ಮಂಗಳೂರು: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಉಚಿತ ಕಣ್ಣು ತಪಾಸಣೆ ಹಾಗೂ ಕನ್ನಡಕ ವಿತರಣಾ ಶಿಬಿರವನ್ನು ನವೆಂಬರ್ 17ರಂದು ಮಂಗಳೂರಿನಲ್ಲಿ ಆಯೋಜಿಸಲಾಗಿದೆ.

ಇಲ್ಯಾಸ್ ಜುಮಾ ಮಸೀದಿ, KMJ, SYS, SSF ಕಲ್ಕಟ್ಟ ಇಫುಗಲ್ ಅಧೀನದಲ್ಲಿ, ಮೆಲ್ತಿನ ಉಳ್ಳಾಲ ತಾಲ್ಲೂಕು, ಹ್ಯುಮಾನಿಟಿ ಫೌಂಡೇಶನ್ ಹಾಗೂ ಯುತ್ ಫೌಂಡೇಶನ್ ಮಂಗಳೂರು ಇವರ ಸಹಯೋಗದಲ್ಲಿ, ಪತ್ರಕರ್ತ ಬಶೀರ್ ಕಲ್ಕಟ್ಟ ಅವರ ನೇತೃತ್ವದಲ್ಲಿ ವೆಲ್ನೆಸ್, ಜಿಲ್ಲಾ ಅಂಧತ್ವ ನಿವಾರಣಾ ಘಟಕ, ಕೆಎಂಸಿ ಹಾಗೂ ಯೆನೆಪೋಯ ಪಾರಮೆಡಿಕಲ್ ವಿ.ವಿ. ಆಪ್ಟಿಕಲ್ ವಿಭಾಗದ ಸಹಯೋಗದೊಂದಿಗೆ ಈ ಶಿಬಿರ ನಡೆಯಲಿದೆ.
ನವೆಂಬರ್ 17ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ದೇರಳಕಟ್ಟೆಯ ರಿಫಾಯಿಯ ಮದ್ರಸ ಕಲ್ಕಟ್ಟ ಇಲ್ಲಿ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಶಿಬಿರದಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆ ನಡೆಸಲಾಗುವುದಲ್ಲದೆ, ಮಧುಮೇಹ, ರಕ್ತದೊತ್ತಡ ಹಾಗೂ ಚರ್ಮರೋಗ ತಪಾಸಣೆಯ ವ್ಯವಸ್ಥೆಯೂ ಇರಲಿದೆ. ಅಗತ್ಯವಿರುವವರಿಗೆ ಕನ್ನಡಕ ವಿತರಣೆ ಮಾಡಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

