ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮಂಗಳೂರು: ತನ್ನ ಆಟೋದಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋದ ನಗದು ರೂಪಾಯಿ ಮೂವತ್ತು ಸಾವಿರ ವನ್ನು ಆಟೋ ಚಾಲಕರಾದ ಅಬ್ದುಲ್ ರಹ್ಮಾನ್ ಹಳೆಕೋಟೆ ಇವರು ಅದನ್ನು ಸಂಬಂಧಿಸಿದ ಪ್ರಯಾಣಿಕರಿಗೆ ಅವರ ವಿಳಾಸವನ್ನು ಪತ್ತೆ ಹಚ್ಚಿ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿ ತನ್ನ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
ಈ ಆಟೋ ಚಾಲಕ ಅಬ್ದುಲ್ ರಹ್ಮಾನ್ ಹಳೆಕೋಟೆ ಇವರು ತೊಕ್ಕೋಟು ಒಳಪೇಟೆ ಅಟೋ ಚಾಲಕ ಮತ್ತು ಮಾಲಕ ಸಂಘದ ಗೌರವಾಧ್ಯಕ್ಷರೂ, ಹಳೆಕೋಟೆ ಟೆಸ್ಟ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಇದರ ಅಧ್ಯಕ್ಷರಾಗಿದ್ದಾರೆ.
ಇಂಥ ನಿಷ್ಠಾವಂತ ಪ್ರಾಮಾಣಿಕ ಅಟೋ ಚಾಲಕರಾದ ಅಬ್ದುಲ್ ರಹ್ಮಾನ್ ಹಳೆಕೋಟೆ ಇವರಿಗೆ ಹಳೆಕೋಟೆ ಜನತೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.




