ಅಮೃತಸರ: ಭಾರತದ ಪ್ರಧಾನ ಮಂತ್ರಿ ಮೋದಿಯವರು ಸತತ ಎರಡನೇಯ ಭಾರಿಗೆ ದೀಪಾವಳಿ ಹಬ್ಬವನ್ನು ಭಾರತೀಯ ಯೋಧರ ಜೊತೆಗೆ ಬುಧವಾರ ಆಚರಿಸಿಕೊಂಡರು.
ಈ ಸಂಧರ್ಭದಲ್ಲಿ ಮಾತಾನಾಡಿ ಮೋದಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿಕೊಳ್ಳಲು ಅವಕಾಶ ದೊರಕಿರುವುದು ನನಗೆ ನಿಜಕ್ಕೂ ಸಂತಸ ತಂದಿದೆ. ಭಾರತವನ್ನು ವಿಶ್ವ ಇಂದು ಗೌರವಯುತವಾಗಿ ಕಾಣಲು ನಮ್ಮ ಯೋಧರ ತ್ಯಾಗ ಬಲಿದಾನಗಳು ಮುಖ್ಯ ಕಾರಣ ಎಂದು ತಿಳಿಸಿದರು.
ಪಂಜಾಬ್ನ ಅಮೃತಸರದ ಖಾಸದಲ್ಲಿರುವ ಡೊಗ್ರೈ ಯುದ್ದ ಸ್ಮಾರಕಕ್ಕೆ ಭೇಟಿ ನೀಡಿ ಸೈನಿಕರೊಂದಿಗೆ ದೀಪಾವಳಿಯನ್ನು ನರೇಂದ್ರಮೋದಿ ಆಚರಿಸಿಕೊಂಡರು.


