ಉಳ್ಳಾಲ: ಕಳೆದ 15 ವರ್ಷಗಳಿಂದ ನಿರಂತರವಾಗಿ ಮಾಡುತ್ತಿರುವ ಸಮಾಜ ಸೇವೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನವೋದಯ ಫ್ರೆಂಡ್ಸ್ ಸರ್ಕಲ್ (ರಿ) ನೇತೃತ್ವದಲ್ಲಿ, ಪರಿಸರದ ಸಮಾನ ಮನಸ್ಕ ಸಂಘಟನೆಗಳ ಸಹಕಾರದಲ್ಲಿ ಗಾಂಧಿ ಜಯಂತಿಯ ದಿನ ಸ್ವಚ್ಛತಾ ಅಭಿಯಾನ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಉಳ್ಳಾಲ ಹಿಂದೂ ರುದ್ರಭೂಮಿಯಲ್ಲಿ ನಡೆಸಿದರು.

ಉಳ್ಳಾಲ ನಗರಸಭೆ ಆಯುಕ್ತ ಸಂತೋಷ್ ಎಸ್. ಡಿ. ಗಿಡವನ್ನು ನೆಟ್ಟು, ನವೋದಯ ಫ್ರೆಂಡ್ ಸರ್ಕಲ್ ಹಾಗೂ ಇದಕ್ಕೆ ಸಹಕರಿಸಿದ
ಸಂಘ ಸಂಸ್ಥೆಗಳು ಎಲ್ಲರಿಗೂ ಮಾದರಿಯಾಗುವ ಕಾರ್ಯಕ್ರಮವನ್ನು ಮಾಡಿದ್ದಾರೆ, ಇದು ಯುವಕರಿಗೆ ಸ್ಪೂರ್ತಿಯಾಗಬೇಕು, ನಗರವನ್ನು ಸ್ವಚ್ಛವಾಗಿಡುವ ಸಂಕಲ್ಪ ಎಲ್ಲರೂ ಮಾಡಬೇಕು, ರುದ್ರ ಭೂಮಿಯನ್ನು ಆದಷ್ಟು ಸ್ವಚ್ಚವಾಗಿಡುವ ಕೆಲಸವನ್ನು ನಗರಸಭೆಯು ಮಾಡಲಿದೆ ಎಂದು ತಿಳಿಸಿದರು.
ಉಳ್ಳಾಲ ನಗರ ಸಭೆಯ ಹಿರಿಯ ಆರೋಗ್ಯ ನಿರೀಕ್ಷಕರು ರವಿಕೃಷ್ಣ, ಅಭಿಮೋ ಟೆಕ್ನಾಲಜಿಸ್ ಫೌಂಡೇಶನ್ ನ, ಶ್ರೀಮತಿ ಬೃಂದಾ ಪೈ, ನವೀನ್ ನಾಯಕ್, ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲಾ ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮ ಗಟ್ಟಿ, ಹಿರಿಯ ಶಿಕ್ಷಕ ಜಯಾನಂದ ಅಂಚನ್, ಹಿರಿಯ ಸಮಾಜ ಸೇವಕ ಭಗವಾನ್ ದಾಸ್ ಉಳ್ಳಾಲ, ಹಿಂದೂ ರುದ್ರ ಭೂಮಿಯ ಸಂಚಾಲಕರು ಜಗದೀಶ್ ಗೋಳಿಯಡಿ. ಉದಯಕುಮಾರ್ ಆರ್. ಕೆ,ದಾಮೋದರ್ ಉಳ್ಳಾಲ್, ತೊಕ್ಕೊಟ್ಟು ರಿಕ್ಷಾ ಚಾಲಕರ ಸಂಘದ ಹಾಗೂ ನವೋದಯ ಫ್ರೆಂಡ್ಸ್ ಸರ್ಕಲ್ ನ ಗೌರವಾಧ್ಯಕ್ಷರು ಪದ್ಮನಾಭ ಉಳ್ಳಾಲ ಬೈಲ್, ಶ್ರೀಮತಿ ಶ್ರೀಲತಾ, ಅಧ್ಯಕ್ಷ ಪ್ರವೀಣ್ ಕುಮಾರ್ ಉಳ್ಳಾಲಬೈಲ್, ಶಿವಾಜಿ ಫ್ರೆಂಡ್ ಸರ್ಕಲ್ ನ ಅಧ್ಯಕ್ಷ ನವೀನ್ ಭಟ್ನಗರ, ಪ್ರಮುಖರು ಸಿರಿಲ್ ರಾಬರ್ಟ್ ಡಿಸೋಜಾ, ಶ್ರೀ ಕೊರಗತನಿಯ ಸೇವಾ ಟ್ರಸ್ಟ್ ನ ಜಯಪ್ರಕಾಶ್, ಮೋಹನ್ ದಾಸ್, ಜಗದೀಶ್, ವಿಜಯ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನವೋದಯ ಫ್ರೆಂಡ್ ಸರ್ಕಲ್ ನ ರೋಹಿತ್ ಉಳ್ಳಾಲ್ ಸ್ವಾಗತಿಸಿ, ನಿರೂಪಿಸಿದರು.

