ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಮೈಸೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನ.2ರಿಂದ 6ರವರೆಗೆ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಹಿಳೆಯರ ಹಾಕಿ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮೊದಲ ಕ್ವಾರ್ಟರ್ ¥sóÉೈನಲ್ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಹೈದರಾಬಾದಿನ ಒಸ್ಮಾನಿಯ ವಿ.ವಿ. ಎದುರು 8-0 ಗೋಲು ಅಂತರಗಳಿಂದ ಜಯಿಸಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದುಕೊಂಡಿತು.
ಬಳಿಕ ನಡೆದ ಲೀಗ್ ಪಂದ್ಯಾವಳಿಗಳಲ್ಲಿ ಚಿದಂಬರಂನ ಅಣ್ಣಾಮಲೈ ವಿ.ವಿ. ತಂಡವನ್ನು 6-1 ಗೋಲುಗಳಿಂದ, ಕೇರಳದ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ವಿರುದ್ಧ 5-0 ಗೋಲುಗಳಿಂದ ಮತ್ತು ಕೊನೆಯ ಲೀಗ್ ಪಂದ್ಯದಲ್ಲಿ ಅತಿಥೇಯ ಮೈಸೂರು ವಿಶ್ವವಿದ್ಯಾನಿಲಯ ತಂಡವನ್ನು 2-1 ಗೋಲುಗಳಿಂದ ಮಣಿಸಿ ಭರ್ಜರಿ ಜಯಗಳಿಸಿದೆ.
ತಂಡದಲ್ಲಿ ಭಾಗ್ಯಶ್ರೀ ಸಿಎಂ, ವಿಶ್ಮ ಎ.ಎ., ನಿಶಾ ಎನ್.ಎನ್. ಹಿಮಾ ಜಾರ್ಜ್ ಚೈತ್ರಾ ಕೆ.ಜೆ. ಕಾವೇರಮ್ಮ ಎ.ಹೆಚ್, ಪೂಜಾ ಎಂ.ಡಿ. ಸ್ವಪ್ನ ಎನ್.ಆರ್, ನಿಶಾ ಪಿ.ಸಿ. ರೇಶ್ಮಾ ಬಿ.ಬಿ. ಲಿಪಿತಾ ಡಿ.ಎಂ, ಯಕ್ಷಿತಾ ವಿ.ಆರ್, ಸಂಗೀತಾ , ಜ್ಯೋತಿ , ಅಕ್ಕಮ್ಮ ಕೆ.ಕೆ, ಮುಬಿನಾ ಬೇಗಂ ಅವರು ಇದ್ದರು.
ತಂಡದ ತರಬೇತುದಾರರಾಗಿ ಡಾ. ಜೆರಾಲ್ಡ್ ಸಂತೋಷ್ ಡಿಸೋಜರವರು ಹಾಗೂ ವ್ಯವಸ್ಥಾಪಕರಾಗಿ ಕು. ಟಿ.ಎನ್.ಸೌಮ್ಯ ಭಾಗವಹಿಸಿದ್ದರು. ಕಳೆದ ವರ್ಷವೂ ಕೂಡಾ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಹಿಳೆಯರ ಹಾಕಿ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು.


