Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

ಇತಿಹಾಸದ ಪುಟಗಳಲ್ಲಿ ‘ಅಬ್ಬಕ್ಕ’ ಅಜರಾಮರ: ಪ್ರೊ. ಜಗದೀಶ್ ಪ್ರಸಾದ್ ಡಿ.

UllalaVaniBy UllalaVaniNovember 9, 2026No Comments1 Min Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಕೊಣಾಜೆ; ತುಳುನಾಡಿನಲ್ಲಿ ಸಾಮಾನ್ಯಳಾಗಿದ್ದು, ಪೋರ್ಚುಗೀಸರನ್ನು ಸದೆಬಡಿದ ಅಬ್ಬಕ್ಕನನ್ನು ದೇಶದ ಇತಿಹಾಸ ಮರೆಯುವಂತಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯೊಬ್ಬಳು ತನ್ನ ಶೌರ್ಯವನ್ನು ಮೆರೆದದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇಂತಹ ಹೆಣ್ಣು ಮಗಳ ಹೆಸರು ಅಜರಾಮರ ಎಂದು ವಿಶ್ವಮಂಗಳ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಪ್ರೊ. ಜಗದೀಶ್ ಪ್ರಸಾದ್ ಡಿ. ನುಡಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ರಾಣಿ ಅಬ್ಬಕ್ಕ ಅಧ್ಯಯನ ಪೀಠದ ವತಿಯಿಂದ, ವಿಶ್ವಮಂಗಳ ಪ್ರೌಢ ಶಾಲೆ, ಕೊಣಾಜೆ ಇದರ ಸಹಯೋಗದಲ್ಲಿ ಶನಿವಾರ ನಡೆದ ‘ತುಳುವೆರೆ ನೆಂಪುಡು ರಾಣಿ ಅಬ್ಬಕ್ಕ’ ಎಂಬ ಉಪನ್ಯಾಸ, ರಸಪ್ರಶ್ನೆ, ಸಾಕ್ಷ್ಯಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಮಾತನಾಡಿ, ಕರಾವಳಿಯ ಸಮೃದ್ಧ ಪ್ರದೇಶದ ಮೇಲೆ ಪೋರ್ಚುಗೀಸರು ಅಧಿಕಾರ ಸಾಧಿಸಲು ಹೊರಟಾಗ, ಈ ಮಣ್ಣಿನ ಮಗಳು ಹೋರಾಡಿದ್ದು ತುಳುನಾಡಿನ ಮಹಿಳೆಯರು ಧೈರ್ಯಶಾಲಿಗಳು ಎಂಬುದನ್ನು ನೆನಪಿಸುತ್ತದೆ. ರಾಣಿ ಎಂದಾಗ ನಮ್ಮ ಮನಸ್ಸಿಗೆ ಬರುವ ಕಲ್ಪನೆಯ ಹಾಗೆ ಅಬ್ಬಕ್ಕ ಇರಲಿಲ್ಲ, ಕೃಷಿಯ ಕೆಲಸಗಳನ್ನು ಮಾಡುತ್ತಾ ಸಾಮಾನ್ಯಳಾಗಿದ್ದು, ಶತ್ರುಗಳನ್ನು ಧೈರ್ಯದಿಂದ ಎದುರಿಸಿದವಳು ಎಂದರು.

ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಉಪನ್ಯಾಸಕರಾದ ಡಾ. ಯಶುಕುಮಾರ್ ಡಿ. ಅವರು ಮಾತನಾಡಿ, ಸ್ಥಳೀಯ ಚರಿತ್ರೆಯನ್ನು ಅರ್ಥಮಾಡಿಕೊಳ್ಳುವುದು ನಮ್ಮ ಭವಿಷ್ಯದ ದಾರಿಯನ್ನು ಸ್ಪಷ್ಟಗೊಳಿಸುತ್ತದೆ. ತುಳುನಾಡಿನ ಇತಿಹಾಸದ ಕುರಿತ ತಿಳುವಳಿಕೆ ನಮಗೆ ಅತ್ಯಂತ ಅಗತ್ಯ. ರಾಣಿ ಅಬ್ಬಕ್ಕಳ ಬದುಕು ತುಳುನಾಡಿನ ನಾವು ಎಂತಹ ಸ್ವಾಭಿಮಾನಿಗಳು ಎಂಬುದನ್ನು ತೋರಿಸುತ್ತದೆ ಎಂದು ಅಬ್ಬಕ್ಕನ ಧೈರ್ಯಶಾಲಿ ಸಾಹಸವನ್ನು ವಿವರಿಸಿದರು.

ನಂತರ ರಾಣಿ ಅಬ್ಬಕ್ಕನ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಕೊನೆಗೆ ಶಾಲೆಯ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಮಹಾಕವಿ ರತ್ನಾಕರವರ್ಣಿ ಪೀಠದ ಸಂಶೋಧನಾ ಸಹಾಯಕರಾದ ಪ್ರಸಾದ್ ಅವರು ನಡೆಸಿಕೊಟ್ಟರು.

ಶಾಲೆಯ ಮುಖ್ಯಶಿಕ್ಷಕರಾದ ಪ್ರಿಯಾ ಎನ್. ವಂದಿಸಿದರು. ತುಳು ಪೀಠದ ಸಂಶೋಧನಾ ಸಹಾಯಕರಾದ ಪ್ರಸಾದ್ ಅಂಚನ್ ನಿರೂಪಿಸಿದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮಂಗಳೂರು ವಿವಿ: ‘ಕನಕ ಕೀರ್ತನ ಗಂಗೋತ್ರಿ’ಗೆ ಗಾಯಕರಿಂದ ಅರ್ಜಿ ಆಹ್ವಾನ

November 9, 2026

ಕೋಟಿಪದವು ಶ್ರೀ ರಾಮ ಮಂದಿರದಲ್ಲಿ ಗೋಪೂಜೆ , ಎರಡು ಕುಟುಂಬಗಳಿಗೆ ಗೋದಾನ

November 9, 2026

ಹದಗೆಟ್ಟಿರುವ ಕುಂಪಲ ಮುಖ್ಯ ರಸ್ತೆಯ ಅಭಿವೃದ್ಧಿಗೆ ಸಚಿವ ಯು.ಟಿ. ಖಾದರ್ ಸಹಕರಿಸಲಿ: ಸತೀಶ್ ಕುಂಪಲ

November 9, 2026

Comments are closed.

Advertise
ಸಂಪರ್ಕಿಸಿ

ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಕೊಳೆತ ತರಕಾರಿ, ಕಲಬೆರಕೆ ಟೀ ಪುಡಿ ಪತ್ತೆ

October 28, 2026

ವೆನ್ಲಾಕ್‌ನಲ್ಲಿ ಕೇರಳದ ರೋಗಿಗಳು; ದ.ಕ ಬಡ ರೋಗಿಗಳಗೆ ಐಸಿಯು ಕೊರತೆ

September 29, 2026

ಅಡ್ಯಾರ್‌ನ ದಿ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ‘ದಿ ಅಲ್ಫಾಸ್’ ಥ್ರೋಬಾಲ್‌ ಪಂದ್ಯಾಟ

September 26, 2026

ರಾತ್ರಿ ಮಲಗುವಾಗ ಕಾಲುಗಳನ್ನು ಹೊದಿಕೆಯ ಹೊರಗೆ ಇಡುತ್ತೀರಾ?

September 25, 2026
All News

ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್‌ ವತಿಯಿಂದ ಭಾವೈಕ್ಯತೆಯ ಬೆಳಕಿನ ದೀಪಾವಳಿ ಸಂಭ್ರಮಾಚರಣೆ

By UllalaVaniNovember 9, 20260

ಉಳ್ಳಾಲ: ಹಬ್ಬಗಳ ಅಂತ್ಯದಲ್ಲಿ ಭಾವೈಕ್ಯತೆಯ ಸಂದೇಶ ಸಾರುತ್ತಾ ಎಲ್ಲರನ್ನೂ ಒಗ್ಗೂಡಿಸುವುದು ದೇವರು ಮೆಚ್ಚುವ ಕಾರ್ಯವಾಗಿದೆ. ಇಂತಹ ಆಚರಣೆಗಳಿಂದ ಪರಸ್ಪರರ ಸಂಸ್ಕೃತಿ,…

ಇತಿಹಾಸದ ಪುಟಗಳಲ್ಲಿ ‘ಅಬ್ಬಕ್ಕ’ ಅಜರಾಮರ: ಪ್ರೊ. ಜಗದೀಶ್ ಪ್ರಸಾದ್ ಡಿ.

November 9, 2026

ಮಂಗಳೂರು ವಿವಿ: ‘ಕನಕ ಕೀರ್ತನ ಗಂಗೋತ್ರಿ’ಗೆ ಗಾಯಕರಿಂದ ಅರ್ಜಿ ಆಹ್ವಾನ

November 9, 2026

ಕೋಟಿಪದವು ಶ್ರೀ ರಾಮ ಮಂದಿರದಲ್ಲಿ ಗೋಪೂಜೆ , ಎರಡು ಕುಟುಂಬಗಳಿಗೆ ಗೋದಾನ

November 9, 2026
1 2 3 … 2,163 Next
Automatic YouTube Gallery

ಕೊಲ್ಯದಲ್ಲಿ 58ನೇ ವಾರ್ಷಿಕ ಕ್ರೀಡಾಕೂಟ, ಓಕುಳಿ ಸಂಭ್ರಮೋತ್ಸವಕ್ಕೆ ಅದ್ದೂರಿ ಮೆರುಗು

ಕೊಲ್ಯದಲ್ಲಿ ಕ್ರೀಡಾ ಸಂಭ್ರಮದ ಜೊತೆ ಓಕುಳಿ ಹಬ್ಬದ ಸಡಗರ; ಕುಣಿದು ಕುಪ್ಪಳಿಸಿದ ಜನತೆ

ಗಣ್ಯರಿಂದ ಸಭೆಗೆ ದೀಪ ಬೆಳಗಿಸಿ ಚಾಲನೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೊಲ್ಯದಲ್ಲಿ 58ನೇ ವಾರ್ಷಿಕ ಕ್ರೀಡಾಕೂಟ, ಓಕುಳಿ ಸಂಭ್ರಮೋತ್ಸವಕ್ಕೆ ಅದ್ದೂರಿ ಮೆರುಗು
Now Playing
ಕೊಲ್ಯದಲ್ಲಿ 58ನೇ ವಾರ್ಷಿಕ ಕ್ರೀಡಾಕೂಟ, ಓಕುಳಿ ಸಂಭ್ರಮೋತ್ಸವಕ್ಕೆ ಅದ್ದೂರಿ ಮೆರುಗು
ಕೊಲ್ಯದಲ್ಲಿ ಕ್ರೀಡಾ ಸಂಭ್ರಮದ ಜೊತೆ ಓಕುಳಿ ಹಬ್ಬದ ಸಡಗರ; ಕುಣಿದು ಕುಪ್ಪಳಿಸಿದ ...
ಕೊಲ್ಯದಲ್ಲಿ ಕ್ರೀಡಾ ಸಂಭ್ರಮದ ಜೊತೆ ಓಕುಳಿ ಹಬ್ಬದ ಸಡಗರ; ಕುಣಿದು ಕುಪ್ಪಳಿಸಿದ ಜನತೆ

ಗಣ್ಯರಿಂದ ಸಭೆಗೆ ದೀಪ ಬೆಳಗಿಸಿ ಚಾಲನೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಅಸೈಗೋಳಿ: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಪಾಲಕರ ಜವಾಬ್ದಾರಿ: ಡಾ. ಸುಪ್ರಿಯಾ ಜಿ. ಶೆಟ್ಟಿ
Now Playing
ಅಸೈಗೋಳಿ: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಪಾಲಕರ ಜವಾಬ್ದಾರಿ: ಡಾ. ಸುಪ್ರಿಯಾ ಜಿ. ಶೆಟ್ಟಿ
ಸಿರಿ ಮಹಿಳಾ ಉಳಿತಾಯ ಗುಂಪುಗಳ 23ನೇ ವರ್ಷದ ಸಾಮೂಹಿಕ ದುರ್ಗಾಪೂಜೆ;ಅಸೈಗೋಳಿ ...
ಸಿರಿ ಮಹಿಳಾ ಉಳಿತಾಯ ಗುಂಪುಗಳ 23ನೇ ವರ್ಷದ ಸಾಮೂಹಿಕ ದುರ್ಗಾಪೂಜೆ;ಅಸೈಗೋಳಿ ಬಂಟರಭವನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ

ಮಹಿಳೆಯರು ಸಂಘಟಿತರಾದರೆ ಮನೆ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯ: ಗೋವರ್ಧನ ಶೆಟ್ಟಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version