ಹೊಸದಿಲ್ಲಿ : ವಿಮಾನ ಅಪಘಾತಕ್ಕೀಡಾಗಿ ೧೦ ಮಂದಿ ಬಿಎಸ್ಎಪ್ ಯೋಧರು ದಾರುಣವಾಗಿ ಸಾವನ್ನಪ್ಪ್ಪಿರುವ ಘಟನೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿ ದ್ವಾರಕಾ ಬಳಿ ಸಂಭವಿಸಿದೆ.
ಸೂಪರ್ ಕಿಂಗ್ ಹೆಸರಿನ ಬಿಎಸ್ ಎಫ್ ವಿಮಾನ ದೆಹಲಿಯಿಂದ ರಾಂಚಿಗೆ ತೆರಳುತ್ತಿತ್ತು. ಸೈನಿಕರು, ಸೇರಿದಂತೆ ಒಟ್ಟು 12 ಮಂದಿ ಇದ್ದರೆಂದು ಹೇಳಲಾಗುತ್ತಿದ್ದ ಈ ವಿಮಾನದಲ್ಲಿ ಬಿಎಸ್ ಎಫ್ ಕಮಾಂಡರ್ ಕೂಡ ಸಾವನ್ನಪ್ಪಿದ್ದಾರೆ. ಈ ವಿಮಾನದಲ್ಲಿ ಇಂಜಿನಿಯರಿಂಗ್ ವಿಭಾಗದ 10 ಮಂದಿ ಸೈನಿಕಾಧಿಕಾರಿಗಳು ಇದ್ದರು ಎಂದು ವರದಿಯಾಗಿದೆ.
ಈಗಾಗಲೇ ಎರಡು ಶವಗಳು ಪತ್ತೆಯಾಗಿದ್ದು, ಸ್ಥಳಕ್ಕೆ 15 ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ.
ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿರಬಹುದೆಂದು ಹೇಳಲಾಗುತ್ತಿದ್ದು, ಬೆಳಗ್ಗೆ 9.30 ರ ಸುಮಾರಿಗೆ ವಿಮಾನ ಗೊಡೆಯೊಂದಕ್ಕೆ ಅಪ್ಪಳಿಸಿದ್ದು ಈ ವೇಳೆ ಬೆಂಕಿ ಹೊತ್ತಿಕೊಂಡಿದೆ.
ಘಟನಾ ಸ್ಥಳಕ್ಕೆ ಗೃಹ ಸಚಿವ ರಾಜನಾಥ್ ಸಿಂಗ್ ಆಗಮಿಸಿದ್ದಾರೆ.


