ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮಡಿಕೇರಿ : ನ್ಯೂಸ್ ಕನ್ನಡ ನೆಟ್ ವರ್ಕ್: ಟಿಪ್ಪು ಜಯಂತಿ ವಿಷಯದಲ್ಲಿ ನಿನ್ನೆ ಕೊಡಗು ಜಿಲ್ಲೆಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಇಂದು ಕೂಡ ಉದ್ವಿಗ್ನ ವಾತಾವರಣ ಮುಂದುವರಿದಿದೆ. ಗೋಣಿ ಕೊಪ್ಪದಲ್ಲಿ ನಿನ್ನೆ ರಾತ್ರಿ ದುಷ್ಕರ್ಮಿಗಳು ಕಾರೊಂದಕ್ಕೆ ಬೆಂಕಿ ಹಚ್ಚಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಹೋಟೆಲೊಂದರ ಮುಂದೆ ನಿಲ್ಲಿಸಿದ್ದ ಓಮ್ನಿ ಕಾರಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ. ಜಿಲ್ಲೆಯಲ್ಲಿ ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಡಿಕೇರಿಯಲ್ಲಿ ಪೆÇಲೀಸರು ಇಂದು ಕೂಡ ಗಸ್ತು ತಿರುಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಗರದಲಿಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ನಿನ್ನೆ ಘರ್ಷಣೆಯ ವೇಳೆ ಸಾವನ್ನಪ್ಪಿರುವ ವಿಎಚ್ ಪಿ ಮುಖಂಡ ಕುಟ್ಟಪ್ಪ ಎಂಬವರ ಮನೆಗೆ ಇಂದು ಕೆಲವು ಬಿಜೆಪಿ ಮುಖಂಡರು ಭೇಟಿ ನೀಡುವ ಸಾಧ್ಯತೆಯಿರುವುದರಿಂದ ಮಡಿಕೇರಿಯಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿದೆ.
ನಗರದಲ್ಲಿ ಇಂದು ಕೂಡ ಸರಕಾರಿ ಹಾಗೂ ಖಾಸಗಿ ಬಸ್ ಗಳು ರಸ್ತೆಗಿಳಿದಿಲ್ಲ. ನಗರದಲ್ಲಿ ಅಘೋಷಿತ ಬಂದ್ ವಾತಾವರಣವಿದೆ ಎಂದು ತಿಳಿದು ಬಂದಿದೆ.
ರಾಜ್ಯ ಸರಕಾರ ಆಚರಿಸಲು ನಿರ್ಧರಿಸಿದ್ದ ಟಿಪ್ಪು ಜಯಂತಿಯನ್ನು ವಿರೋಧಿಸಿ ಬಿಜೆಪಿ ಬೆಂಬಲಿತ ಸಂಘಟನೆಗಳು ನಿನ್ನೆ ಕೊಡಗು ಬಂದ್ ಗೆ ಕರೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ನಿನ್ನೆ ಮಡಿಕೇರಿಯಲ್ಲಿ ಘರ್ಷಣೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಲಾಠಿ ಚಾರ್ಜ್ ನಡೆಸಿ, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದ್ದರು.
ಚೆಟ್ಟಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ :
ಚೆಟ್ಟಳ್ಳಿ: ಸರಕಾರ ಆದೇಶದ್ವಯ ನ.10ರಂದು ಟಿಪ್ಪುವಿನ ಜನ್ಮ ದಿನ ಆಚರಣೆಗೆ ಸಿದ್ಧತೆ ಮಾಡುತಿಂದತೆ ಕೊಡಗಿನಾದ್ಯಂತ ವಿರೋಧ ವ್ಯಕ್ತವಾಗುತಿತು. ಚೆಟ್ಟಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಯಾಗುತಿದಂತೆ ಪೊಲೀಸರು ಪ್ರಯತ್ನದಿಂದ ಪರಿಸ್ಥಿತಿ ತಿಳಿಯಾಯಿತು.
ನ.10ರಂದು ಟಿಪ್ಪುವಿನ ಜನ್ಮ ದಿನ ಆಚರಣೆಗೆ ಹಲವು ಸಂಘಸಂಸ್ಥೆಯಿಂದ ಪ್ರತಿಭಟನೆ ವ್ಯಕ್ತವಾಗತೊಡಗಿತು. ಹಾಗೆ ಚೆಟ್ಟಳ್ಳಿಯಲ್ಲು ಪ್ರತಿಭಟನೆಯ ಕಾವು ಏರಿತು.
ಚೆಟ್ಟಳ್ಳಿ ಮಾರ್ಗದಲ್ಲಿ ವಾಹನಗಳು ತೆರಳದಂತೆ ಪ್ರತಿಭಟನಾಕಾರರು ದೊಡ್ಡದಾದ ಮರಗಳನ್ನು ಕಡಿದು ಹಾಕಲಾಗಿತ್ತು ಹಾಗು ಮರದ ದಿಮ್ಮಿಗಳನ್ನು ರಸ್ತೆಯ ಮಧ್ಯಭಾಗದಲ್ಲಿ ಹಾಕಲಾಗಿತ್ತು. ಅಂಗಡಿಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಪೊಲೀಸರು ರಸ್ತೆಯಲ್ಲಿದ್ದ ಮರಗಳನ್ನು ತೆರವುಗೊಳಿಸಿದರು.
ನಂತರದಲ್ಲಿ ಪ್ರತಿಭಟನಾಕಾರರು ವಾಹನಗಳ ಸಂಚಾರವನ್ನು ತಡೆಒಡ್ಡುತಿದ್ದಂತೆ ಪೊಲೀಸರ ಮದ್ಯಪ್ರವೇಶದಿಂದ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು.
ಸುಮಾರು 1.30ಗಂಟೆಗೆ ಹಿಂದೂ ಪರ ಸಂಘಟನೆಗಳು ಚೆಟ್ಟಳ್ಳಿಯ ಪಟ್ಟಣದಲ್ಲಿ ನೆರೆದಿರುತಿದಂತೆ ಮಡಿಕೇರಿಂದ ಟಿಪ್ಪು ಜನ್ಮ ದಿನ ಆಚರಣೆಯನ್ನು ಮುಗಿಸಿ ಬರುತಿದ ಮುಸ್ಲಿಂ ಸಂಘಟನೆಗೂ ಹಾಗು ಪ್ರತಿಭಟನಾನಿರತ ಸಂಘಟನೆಗೂ ಪರಸ್ಪರ ಮಾತಿನ ಚಕಮಕಿ ನಡೆದು ಪರಸ್ಪರ ಕಲ್ಲುತೂರಾಟ ನಡೆಸಿತು.ಅದರ ಪರಿಣಾಮವಾಗಿ ಪಕ್ಕದ ಅಂಗಡಿ ಮಳಿಗೆ ಮನೆಗಳಿಗೆ ಕಲ್ಲು ಎಸೆಯಲ್ಪಟ್ಟಿತು. ಪರಿಸ್ಥಿತಿ ಅರಿತ ಪೊಲೀಸರು ಮಧ್ಯಪ್ರವೇಶಿಸಿ ಲಘು ಲಾಟಿ ಚಾರ್ಜ್ ಮಾಡುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಚೆಟ್ಟಳ್ಳಿಯ ಸ್ಥಳೀಯ ವರದಿಮಾಡಲು ನಿರತರಾಗಿದ್ದ ಸ್ಥಳೀಯ ಮಾಧ್ಯಮ ವರದಿಗಾರನ ಮೇಲೆ ಉದ್ರಕ್ತರ ಗುಂಪು ಹಲ್ಲೆಗೆ ಮುಂದಾದಾಗ ಕೆಲವರು ತಡೆಮಾಡಿದರು.
ಹಿನ್ನೆಲೆ :
ಮಡಿಕೇರಿ: ಕೊಡಗಿನಲ್ಲಿ ಉಂಟಾದ ಟಿಪ್ಪು ಜಯಂತಿ ಪರ-ವಿರೋಧ ಪ್ರತಿಭಟನೆಯಿಂದ ಸಂಭವಿಸಿದ ಕೋಮುಘರ್ಷಣೆಗೆ ಇಬ್ಬರು ದಾರುಣವಾಗಿ ಮೃತ ಪಟ್ಟಿದ್ದು, ನೂರಕ್ಕೂ ಅಧಿಕ ಮಂದಿ ಗಾಯಗೊಂಡು ವಿವಿಧ ಆಸ್ಪತ್ರೆಗ ಳಿಗೆ ದಾಖಲಾಗಿದ್ದಾರೆ. ಈತನ್ಮಧ್ಯೆ ಓರ್ವ ವ್ಯಕ್ತಿಯ ಮೇಲೆ ಶೂಟೌಟ್ ನಡೆಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ.
ಪರಿಸ್ಥಿತಿ ನಿಯಂತ್ರಿಸಲು ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಈ ನಡುವೆ ಹಿಂದೂ ಸಂಘಟನೆಗಳು ಇಂದು ಕೊಡಗು ಬಂದ್‍ಗೆ ಕರೆ ನೀಡಿದ್ದು, ಶಾಲಾ ಕಾಲೇಜ್‍ಗೆ ರಜೆ ಘೋಷಿಸಲಾಗಿದೆ.
ಮೃತಪಟ್ಟವರನ್ನು ಮಡಿಕೇರಿ ವಿಶ್ವ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ ಡಿ.ಎಸ್. ಕುಟ್ಟಪ್ಪ(62), ಹಾಗೂ ಮಡಿಕೇರಿ ನಿವಾಸಿ ರಾಜು(50) ಎಂದು ಗುರುತಿಸಲಾಗಿದೆ. ಗುಂಡೇಟು ತಗುಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ವ್ಯಕ್ತಿಯನ್ನು ಸಿದ್ದಾಪುರ ನಿವಾಸಿ ಸಾಹುಲ್ ಎಂದು ಗುರುತಿಸಲಾಗಿದೆ.
ಕಲ್ಲು ಎತ್ತಿ ಹಾಕಿ ಕುಟ್ಟಪ್ಪನ ಕೊಲೆ?
ಹಿಂದೂ ಪರಿಷತ್‍ನ ಸಂಘ ಟನಾ ಕಾರ್ಯದರ್ಶಿ ಕುಟ್ಟಪ್ಪ ಅವರು ಅಸಲಿಗೆ ಪ್ರತಿಭಟನೆಯಲ್ಲಿ ಭಾಗವಹಿ ಸಿರಲಿಲ್ಲ, ಬದಲಿಗೆ ಕುಶಾಲನಗರದ ಸಂಬಂಧಿಕರ ಮದುವೆ ಕಾರ್ಯ ಮುಗಿಸಿ ಬರುತ್ತಿದ್ದರೆನ್ನಲಾಗಿದೆ. ಆದರೆ ಕುಶಾಲನಗರದಿಂದ ಬಂದ ಪ್ರತಿಭಟನಾ ಮೆರವಣಿಗೆ ಜತೆ ಕುಟ್ಟಪ್ಪ ಸೇರಿಕೊಂಡ ಪರಿಣಾಮ ಮುಂದೆ ಭುಗಿಲೆದ್ದ ಕೋಮುಘರ್ಷಣೆಗೆ ಬಲಿಯಾದರು ಎಂದು ಮೂಲಗಳಿಂದ ತಿಳಿದು ಬಂದಿದೆ.
ಟಿಪ್ಪು ಪರ ಪ್ರತಿಭಟನಾಕಾರರು ತಿಮ್ಮಪ್ಪ ಸರ್ಕಲ್ ಬಳಿ ನಡೆಸುತ್ತಿದ್ದ ಮೆರವಣಿಗೆಯನ್ನು ನೋಡಲು ಗೋಡೆ ಹತ್ತಿ ನಿಂತಿದ್ದರು. ಇತ್ತ ಟಿಪ್ಪು ಪರ ಹಾಗೂ ಟಿಪ್ಪು ವಿರೋಧಿ ಪ್ರತಿಭಟನಾಕಾರರು ತಿಮ್ಮಪ್ಪ ಸರ್ಕಲ್ ಬಳಿ ಪರಸ್ಪರ ಸಂಧಿಸಿದ ಪರಿಣಾಮ ಇತ್ತಂಡಗಳ ನಡುವೆ ಪರಸ್ಪರ ಘರ್ಷಣೆ ನಡೆಯಿತು. ಈ ವೇಳೆ ಘರ್ಷಣೆಯಿಂದ ತಪ್ಪಿಸಿಕೊಳ್ಳಲೆಂದು ಕುಟ್ಟಪ್ಪ ಅವರು 35 ಅಡಿ ಎತ್ತರದ ಮಹಡಿ ಏರಿದ್ದರೆನ್ನಲಾಗಿದ್ದು, ಘರ್ಷಣೆಯ ನಡುವೆ ಮಹಡಿಯಿಂದ ಬಿದ್ದಿದ್ದಾರೆನ್ನಲಾಗಿದೆ.
ಮೇಲಿಂದ ಬಿದ್ದರೂ ಕುಟ್ಟಪ್ಪ ಅವರಿಗೆ ಮಾರಣಾಂತಿಕ ಗಾಯವೇನೂ ಆಗಿರಲಿಲ್ಲ, ಆದರೆ ಇದೇ ವೇಳೆ ದುಷ್ಕರ್ಮಿಯೋರ್ವ ನೆಲಕ್ಕೆ ಬಿದ್ದಿರುವ ಕುಟ್ಟಪ್ಪ ಅವರ ತಲೆ ಮೇಲೆ ಕಲ್ಲನ್ನೆತ್ತಿ ಪರಾರಿಯಾಗಿದ್ದನೆಂಬ ಸುದ್ದಿ ಹರಡುತ್ತಿದೆ. ತಕ್ಷಣ ಅವರನ್ನು ನೆರೆದವರು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಒಟ್ಟಿನಲ್ಲಿ ಕುಟ್ಟಪ್ಪ ಅವರ ಸಾವಿನಲ್ಲಿ ಸಾಕಷ್ಟು ಸಂಶಯ ವ್ಯಕ್ತವಾಗಿದೆ. ಕುಟ್ಟಪ್ಪ ಅವರ ಪುತ್ರ ಕುಟ್ಟಪ್ಪ ಅವರನ್ನು ಕಲ್ಲುತೂರಾಟ ನಡೆಸಿ ಕೊಲೆ ಮಾಡಲಾಗಿದೆ. ಆದರೆ ಈಗ ಅದನ್ನು ವಿಷಯಾಂತರ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ ಇದು ಪೂರ್ವ ನಿಯೋಜಿತ ಕೊಲೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲ್ಲಲಾಗಿದೆ. ಕೇರಳದಿಂದ ಬಂದ ಗುಂಪು ಈ ಕೃತ್ಯ ಎಸಗಿದೆ. ಇದಕ್ಕೆ ತಕ್ಕ ಉತ್ತರ ಕೊಡುತ್ತೇವೆ ಎಂದ ಬಿಜೆಪಿ ಶಾಸಕ ಕೆಜಿ ಭೋಪಯ್ಯ ಕೂಡ ಪ್ರತಿಕ್ರಿಯಿಸಿದ್ದಾರೆ.
ಈ ನಡುವೆ ಪೊಲೀಸ್ ಮಹಾನಿರ್ದೇಶಕರು ಕುಟ್ಟಪ್ಪ ಅವರು ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆಂದು ಹೇಳಿದ್ದು, ಅದೇ ವಾಕ್ಯವನ್ನು ಸಿಎಂ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ ಮುಂತಾದವರು ಪುನರುಚ್ಛರಿ ಸಿದ್ದಾರೆ. ಅದರೆ, ಇದೆಲ್ಲವೂ ಪೂರ್ವ ನಿಯೋಜಿತ ಕೃತ್ಯ, ಕುಟ್ಟಪ್ಪ ಅವರನ್ನು ಕೊಲೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಕೊಡಗಿನಲ್ಲಿ ನಡೆದ ಹಿಂಸಾಚಾರಕ್ಕೆ ಹೊರಗಿನಿಂದ ಬಂದವರೇ ಕಾರಣ ಎಂದು ಭೋಪಯ್ಯ ಹಾಗೂ ಪ್ರತಾಪ್ ಸಿಂಹ ಆರೋಪಿಸಿದ್ದು, ಇದರಿಂದಲೇ ಈ ರೀತಿ ಗಲಾಟೆ ನಡೆದಿದೆ ಎಂದು ದೂರಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಪೊಲೀಸರೂ ಕೂಡ ಇದೇ ಅನುಮಾನದ ಮೇರೆಗೆ ಅಲ್ಲಲ್ಲಿ ನಾಕಾಬಂಧಿ ಹಾಕಿ ಹಲವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆನ್ನಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ನಾಪೋಕ್ಲುನಿಂದ 500 ಮಂದಿ, ಕಾಸರಗೋಡು, ಸುಳ್ಯ, ಪುತ್ತೂರು, ಮಂಗಳೂರು, ಬಂಟ್ವಾಳ ಕಡೆಯಿಂದ ನೂರಾರು ವಾಹನಗಳಲ್ಲಿ ದುಷ್ಕರ್ಮಿ ಗಳು ಮಡಿಕೇರಿಯತ್ತ ನುಗ್ಗಿ ಪೂರ್ವನಿಯೋಜನೆಯಂತೆ ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜು ಮೃತಪಟ್ಟಿದ್ದು ಹೇಗೆ?
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರಾಜು(60) ಅವರು ಮೆರವಣಿಗೆಯಲ್ಲಿ ಸಾಗು ತ್ತಿದ್ದ ವೇಳೆ ಹಠಾತ್ ಆಗಿ ಗುಂಪು ಘರ್ಷಣೆ ತೊಡಗಿರುವುದರಿಂದ ಬೆಚ್ಚಿಬಿದ್ದು ಹೃದಯಾ ಘಾತಕ್ಕೊಳಗಾದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿ ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಾಹುಲ್‍ಗೆ ಗುಂಡು
ತಗುಲಿದ್ದು ಹೇಗೆ?
ಸಿದ್ದಾಪುರ ನಿವಾಸಿ ಸಾಹುಲ್(27) ಅವರು ಮಡಿಕೇರಿ ಹೊರ ವಲಯದಲ್ಲಿರುವ ನೀರೊಳ್ಳಿ ಕಾಫಿ ತೋಟದ ಸಮೀಪ ಬರುತ್ತಿದ್ದರೆನ್ನಲಾಗಿದೆ. ಈ ವೇಳೆ ಆ ತೋಟದಲ್ಲಿ ಅಡಗಿ ಕುಳಿತಿದ್ದ ದುಷ್ಕರ್ಮಿಗಳು ಕೋವಿಯಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗಾಯಾಳು ಸಾಹುಲ್ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸ ಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ.
ಹಲವರ ಬಂಧನ
ಘಟನೆಗೆ ಸಂಬಂಧಿಸಿ ಈಗಾಗಲೇ ಹಲವರು ಬಂಧಿಸಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಕುಟ್ಟಪ್ಪ ಅವರ ಸಾವಿಗೆ ಸಂಬಂಧಿಸಿ ಪೊಲೀಸರು ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
100ಕ್ಕೂ ಅಧಿಕ ಮಂದಿಗೆ ಗಾಯ
ಟಿಪ್ಪು ಪರ-ವಿರೋಧಿಗಳ ನಡುವೆ ನಡೆದ ಘರ್ಷಣೆಯಿಂದ ಮಡಿಕೇರಿ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಬೆಳಿಗ್ಗೆ 10 ಸುಮಾರಿಗೆ ಆರಂಭಗೊಂಡ ಗಲಾಟೆ ಸಂಜೆಯವರೆಗೂ ನಡೆದಿದ್ದು, ಕೊಡಗಿನ 30 ವರ್ಷಗಳ ಇತಿಹಾಸದಲ್ಲಿ ಇದೇ ದೊಡ್ಡ ಮಟ್ಟದ ಗಲಭೆ ಎಂಬ ಅಪಖ್ಯಾತಿಗೊಳಗಾಗಿದೆ. ಘಟನೆಯಲ್ಲಿ ಇತ್ತಂಡಗಳ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪೊಲೀಸ್ ಇಲಾಖೆ ಗಾಯಗೊಂಡವರ ಸ್ಪಷ್ಟ ಸಂಖ್ಯೆ ಎಷ್ಟೆಂದು ಗೊತ್ತಾಗಿಲ್ಲ ಎನ್ನಲಾಗಿದೆ.






















