ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮಂಗಳೂರು: ನಾಗಾರಾಧನೆಯ ಮೂಲಕೇಂದ್ರವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವರ್ಷಾಂಪ್ರತಿಯಂತೆ ಈ ಭಾರಿಯು ಕೂಡ ಚಂಪ ಷಷ್ಠಿಯು ಸಂಭ್ರಮದಲ್ಲಿ ಜರುಗಿತು.
ಚಂಪ ಷಷ್ಠಿಯ ಪ್ರಯುಕ್ತ ಜರುಗಿದ ವಾರ್ಷಿಕ ಬ್ರಹ್ಮರಥೋತ್ಸದಲ್ಲಿ ಸಾವಿರಾರು ಭಕ್ತರು ಭಾಗಹಿಸಿದ್ದರು. ಬೆಳಗ್ಗೆ ಮಂಗಳವಾದ್ಯ, ವೇದಘೋಷ, ಬ್ಯಾಂಡ್, ಶಂಖ, ಜಾಗಟೆ, ಸ್ಯಾಕ್ಸೋಫೋನ್, ಚೆಂಡೆಗಳ ನಿನಾದದಲ್ಲಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥಾರೋಹಣವಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ದೇವಸ್ಥಾನಗಳ ಪೈಕಿ ಸುಬ್ರಮಣ್ಯ ದೇವಸ್ಥಾನವು ಕೂಡ ಒಂದು. ಪ್ರಮುಖ ನಾಗಾರಾಧನೆಯ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ದೇವಾಲಯದಲ್ಲಿ ಚಂಪ ಷಷ್ಠಿಯ ಪ್ರಯುಕ್ತ ಮಡೆ ಸ್ನಾನ ನಡೆಯುತ್ತದೆ. ಭಕ್ತರು ಹರಕೆಯ ರೂಪದಲ್ಲಿ ಬ್ರಹ್ಮಾಣರು ಉಂಡ ಎಲೆಯ ಮೇಲೆ ಉರುಳು ಸೇವೆ ಮಾಡುವ ಮೂಲಕ ಹರಕೆಯನ್ನು ನೀಡುತ್ತಾರೆ. ಈ ಆಚರಣೆಯ ಬಗ್ಗೆ ಅಡೆ-ತಡೆಗಳಿದ್ದರೂ ಸಹ ಈ ಭಾರಿಯೂ ಪ್ರತಿ ವರ್ಷದಂತೆ ಈ ಭಾರಿಯು ಕೂಡ ಮಡೆ ಸ್ನಾನವನ್ನು ಆಚರಿಸಲಾಯಿತು.
ಅತ್ಯಂತ ಸಂಭ್ರಮ ಸಡಗರದ ಜೊತೆ ನಡೆಯುವ ಸುಬ್ರಮಣ್ಯ ಚಂಪ ಷಷ್ಥಿಯ ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾದರು.





