ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಸಬ್ ಜೈಲಿನಲ್ಲಿ ನಡೆದ ಮಾರಾಮಾರಿ ಪ್ರಕರಣ ಹಾಗೂ ಇಬ್ಬರು ಖೈದಿಗಳ ಹತ್ಯೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿದ್ದು, ಘಟನೆಗೆ ಕಾರಣರಾದವರನ್ನು ಕಠಿಣ ಸಜೆಗೆ ಒಳಪಡಿಸಬೇಕೆಂದು ಆಗ್ರಹಿಸಿದೆ.
ಪ್ರಕರಣ ಸಬ್ ಜೈಲಿನ ಭದ್ರತೆಯ ಲೋಪವನ್ನು ಎತ್ತಿ ತೋರಿಸುತ್ತದೆ. ವಿಚಾರಣಾಧೀನ ಖೈದಿಗಳಿಗೆ ಪೂರ್ಣ ಭದ್ರತೆಯನ್ನು ನೀಡುವುದು ಜೈಲಿನ ಅಧಿಕಾರಿಗಳ ಗುರುತರ ಹೊಣೆಯಾಗಿದೆ. ಆದರೆ ಘಟನೆಯು ಜಿಲ್ಲಾಡಳಿತದ ವೈಫಲ್ಯವನ್ನು ಸೂಚಿಸುತ್ತದೆ. ಘಟನೆಗೆ ಸರಕಾರ ನೇರ ಹೊಣೆ ಎಂದು ಆರೋಪಿಸಿದೆ.
ಮೃತರ ಕುಟುಂಬಗಳಿಗೆ ತಲಾ 50 ಲಕ್ಷ ರೂ ಪರಿಹಾರವನ್ನು ಒದಗಿಸಬೇಕೆಂದು ಸಂಘಟನೆ ಆರೋಪಿಸಿದೆ.


