ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಚಾಲಕನ ನಿಯಂತ್ರಣ ತಪ್ಪಿದ ಡಸ್ಟರ್ ಕಾರೊಂದು ಚರಂಡಿಗಾಗಿ ಅಗೆಯಲಾಗಿದ್ದ ಹೊಂಡಕ್ಕೆ ಬಿದ್ದಿರುವ ಘಟನೆ ಉಳ್ಳಾಲದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಘಟನೆಯಲ್ಲಿ ಕೇರಳ ಮೂಲದ ಹೆಲ್ಫಿನ್ (34)ಗಂಭೀರ ಗಾಯಗೊಂಡಿದ್ದು, ಸಹಸವಾರನಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಳ್ಳಾಲದಿಂದ ಕೇರಳದ ಕಡೆಗೆ ತೆರಳುತ್ತಿದ್ದ ಕಾರು ಚಾಲಕ ರಾತ್ರಿ ವೇಳೆ ಚರಂಡಿಗಾಗಿ ಅಗೆಯಲಾಗಿದ್ದ ಹೊಂಡವನ್ನು ಗಮನಿಸದೇ ಕಾರು ಚಲಾಯಿಸಿದ್ದೇ ಅಪಘಡ ಸಂಭವಿಸಲು ಕಾರಣವಾಗಿದೆ.
ಕಾಮಗಾರಿಯ ವೇಳೆ ಇಂತಹ ಅಪಘಢಗಳು ಸಂಭವಿಸದಂತೆ ಗುತ್ತಿಗೆದಾರರು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


