Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಗ್ರಾಮ

ಮುಗಿಯಿತು ದೀಪಾವಳಿ ಹಬ್ಬ ಬಂದಿದೆ ತುಳಸಿಹಬ್ಬ…..

UllalaVaniBy UllalaVaniNovember 23, 2015Updated:November 23, 2015No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಲೇಖನ: ವಜ್ರಾ ಗುಜರನ್ ಮಾಡೂರು

ಚಿತ್ರ: ಕೂಲ್ ಡಿಸೈನರ್ಸ್ ಫೋಟೋಗ್ರಾಫಿ(ಮುನ್ನ ಕೂಲ್)

ಸಾಲು ಸಾಲು ದೀಪಗಳ ಜೊತೆಗೆ ಬಾಂಧವ್ಯವನ್ನು ವೃದ್ಧಿಸುವ ದೀಪಾವಳಿ ಹಬ್ಬ ಮುಗಿದು ವಾರ ಕಳೆಯುವುದರೊಳಗಾಗಿ ಅದೇ ಹಬ್ಬವನ್ನು ನೆನಪು ಮಾಡುವ ಕಿರು ದೀಪಾವಳಿ ಮತ್ತೆ ಬಂದಿದೆ. ಅದೇ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ತುಳಸಿ ಪೂಜೆ. ಎಲ್ಲ ಹಬ್ಬದಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುವ ಈ ಹಬ್ಬವನ್ನು ಹಿಂದು ಸಂಪ್ರದಾಯದಂತೆ ಪ್ರತೀವರ್ಷ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತದೆ. ಪವಿತ್ರವಾದ ತುಳಸಿಯನ್ನು ಪೂಜಿಸುವುದು ಈ ದಿನದ ವಿಶೇಷತೆಗಳಲ್ಲಿ ಒಂದಾಗಿದೆ.

ಭಗವಂತನನ್ನು ಬರಮಾಡಿಕೊಳ್ಳುವುದು :
ಕಾರ್ತಿಕ ಮಾಸದ ಹಬ್ಬಗಳಲ್ಲಿ ಅತ್ಯಂತ ಪವಿತ್ರವಾದುದು ಉತ್ಥಾನ ದ್ವಾದಶಿ. ಉತ್ಥಾನ ಎಂದರೆ ಏಳುವುದು ಎಂದರ್ಥ. ಅಂದರೆ ಈ ದಿನದಂದು ಭಗವಂತನಾದ ನಾರಾಯಣನು ಹಾಲ್ಗಡಲಲ್ಲಿ ಸುಖಶಯನದಿಂದ ಮೇಲಕ್ಕೆದ್ದು, ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ಈ ದಿನವನ್ನು ಕ್ಷೀರಾಭಿವ್ರತದಿಂದ ಹಲವು ಕಡೆ ಆಚರಿಸುವರು. ಆದುದರಿಂದ ಈ ದಿನದಂದು ತುಳಸಿ ಕಟ್ಟೆಯ ಸುತ್ತಲೂ ರಂಗೋಲಿಯಿಂದ ಅಲಂಕರಿಸಿ ತಳಿರು ತೋರಣಗಳನ್ನು ಕಟ್ಟಿ ತುಳಸಿಯನ್ನು ಸಿಂಗರಿಸಿ ಭಗವಂತನನ್ನು ಬರಮಾಡಿಕೊಳ್ಳುವುದು ನಂಬಿಕೆಯಾಗಿ ಬಂದಿದೆ.

DSC_0096 copy

DSC_0128 copy

11 copy

DSC_0120 copy

DSC_0125 copyತುಳಸಿ ವಿವಾಹ:
ಸಾಮಾನ್ಯವಾಗಿ ಹಿಂದು ಧರ್ಮದಲ್ಲಿ ಹೆಚ್ಚಿನ ಮುತ್ತೈದೆಯರು, ಯುವತಿಯರು ಮುಂಜಾನೆ ಎದ್ದು ಸ್ನಾನ ಮಾಡಿ ತುಳಸಿ ಕಟ್ಟೆಗೆ ನೀರನ್ನು ಎರೆದು ಪೂಜೆಯನ್ನು ಮಾಡುವುದನ್ನು ನೋಡುತ್ತೇವೆ. ಆದರೆ ತುಳಸಿ ಪೂಜೆಯಂದು ಮನೆಮಂದಿಯೆಲ್ಲಾ ಸಂಜೆ ಅಥವಾ ಗೋದೂಳಿ ಸಮಯದಲ್ಲಿ ತುಳಸಿಯನ್ನು ಆರಾಧನೆ ಮಾಡುವುದು ಈ ಹಬ್ಬದ ಇನ್ನೊಂದು ವಿಶೇಷ. ತುಳಸಿ ಪೂಜೆಯನ್ನು ಶ್ರದ್ಧಾಭಕ್ತಿಯ ಪ್ರತೀಕವಾಗಿ ಆಚರಿಸಲಾಗುತ್ತದೆ. ಕೃಷ್ಣ ಹಾಗೂ ತುಳಸಿಯ ವಿವಾಹ ಈ ದಿನದಂದೇ ಆಯಿತು ಎಂಬ ನಂಬಿಕೆಯೂ ಇದೆ. ಆದ್ದರಿಂದ ಈ ದಿನದಂದು ತುಳಸಿಯನ್ನು ಮದುಮಗಳಂತೆ ಸಿಂಗರಿಸಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡಲಾಗುತ್ತದೆ.

ಅಮೃತದಿಂದ ಜನಿಸಿದವಳು:
ಆಚರಣೆಯ ಹಿಂದೆ ಆ ಹಬ್ಬದ ಬಗ್ಗೆ ಪ್ರತ್ಯೇಕವಾದ ಹಿನ್ನೆಲೆ ಇರುತ್ತದೆ. ತುಳಸಿ ಪೂಜೆಯ ಬಗ್ಗೆ ಹೇಳಬೇಕೆಂದರೆ ಪುರಾಣ ಗ್ರಂಥಗಳ ಪ್ರಕಾರ ಸಮುದ್ರ ಮಂಥನದ ಸಮಯದಲ್ಲಿ ರಾಕ್ಷಸರಿಗೂ, ದೇವತೆಗಳಿಗೂ ಅಮೃತಕ್ಕಾಗಿ ಪೈಪೋಟಿ ನಡೆಯುತ್ತಿರುತ್ತದೆ. ಇದೇ ಸಂದರ್ಭದಲ್ಲಿ ಅಮೃತ ಕಳಸವನ್ನು ಶ್ರೀ ವಿಷ್ಣು ಪಡೆದುಕೊಳ್ಳುತ್ತಾನೆ. ಆಗ ಆತನ ಕಣ್ಣಿನಿಂದ ಆನಂದಭಾಷ್ಪ ಉಕ್ಕಿ ಬರುತ್ತದೆ. ಇದರ ಒಂದು ಹನಿ ಕಳಶದಲ್ಲಿ ಬಿದ್ದಾಗ ಅದು ತುಳಸಿ ಗಿಡವಾಯಿತು. ಅಮೃತದಿಂದ ಜನಿಸಿದವಳು ತುಳಸಿಯಾದುದರಿಂದ ತುಳಸಿಯನ್ನು ಯಾವ ವಿಧವಾಗಿ ಪೂಜಿಸಿದರೂ ಸಹ ಅದು ಶ್ರೇಷ್ಠ ಎಂಬ ನಂಬಿಕೆ ಇದೆ. ಪವಿತ್ರಳಾದ ತುಳಸಿಯನ್ನು ಕಂಡರೆ ಶ್ರೀಮನ್ನಾರಾಯಣನಿಗೆ ಲಕ್ಷ್ಮೀಯಷ್ಟೇ ಪ್ರಿಯಳು ಎಂಬ ಮಾತೂ ಇದೆ. ಆದ್ದರಿಂದ ಸರ್ವಶೇಷ್ಠವಾದ ತುಳಸಿ ಪೂಜೆಯಿಂದ ಸರ್ವರಿಗೂ ಕೂಡ ಒಳಿತಾಗುತ್ತದೆ ಅನ್ನೋ ಬಲವಾದ ನಂಬಿಕೆ ಇದೆ.

ವೃಂದಾಳಿಂದ ಶಾಪ:
ಮಹಾನ್ ಪವಿತ್ರಳಾದ ವೃಂದಾಳು ಅಸುರನಾದ ಜಲಂಧರನ ಹೆಂಡತಿ. ಅಷ್ಟೇ ಅಲ್ಲದೆ ಈಕೆ ಹರಿಯ ಪರಮ ಭಕ್ತಳೂ ಕೂಡ. ದೇವತೆಗಳೆಂದರೆ ಸಹಿಸದ ಜಲಂಧರನು ಒಂದಲ್ಲ ಒಂದು ರೀತಿಯಲ್ಲಿ ದೇವತೆಗಳಿಗೆ ಹಿಂಸಿಸಿರುತ್ತಾನೆ. ರಾಕ್ಷಸನಾದ ಜಲಂಧರನ ಕಿರುಕುಳವನ್ನು ತಾಳಲಾರದೆ ದೇವತೆಗಳು ವಿಷ್ಣುವಿನ ಮೊರೆಹೊಗುತ್ತಾರೆ. ಜಲಂಧರನಿಗೆ ಸಾವು ಬರಬೇಕಾದರೆ ವೃಂದಾಳ ಪಾವಿತ್ರ್ಯತೆಗೆ ಧಕ್ಕೆ ಬರಬೇಕು. ಆದ್ದರಿಂದ ಜಲಂಧರ ಯುದ್ಧಕ್ಕೆ ಹೋದ ಸಂಧರ್ಭದಲ್ಲಿ ವಿಷ್ಣುವು ಜಲಂಧರನ ವೇಷದಲ್ಲಿ ವೃಂದಾಳಲ್ಲಿಗೆ ಬರುತ್ತಾನೆ. ತನ್ನ ಪತಿಯೆಂದು ತಿಳಿದ ವೃಂದಾ ವಿಷ್ಣುವಿನ ಜೊತೆ ಸೇರುತ್ತಾಳೆ. ಆದರೆ ಇದು ತನ್ನ ಪತಿಯಲ್ಲ ವಿಷ್ಣುವೆಂದು ತಿಳಿದ ವೃಂದಾ ಕೋಪಗ್ರಸ್ಥಳಾಗಿ ವಿಷ್ಣುವಿಗೆ ಶಾಪವನ್ನು ಕೊಡುತ್ತಾಳೆ. ಆದರೆ ವೃಂದಾ ಪಾವಿತ್ರ್ಯತೆ ಹಾಗೂ ಅವಳ ಭಕ್ತಿಗೆ ಹರಿಯು ಮುಂದಿನ ಜನ್ಮದಲ್ಲಿ ನೀನು ತುಳಸಿಯಾಗಿ ಹುಟ್ಟಿ ಅತ್ಯಂತ ಪವಿತ್ರಾಳಾಗು ಎಲ್ಲರೂ ನಿನ್ನನ್ನು ಪೂಜಿಸಲಿ ಎಂದು ವರವನ್ನು ಕರುಣಿಸುತ್ತಾನೆ ಅನ್ನೋದು ಪುರಾಣದಲ್ಲಿ ಉಲ್ಲೇಖವಾಗಿದೆ.

ತುಳಸಿಯ ಜೊತೆಗೆ ನೆಲ್ಲಿಕಾಯಿ ಸಿಂಗಾರ:
ಪ್ರತಿಯೊಂದು ಹಿಂದುಗಳ ಮನೆಯ ಅಂಗಳದಲ್ಲಿ ನೆಲೆಸಿರುವ ತುಳಸಿ ಬಹುಪಯೋಗಿ ಔಷಧಿಯ ಗಿಡಗಳಲ್ಲಿ ಒಂದು. ತುಳಸಿಯನ್ನು ಸಂಜೀವಿನಿಗೆ ಹೋಲಿಸಲಾಗಿದ್ದು, ಇದು ಹಿಂದುಗಳಿಗೆ ಪೂಜಿಸುವ ದೇವರಾದರೆ ಇತರ ಧರ್ಮದವರಿಗೆ ಔಷಧಿಯ ಗುಣವನ್ನು ಹೊಂದಿರುವ ಸಂಜೀವಿನಿ. ತುಳಸಿ ಹಬ್ಬ ಎಲ್ಲ ಮನೆಯಲ್ಲಿ ರಾತ್ರಿಯ ಹೊತ್ತಿನಲ್ಲಿ ಆಚರಿಸುವ ಕಾರಣ ಈ ದಿನದಂದು ತುಳಸಿಯನ್ನು ಚೆನ್ನಾಗಿ ತೊಳೆದು ಕಬ್ಬುಗಳಿಂದ ಸಿಂಗರಿಸಿ, ತಳಿರು-ತೋರಣವನ್ನು ಕಟ್ಟಿ ತುಳಸಿಕಟ್ಟೆಯ ಸುತ್ತಲೂ ಹೂವಿನ ಜೊತೆಗೆ ಸುತ್ತಲೂ ರಂಗೋಲಿಯನ್ನು ಬಿಡಿಸಿ ಸಂಜೆಯ ಹೊತ್ತಿಗಾಗುವಾಗ ತುಳಸಿಯ ಜೊತೆ ನೆಲ್ಲ್ಲಿಕಾಯಿಯನ್ನು ಕಟ್ಟುತ್ತಾರೆ. ತಳಿರು-ತೋರಣಗಳಿಂದ ಸಿಂಗರಿಸಿದ ತುಳಸಿಯ ಜೊತೆಗ ಶ್ರೀಕೃಷ್ಣನ ಫೋಟೋವನ್ನು ಇಟ್ಟು ಪೂಜಿಸಿದರೆ ಇನ್ನೂ ಉತ್ತಮ. ತುಳಸಿಯನ್ನು ಹೀಗೆಯೇ ಸಿಂಗರಿಸಬೇಕು ಎಂಬ ನಿಯಮವೇನಿಲ್ಲ. ಅವರವರ ಅನೂಕೂಲಕ್ಕೆ ತಕ್ಕದಾಗಿ ತುಳಸಿಯನ್ನು ಅಲಂಕರಿಸುತ್ತಾರೆ. ತುಳಸಿಯಷ್ಟೇ ಔಷಧಿಯ ಗುಣವನ್ನು ಹೊಂದಿರುವ ಬೆಟ್ಟದ ನೆಲ್ಲಿಕಾಯಿಯ ಗಿಡ ಅತ್ಯಂತ ಪಾಮುಖ್ಯವಾದುದರಿಂದ ಹಬ್ಬದ ದಿನದಂದು ಈ ಗಿಡಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಹೆಚ್ಚಿನ ಕಡೆಗಳಲ್ಲಿ ನೆಲ್ಲಿಕಾಯಿಯ ಆರತಿಯನ್ನೇ ಬೆಳಗುವುದು ಇನ್ನೊಂದು ವಿಶೇಷ. ಕೆಲವೊಂದು ಕಡೆಗಳಲ್ಲಿ ಪೂಜೆಯ ವೇಳೆಗೆ ಬಾಳೆ ಎಲೆಯನ್ನು ತುಳಸಿಕಟ್ಟೆಯ ಎದುರು ಇಟ್ಟು ಅದಕ್ಕೆ ಅವಲಕ್ಕಿ, ಬೆಲ್ಲ, ತೆಂಗಿನ ಕಾಯಿ, ಹಣ್ಣು-ಹಂಪಲು, ಸಿಹಿತಿಂಡಿಗಳನ್ನು ತುಳಸಿಯ ಎದುರು ಇಟ್ಟು ಬಡಿಸಲಾಗುತ್ತದೆ. ಕೊನೆಯಲ್ಲಿ ಮಂಗಳಾರತಿಯನ್ನು ಮಾಡಿ ಮನೆಮಂದಿಯೆಲ್ಲ ತುಳಸಿಯನ್ನು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಲಾಗುತ್ತದೆ.

ಸರ್ವಶ್ರೇಷ್ಠ ತುಳಸಿ:
ತುಳಸಿಯ ಮಹಿಮೆ ಅನುಪಮ. ತುಳಸಿಗಿಂತ ಪವಿತ್ರವಾದುದು ಮತ್ತೊಂದಿಲ್ಲ. ಯಾವುದೇ ವ್ಯಕ್ತಿಯು ಸಾಯುವ ಸಮಯದಲ್ಲಿ ಆತನ ಬಾಯಿಗೆ ತುಳಸಿ ನೀರನ್ನು ಬಿಡುವ ಶಾಸ್ತ್ರವಿದೆ, ಅಂದರೆ ಯಮದೂತನು ಬರುವ ಮೊದಲಿಗೆ ವಿಷ್ಣು ಸೇವಕರು ಬಂದು ಆ ಜೀವಕ್ಕೆ ವಿಷ್ಣು ಸಾಯುಜ್ಯವನ್ನೂ ನೀಡುವುದಾಗಿ ಪರಶಿವನು ನಾರದನಲ್ಲಿ ಹೇಳಿದ್ದಾನೆ ಅಂತವರ ಪಾಪಗಳು ಪರಿಹಾರವಾಗಿ ಸ್ವರ್ಗ ಪ್ರಾಪ್ತಿ ಆಗುತ್ತದೆ  ಅನ್ನೋ ಪ್ರತೀತಿಯೂ ಇದೆ.

ತುಳಸಿ ಇಲ್ಲದೇ ಯಾವುದೇ ಸಾಲಿಗ್ರಾಮದ ಪೂಜೆಯಿಲ್ಲ,  ತುಳಿಸಿಯನ್ನು ಹಾಲಿನಿಂದ ಪೂಜಿಸಿದರೆ ಲಕ್ಷ್ಮಿ ಪ್ರಸನ್ನಳಾಗುವಳು ಎಂಬುವ ನಂಬಿಕೆ ಹಲವರದು. ಆರ್ಯುವೇದದಲ್ಲೀ ಕೂಡಾ ತುಳಸಿಯ ಉಪಯೋಗ ಅನೇಕ. ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಕ್ರಿಮಿ ಕೀಟಗಳು ಕಡಿಮೆಯಾಗುತ್ತದೆ, ಇದರ ಶುದ್ಧವಾದ ಗಾಳಿಯನ್ನು ನಾವು ಸೇವಿಸುವುದು ಆರೋಗ್ಯಕ್ಕೂ ಒಳ್ಳೆಯದು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಆಗಿದೆಯಾ ! -ಮುನೀರ್ ಕಾಟಿಪಳ್ಳ

March 6, 2026

ಉಳ್ಳಾಲ: ಅರಣ್ಯಾಧಿಕಾರಿ ಮನೆಯಿಂದ ಬೈಕ್ ಸಮೇತ 181ಗ್ರಾಂ ಚಿನ್ನ, ಹತ್ತೂವರೆ ಲಕ್ಷ ನಗದು ಕಳವು…!!

March 5, 2026

ಹರೇಕಳ ಆಲಡ್ಕ ಜಮಾಅತಿನ ಎರಡು ಮದ್ರಸಕ್ಕೆ ಶೇ.100 ಫಲಿತಾಂಶ

March 5, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಉಳ್ಳಾಲದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಆಗಿದೆಯಾ ! -ಮುನೀರ್ ಕಾಟಿಪಳ್ಳ

By UllalaVaniMarch 6, 20260

ಉಳ್ಳಾಲ; ಇಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಆಗಿದೆಯಾ ! ಹತ್ತಿಪ್ಪತ್ತು ಜನ ನಾಗರಿಕರು ಸೇರಿ ತಮಗೆ ಇರುವ ಆತಂಕ ತೋಡಿಕೊಂಡರೆ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಉಳ್ಳಾಲ: ಅರಣ್ಯಾಧಿಕಾರಿ ಮನೆಯಿಂದ ಬೈಕ್ ಸಮೇತ 181ಗ್ರಾಂ ಚಿನ್ನ, ಹತ್ತೂವರೆ ಲಕ್ಷ ನಗದು ಕಳವು…!!

March 5, 2026

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದ.ಕ ಜಿಲ್ಲಾ ಘಟಕ ಪುನರ್ ಸಂಘಟನೆಗೆ ನಿರ್ಧಾರ

March 5, 2026

ಇರಾನ್ ದಾಳಿ; ಮೂವರು ಭಾರತೀಯರು ಸಾವು…!

March 5, 2026
1 2 3 … 1,825 Next
Automatic YouTube Gallery

Anvith Electronics | ಆಫರ್...ಆಫರ್... ಆಫರ್... ಮಾ.8ರಂದು ಇಲ್ಲಿಗೆ ಬರ್ಲೆಬೇಕು....!

ಪ್ರಕಾಶ್ ಜಿ ಮಾಲಕತ್ವದ ಅನ್ವಿತ್ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಆರಂಭ; ತೊಕ್ಕೊಟ್ಟು ಒಳಪೇಟೆಯಲ್ಲಿ ಮಾ.8ರಂದು ಶುಭಾರಂಭ

ಗ್ರಾಹಕರಿಗಾಗಿ ಬಿಗ್ ಕಾಂಬೋ ಆಫರ್...!


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Anvith Electronics | ಆಫರ್...ಆಫರ್... ಆಫರ್... ಮಾ.8ರಂದು ಇಲ್ಲಿಗೆ ಬರ್ಲೆಬೇಕು....!
Now Playing
Anvith Electronics | ಆಫರ್...ಆಫರ್... ಆಫರ್... ಮಾ.8ರಂದು ಇಲ್ಲಿಗೆ ಬರ್ಲೆಬೇಕು....!
ಪ್ರಕಾಶ್ ಜಿ ಮಾಲಕತ್ವದ ಅನ್ವಿತ್ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಆರಂಭ; ...
ಪ್ರಕಾಶ್ ಜಿ ಮಾಲಕತ್ವದ ಅನ್ವಿತ್ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಆರಂಭ; ತೊಕ್ಕೊಟ್ಟು ಒಳಪೇಟೆಯಲ್ಲಿ ಮಾ.8ರಂದು ಶುಭಾರಂಭ

ಗ್ರಾಹಕರಿಗಾಗಿ ಬಿಗ್ ಕಾಂಬೋ ಆಫರ್...!


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಸೌಹಾರ್ದ ಇಫ್ತಾರ್ ಕೂಟ; ಹಿಂದೂ, ಮುಸ್ಲಿಂ, ಕ್ರೈಸ್ತ ರು ಭಾಗಿ
Now Playing
ಸೌಹಾರ್ದ ಇಫ್ತಾರ್ ಕೂಟ; ಹಿಂದೂ, ಮುಸ್ಲಿಂ, ಕ್ರೈಸ್ತ ರು ಭಾಗಿ
ಯೆನೆಪೋಯ ಸಮೂಹ ಸಂಸ್ಥೆಯ ವತಿಯಿಂದ ಜಪ್ಪಿನಮೊಗರಿನ ಯೆನೆಪೋಯ ಸ್ಕೂಲ್‌ನಲ್ಲಿ ಸೌಹಾರ್ದ ...
ಯೆನೆಪೋಯ ಸಮೂಹ ಸಂಸ್ಥೆಯ ವತಿಯಿಂದ ಜಪ್ಪಿನಮೊಗರಿನ ಯೆನೆಪೋಯ ಸ್ಕೂಲ್‌ನಲ್ಲಿ ಸೌಹಾರ್ದ ಇಫ್ತಾರ್ ಕೂಟ; ಡಾ.ಯೆನೆಪೊಯ ಅಬ್ದುಲ್ಲಾ ಕುಂಞ ನೇತೃತ್ವದಲ್ಲಿ ಕಾರ್ಯಕ್ರಮ

ಸೌಹಾರ್ದ ಕೂಟದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ರು ಭಾಗಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #Yenepoya #School #iftharspecial #ifthar #ullala #utkhader
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d