ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಬರಹಗಾರನೊಬ್ಬ ಸ್ವಲ್ಪ ಪ್ರಸಿದ್ಧಿಗೆ ಬಂದೊಡನೆ ಬರೆಯುವುದಷ್ಟೇ ತನ್ನ ಕೆಲಸ, ಮಿಕ್ಕದ್ದೆಲ್ಲವೂ ಬೇರೆಯವರ ಕೆಲಸ ಎಂಬ ಭಾವನೆಯಲ್ಲಿ ಬದುಕುತ್ತಿದ್ದು ಅಂತಹ ಮನೋಭಾವನೆ ಎಲ್ಲರ ಮನದಿಂದ ದೂರವಾಗಬೇಕು ಎಂದು ದೇಸಿ ಚಿಂತಕರು ಮತ್ತು ಸುಸ್ಥಿರ ಜೀವನ ಪ್ರತಿಪಾದಕರು ಹಾಗೂ ಪ್ರಸಿದ್ಧ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರ ಮತ್ತು ನಿಟ್ಟೆ ವಿಶ್ವವಿದ್ಯಾಲಯ ಜಂಟಿ ಆಶ್ರಯದಲ್ಲಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ಸೋಮವಾರ ನಡೆದ `ಕನಕ ತತ್ವ ಚಿಂತನ’ ಪ್ರಚಾರೋಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ `ಬ್ರೆಡ್ ಲೇಬರ್’ ವಿಷಯದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಮನುಷ್ಯ ತನ್ನ ಕೆಲಸ, ಜಾತಿಗೆ ಅಂಟಿಕೊಂಡಿದ್ದು ಇತರ ಜಾತಿ ಕೆಲಸಗಳನ್ನು ಹಗುರವಾಗಿ ಕಾಣುತ್ತಿದ್ದಾನೆ. ಅದು ಎಲ್ಲರಿಂದ ದೂರ ಸರಿಯಬೇಕು. ಸಮಾಜಕ್ಕೆ ಎಲ್ಲರೂ ಒಳ್ಳೆಯ ಕಾರ್ಯಗಳನ್ನೇ ಮಾಡುತ್ತೇವೆ. ಆದರೆ ಕೆಲವರು ಬುದ್ಧಿ ಕೆಲವರು e್ಞÁನದ ಮೂಲಕ ಕೆಲಸ ಮಾಡುತ್ತಾರೆ ಎಂದು ನಾವು ಅಂದುಕೊಂಡಿದ್ದೇವೆ. ಮನುಷ್ಯ ದೈಹಿಕ ಕೆಲಸವನ್ನು ಮಾಡುತ್ತಾ ಮಾಡುತ್ತಾ ಅನುಭವ ಗಳಿಸುತ್ತಾನೆ. ಜೊತೆಗೆ e್ಞÁನವನ್ನು ಸಂಪಾದಿಸುತ್ತಾನೆ. e್ಞÁನ ಹಾಗೂ ಅರಿವಿನಿಂದ ಕೂಡಿದ ಕೆಲಸ ಮನುಷ್ಯನನ್ನು ಆರೋಗ್ಯಕರವಾಗಿಡಲು ಸಾಧ್ಯ ಎಂದು ನುಡಿದರು.
ದೈಹಿಕ ಶ್ರಮಜೀವಿಯಲ್ಲೂ e್ಞÁನವಿದೆ, ಕೌಶಲ್ಯವಿದೆ. ಶಸ್ತ್ರ ಚಿಕಿತ್ಸೆ ನಡೆಸುವ ಸರ್ಜನ್ ಕೈಯಲ್ಲೂ e್ಞÁನ ಹಾಗೂ ಕೌಶಲ್ಯವಿದೆ. ಹಾಗಾಗಿ ಶ್ರಮಜೀವಿಯ ಬದುಕಿನಲ್ಲೂ ನಾವು e್ಞÁನ ಹಾಗೂ ಕೌಶಲ್ಯ ಕಾಣಲು ಸಾಧ್ಯವಿದ್ದು ಬದುಕು ಸಂತವಾಗಿರಬೇಕಾದರೆ ನಮ್ಮ ಗಳಿಕೆಯ ಕಡೆಗೆ ಹೆಚ್ಚಿನ ಗಮನ ಕೊಡದರೆ ನಮ್ಮ ಮಾನಸಿಕ ನೆಮ್ಮದಿ ಕಾಪಾಡಲು ಪ್ರಯತ್ನಿಸಬೇಕು ಹೊರತು ಮಾರುಕಟ್ಟೆಯನ್ನು ತೃಪ್ತಿಪಡಿಸುವುದು ಮಾತ್ರ ಬದುಕಲ್ಲ ಎಂದು ಎಚ್ಚರಿಸಿದರು.
ಮನುಷ್ಯನ ಬಯಕೆಗೆ ಅಂತ್ಯವಿಲ್ಲ. ಆದರೆ ಪ್ರಾಣಿಗಳಿಗೆ ತಮ್ಮ ಬಯಕೆಗಳು ಇಷ್ಟೇ ಇರಲಿ ಎಂಬ ನಿಯಂತ್ರಣ ಹೊಂದಿದೆ. ಯಾಕೆಂದರೆ ಪ್ರಸ್ತುತ ದಿನಗಳಲ್ಲಿ ಮನುಷ್ಯ ಕೇವಲ ಸಂಪತ್ತು ಗಳಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಮಾನಸಿಕ ನೆಮ್ಮದಿಯನ್ನು ಕೆಳದುಕೊಳ್ಳುತ್ತಿದ್ದಾನೆ. ಹಾಗಾಗಿ ತನ್ನ ಕುಟುಂಬ ಸದಸ್ಯರ ಜೊತೆಗೂ ಕಾಲಕಳೆಯುವಲ್ಲಿ ವಂಚಿತನಾಗುತ್ತಿರುವುದು ದುರಂತ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕ ಡಾ. ಬಿ.ಶಿವರಾಮ ಶೆಟ್ಟಿ ಸೇನಾದಂಡನಾಯಕನಾಗಿದ್ದ ಕನಕರು ಯೋಧತ್ವದಿಂದ ದಾಸತ್ವದೆಡೆಗೆ ಪರಿವರ್ತಿತರಾಗಿ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಕಾರಣಕರ್ತರಾದರು. ಆಧುನಿಕ ಚಿಂತಕರು ಕನಕದಾಸ ತತ್ವ ಸಿದ್ಧಾಂತಗಳನ್ನು ಪ್ರತಿಪಾದಿಸಿಕೊಂಡು ಸಾಗುತ್ತಾ ಕ್ರಾಂತಿಕಾರಿ ಬೆಳವಣಿಗೆ ತರುವಲ್ಲಿ ಯಶಸ್ವಿಯಾದರು. ಆ ಕಾರಣದಿಂದಲೇ ಜಾತಿ, ಮತ, ಪಂಗಡಗಳ, ಲಿಂಗ ತಾರತಮ್ಯದಿಂದ ಶಿಕ್ಷಣ ವಂಚಿತರಾದವರೂ ಶಿಕ್ಷಣ ಪಡೆಯುವ ಅವಕಾಶ ಲಭಿಸಿತು ಎಂದು ನುಡಿದರು. ನಿಟ್ಟೆ ವಿಶ್ವವಿದ್ಯಾಲಯ ಕುಲಸಚಿವ ಡಾ. ಎಂ.ಎಸ್. ಮೂಡಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಸನ್ನ ಹೆಗ್ಗೋಡು ಅವರೊಂದಿಗೆ ವಿದ್ಯಾರ್ಥಿಗಳು ಹಾಗೂ ನಿಟ್ಟೆ ವಿವಿಯ ಸಿಬ್ಬಂದಿಗಳು ಸಂವಾದ ನಡೆಸಿದರು.
ಕ್ಷೇಮ ಸಿಬ್ಬಂದಿ ಯಶೋದ ಪ್ರಾರ್ಥಿಸಿದರು. ಭಾಗ್ಯಶ್ರೀ ಭಂಡಾರಿ ಸ್ವಾಗತಿಸಿದರು. ಕ್ಷೇಮ ಸಿಬ್ಬಂದಿ ಡಾ. ಸಾಯಿಗೀತಾ ಕಾರ್ಯಕ್ರಮ ನಿರೂಪಿಸಿದರು.


