ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಹಳೆಕೋಟೆ: ಹಳೆಕೋಟೆಯ ಮಸ್ಜಿದ್ ಅಲ್-ಕರೀಂ ಮತ್ತು ಹಳೆ ವಿದ್ಯಾರ್ಥಿ ಸಂಘ ಹಾಗೂ ಮರ್ಖಲ್ ಇಸ್ಲಾಂ ಮದರಸ ಇದರ ಜಂಟಿ ಅಶ್ರಯದಲ್ಲಿ ಮೀಲಾದುನ್ನೆಬಿ ಕಾರ್ಯಕ್ರಮ ಮತ್ತು ಹಳೆ ವಿದ್ಯಾರ್ಥಿ ಸಂಘ 24ನೇ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಸೈಯದ್ ಮದನಿ ಉರ್ದು ಅನುದಾನಿ ಶಾಲಾ ವಠಾರದಲ್ಲಿ ನಡೆಯಿತು.
ಸೂಲಗಿತ್ತಿ ಪರಮೇಶ್ವರಿ, ಸುಧೀರ್ಘ 15ವರ್ಷ ಸೇವೆಸಲ್ಲಿಸಿದ ಅದಂ ಮುಸ್ಲಿಯಾರ್, ಪ್ರಮಾಣಿಕ ಸೇವೆಗೈದ ಅಬ್ದುಲ್ ರಹ್ಮಾನ್ ಯು.ಎಚ್, ಗಾಯಕ ಬಾಲ ಪ್ರತಿಭೆ ಮಾಸ್ಟರ್ ಸಲ್ಮಾನ್ ಪಾರಿಶ್ ಈ ಸಂಧರ್ಭ ಸನ್ಮಾನಿಸಲಾಯಿತು.
ಮಸ್ಜಿದ್ ಅಲ್-ಕರೀಂ ಖತೀಬ್ ಉಸ್ಮಾನ್ ಸಅದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಸ್ಜಿದ್ ಅಲ್-ಕರೀಂ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮೊಹಮ್ಮದ್ ತ್ವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಹಳೆಕೋಟೆಯ ಸೈಯದ್ ಮದನಿ ಉರ್ದು ಅನುದಾನಿತ ಶಾಲೆಯ ಮುಖ್ಯ ಶಿಕ್ಷಕ ಕೆ.ಎಂ.ಕೆ ಮಂಜನಾಡಿ, ಮಸ್ಜಿದ್ ಅಲ್-ಕರೀಂ ಜುಮಾ ಮಸೀದಿಯ ಉಪಾಧ್ಯಕ್ಷ ಯು.ಎಚ್ ಝೈನುದ್ದೀನ್, ಉದ್ಯಮಿ ಹಮೀದ್ ಕಣ್ಣೂರು, ಮರ್ಖಲ್ ಇಸ್ಲಾಂ ಮದರಸದ ಸದರ್ ಮುಹಲ್ಲಿಂ ಯು.ಡಿ ಇರ್ಫಾನ್ ಮದನಿ ಹರೇಕಳ, ಉಳ್ಳಾಲ ದರ್ಗಾ ಸಮಿತಿ ಸದಸ್ಯ ಯು.ಎಚ್ ಮೊಹಮ್ಮದ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಲ್ಯಾಸ್ ಹಾಜ್ಜಬ, ಸದಸ್ಯರಾದ ಸೈಯದ್ ಮುಸ್ತಾಫ, ಅಬ್ದುಲ್ ರವೂಫ್, ಅಲ್ತಾಫ್ ಯು.ಎಚ್ ಮುಂತಾದವರು ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಫೈರೂಝ್ ಯು.ಎಚ್ ಸ್ವಾಗತಿಸಿ, ಜೋತೆ ಕಾರ್ಯದರ್ಶಿ ಮುಝ್ಮಿಲ್ ವಂದಿಸಿದರು. ಮೊಹಮ್ಮದ್ ರಫೀಕ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು.


