸಿದರು.


