ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಶಿಕ್ಷಣ ನೀಡುವ ಕೇಂದ್ರಗಳು ಬೆಳೆಯತ್ತಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬದುಕು ಕಟ್ಟಿಕೊಳ್ಳುವ ಅವಕಾಶವಾಗುತ್ತಿದೆ.
ಜಾತಿಧರ್ಮದ ಎಲ್ಲೆ ಮೀರಿ ಸೌಹಾರ್ದತೆ ಸಾರುವ ಶಿಕ್ಷಣ ಸಂಸ್ಥೆಗಳಿಗೆ ಜನತೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಕರಾವಳಿ ಕಾಲೇಜಿನ ಅಧ್ಯಕ್ಷರಾದ ಎಸ್.ಗಣೇಶ್ ರಾವ್ ಹೇಳಿದ್ದಾರೆ.ಅವರು ಹರೇಕಳದ ನಿಶಾರ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.
ನಿಶಾರ ಪದವಿ ಪೂರ್ವಕಾಲೇಜಿನ ನೂತನ ಕಟ್ಟಡವನ್ನು ವಾರ್ತಾಭಾರತಿಯ ಚೇರ್ಮೇನ್ ಜ|ಸೈಯದ್ ಖಲೀಲ್ ಸಾಹೇಬ್ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಪತ್ರಕರ್ತರಾದ ಶÀಶಿಧರ್ ಪೊಯ್ಯತ್ತಬೈಲ್ ಮತ್ತು ಉದ್ಯಮಿ ಮನ್ಸೂರ್ ಅಹ್ಮದ್ ಅವರನ್ನು ಗೌರವಿಸಲಾಯಿತು. ಸಂದೇಶ ಪ್ರತಿಷ್ಟಾನದ ಫಾ|ವಿಕ್ಟರ್ ವಿಜಯ್ ಲೋಬೋ ಅತಿಥಿಯಾಗಿದ್ದರು. ಸಭಾದ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚÉೀರ್ ಮೇನ್ ಹಾಜಿ| ಅಬ್ದುಲ್ ರಜಾಕ್ ಮಾತನಾಡಿ ಮುಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯ ಇರಾದೆ ಹೈದ್ರೋಸ್ ಹಾಜಿ ಟ್ರಸ್ಟಿಗೆ ಇದೆ ಎಂದರು.
ಶಾಲಾ ಸಂಚಾಲಕಿ ಶ್ರೀಮತಿ ಶೆಹನಾಜ್ ಎ. ರಝಾಕ್, ಪ್ರಾಂಶುಪಾಲರಾದ ರನುಮಂಡಲ್ ಸರ್ಕಾರ್, ಶ್ರೀಮತಿ ವೇದಾವತಿ ಪ್ರಶಾಂತ್ ವಿದ್ಯಾರ್ಥಿ ಸಂಘದ ನಾಯಕ ಶಾನ್ ಜಾನ್ಸನ್ ಮೊಂತೆರೋ ಉಪಸ್ಥಿತರಿದ್ದರು. ಇಸ್ಮಾಯಿಲ್ ಮೂಡುಶೆಡ್ಡೆ ಸ್ವಾಗತಿಸಿದರು, ಭುವನಾ ಶಶಿಧರ್ ಧನ್ಯವಾದವಿತ್ತರು, ನೌಶಿನಾ ಕಾರ್ಯಕ್ರಮ ನಿರೂಪಿಸಿದರು.


