ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಪಜೀರು: ಬೈಕ್ ಅಪಘಾತಕ್ಕೀಡಾಗಿ ಸಹಸವಾರ ಮೃತಪಟ್ಟಿರುವ ಘಟನೆ ಪಜೀರು ಗ್ರಾಮದ ಕಂಬ್ಲಪದವು ಎಂಬಲ್ಲಿ ಗುರುವಾರ ತಡರಾತ್ರಿ ವೇಳೆ ಸಂಭವಿಸಿದೆ.
ಸಹಸವಾರ ಮುಡಿಪು ನಿವಾಸಿ ಯೋಗೀಂದ್ರ(35) ಮೃತರು. ದೇರಳಕಟ್ಟೆಯಿಂದ ಮುಡಿಪು ಕಡೆಗೆ ತೆರಳುತ್ತಿದ್ದ ಎ.ಪಿ.ಅಶ್ರಫ್ ಎಂಬವರ ಬೈಕಿನಲ್ಲಿ ಯೋಗೀಂದ್ರ ಅವರು ಪ್ರಯಾಣಿಸುತ್ತಿದ್ದರು. ಕಂಬ್ಲಪದವು ಬಳಿ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಬೈಕ್ ರಸ್ತೆಯ ಎಡ ದಿಕ್ಕಿನಲ್ಲಿ ಹಾಕಲಾಗಿದ್ದ ಮಣ್ಣಿನ ದಿಬ್ಬಕ್ಕೆ ಡಿಕ್ಕಿ ಹೊಡೆದು ಮಗುಚಿಬಿದ್ದ ಪರಿಣಾಮ ಯೋಗೀಂದ್ರ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಸ್ಥಳೀಯ ಪರಮೇಶ್ವರ್ ಎಂಬವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದರು. ಆದರೆ ಯೋಗೀಂದ್ರ ದಾರಿಮಧ್ಯೆ ಮೃತಪಟ್ಟಿದ್ದಾರೆ. ಕೊಣಾಜೆ ಠಾಣೆಯಲ್ಲಿ ಬೈಕ್ ಸವಾರ ಅಶ್ರಫ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.




