Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

ಮಂಗಳೂರಿಗೆ ಬರಲಿದೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ; ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತ…..!

UllalaVaniBy UllalaVaniOctober 2, 2026Updated:October 2, 2026No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು: ಕರಾವಳಿ ಕರ್ನಾಟಕದ ಕ್ರೀಡಾಪ್ರೇಮಿಗಳು, ಯುವ ಕ್ರಿಕೆಟಿಗರು ಹಾಗೂ ನಾಗರಿಕರು ದಶಕಗಳಿಂದ ಕಾಣುತ್ತಿದ್ದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ವಾಣಿಜ್ಯ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಆರೋಗ್ಯ ರಂಗದಲ್ಲಿ ರಾಜ್ಯದ ಮುಂಚೂಣಿ ನಗರವಾಗಿ ಬೆಳೆದಿರುವ ಮಂಗಳೂರಿನಲ್ಲಿ ಸದ್ಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರೊಂದಿಗೆ ಬೆಂಗಳೂರಿನಲ್ಲಿ ನಡೆಸಿದ ಮಾತುಕತೆಯು ಈ ಕನಸಿನ ಯೋಜನೆಗೆ ಬಲವಾದ ಚಾಲನೆ ನೀಡಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೊಂಕಣ ಹಾಗೂ ನೈರುತ್ಯ ರೈಲ್ವೆ ಜಾಲ, ವಿಶಾಲವಾದ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ನವಮಂಗಳೂರು ಬಂದರು (NMPA) ಹೊಂದಿರುವ ಮಂಗಳೂರು ನಗರವು ಭೌಗೋಳಿಕವಾಗಿ ಜಾಗತಿಕ ಪಂದ್ಯಾವಳಿಗಳನ್ನು ನಡೆಸಲು ರಾಜ್ಯದ ಅತ್ಯಂತ ಸೂಕ್ತ ನಗರವಾಗಿದೆ ಅಲ್ಲದೆ ರಾಜ್ಯ ಮತ್ತು ದೇಶಕ್ಕೆ ಅಪಾರ ಕ್ರಿಕೆಟ್ ಪ್ರತಿಭೆಗಳನ್ನು ಧಾರೆ ಎರೆದಿದೆ. ಕೆ.ಎಲ್. ರಾಹುಲ್ ಅವರಂತಹ ವಿಶ್ವದರ್ಜೆಯ ಕ್ರಿಕೆಟಿಗರನ್ನು ದೇಶಕ್ಕೆ ನೀಡಿದೆ. ಆದರೆ ಸ್ಥಳೀಯವಾಗಿ ರಣಜಿ ಟ್ರೋಫಿ, ಐಪಿಎಲ್ (IPL) ಅಥವಾ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಸುಸಜ್ಜಿತ ಸ್ಟೇಡಿಯಂ ಇಲ್ಲದೆ ಪ್ರತಿಭೆಗಳು ಬೆಂಗಳೂರು ಇಲ್ಲವೇ ಇತರ ರಾಜ್ಯಗಳತ್ತ ಮುಖ ಮಾಡುವ ಅನಿವಾರ್ಯತೆ ಎದುರಾಗಿದೆ.

ಕೇರಳ ಗಡಿಗೆ ಹೊಂದಿಕೊಂಡಿರುವ ಮಂಗಳೂರಿನಲ್ಲಿ ಕ್ರೀಡಾಂಗಣ ನಿರ್ಮಾಣವಾದರೆ, ಇಡೀ ಪಶ್ಚಿಮ ಕರಾವಳಿ ತೀರಕ್ಕೇ ಒಂದು ಅತ್ಯಾಧುನಿಕ ಕ್ರಿಕೆಟ್ ಹಬ್ ನಿರ್ಮಾಣವಾಗಲಿದೆ ಎಂಬುದು ಮಂಗಳೂರಿಗರ ಆಶಯವಾಗಿದೆ.

ಮೈದಾನ ನಿರ್ಮಾಣಕ್ಕಾಗಿ ನಡೆದಿರುವ ಪ್ರಮುಖ ಪ್ರಯತ್ನಗಳು

ಮೂಡಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಂತೋಷ್ ಕುಮಾರ್ ಶೆಟ್ಟಿ ಅವರು ಕ್ರೀಡಾಪಟುಗಳ ಬೇಡಿಕೆಯನ್ನು ಆದ್ಯತೆಯಾಗಿ ತೆಗೆದುಕೊಂಡು, ಕೆಎಸ್‌ಸಿಎ ಸದಸ್ಯ ಅನೂಪ್ ಶ್ರೀಧರ್ ಅವರ ಮೂಲಕ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರನ್ನು ಸಂಪರ್ಕಿಸಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸ್ಟೇಡಿಯಂ ನಿರ್ಮಾಣಕ್ಕೆ ಕನಿಷ್ಠ 40 ರಿಂದ 50 ಎಕರೆ ಜಮೀನಿನ ಅಗತ್ಯವಿದ್ದು, ಇದಕ್ಕಾಗಿ ಈಗಾಗಲೇ ಎರಡು ಸೂಕ್ತ ಸ್ಥಳಗಳನ್ನು ಗುರುತಿಸಲಾಗಿದೆ. ಮೂಡಾ ವಶದಲ್ಲಿರುವ ಒಟ್ಟು 75 ಎಕರೆ ಜಮೀನಿನ ಪೈಕಿ 40 ರಿಂದ 50 ಎಕರೆಯನ್ನು ಸ್ಟೇಡಿಯಂಗೆ ಮೀಸಲಿಡಲು ಪ್ರಸ್ತಾವನೆ ಸಿದ್ಧವಾಗಿದೆ.

ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಎನ್‌ಎಂಪಿಎ (NMPA) ವ್ಯಾಪ್ತಿಯ 300 ಎಕರೆಯಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮಾಡಲು ನಿರ್ಧರಿಸಲಾಗಿದ್ದು, ಅದರಲ್ಲೂ 50 ಎಕರೆ ಪಡೆಯುವ ಬಗ್ಗೆ ಚಿಂತನೆ ನಡೆದಿದೆ.

ಸರ್ಕಾರಕ್ಕೆ ಶೂನ್ಯ ಆರ್ಥಿಕ ಹೊರೆ

ಕೆಎಸ್‌ಸಿಎ ನಿಯಮಾವಳಿಯಂತೆ ಈ ಜಮೀನನ್ನು ನೇರವಾಗಿ ಖರೀದಿಸಲು ಅಥವಾ ದೀರ್ಘಾವಧಿಯ ಲೀಸ್ ಆಧಾರದಲ್ಲಿ ಪಡೆಯಲು ಸಿದ್ಧವಿದೆ. ಸ್ಟೇಡಿಯಂ ನಿರ್ಮಾಣ, ಪಿಚ್ ಅಭಿವೃದ್ಧಿ ಹಾಗೂ ಗ್ಯಾಲರಿ ನಿರ್ಮಾಣದ ಸಂಪೂರ್ಣ ಕೋಟ್ಯಂತರ ರೂಪಾಯಿ ವೆಚ್ಚವನ್ನು ಕೆಎಸ್‌ಸಿಎ ಸಂಸ್ಥೆಯೇ ಭರಿಸಲಿದೆ.

ಸ್ಟೇಡಿಯಂ ನಿರ್ಮಾಣದಿಂದ ಮಂಗಳೂರಿಗೆ ಏನೆಲ್ಲಾ ಲಾಭ?

ನಗರದಲ್ಲಿ ಕೇವಲ ಕರಾವಳಿ ಉತ್ಸವ ಅಥವಾ ಸ್ಥಳೀಯ ಪಂದ್ಯಗಳಿಗೆ ಸೀಮಿತವಾಗಿದ್ದ ಕ್ರೀಡಾಂಗಣದ ಮೇಲಿನ ಒತ್ತಡ ಕಡಿಮೆಯಾಗಿ, ವಿಶ್ವದರ್ಜೆಯ ಮೂಲಸೌಕರ್ಯ ಯುವ ಪೀಳಿಗೆಗೆ ದೊರೆಯಲಿದೆ. ಅಂತಾರಾಷ್ಟ್ರೀಯ ಅಥವಾ ಐಪಿಎಲ್ ಪಂದ್ಯಗಳು ಮಂಗಳೂರಿನಲ್ಲಿ ನಡೆದರೆ ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ನಗರಕ್ಕೆ ಬರಲಿದ್ದಾರೆ. ಇದರಿಂದ ಕರಾವಳಿಯ ಹೊಟೇಲ್, ರೆಸಾರ್ಟ್, ಸಾರಿಗೆ, ರೆಸ್ಟೋರೆಂಟ್ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೋಟ್ಯಂತರ ರೂಪಾಯಿ ವಹಿವಾಟು ಹರಿದುಬರಲಿದೆ. ಸ್ಥಳೀಯ ಯುವಕರಿಗೆ ಕ್ರೀಡಾ ತರಬೇತಿ ಅಕಾಡೆಮಿಗಳು, ಈವೆಂಟ್ ಮ್ಯಾನೇಜ್‌ಮೆಂಟ್, ಸೆಕ್ಯುರಿಟಿ, ಆತಿಥ್ಯ ಸೇರಿದಂತೆ ನೂರಾರು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.

ಮೂಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ “ನಾನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನವೇ, ಮೂಡಾ ಎಂದರೆ ಕೇವಲ ಸಿಂಗಲ್ ಸೈಟ್ ಹಂಚುವ ಸಂಸ್ಥೆಯಾಗದೆ ಮಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಶಾಶ್ವತ ಕೊಡುಗೆ ನೀಡಬೇಕು ಎಂದು ಸಂಕಲ್ಪ ಮಾಡಿದ್ದೆ. ಮಂಗಳೂರಿನ ಮಕ್ಕಳಿಗೆ ಕ್ರೀಡಾಂಗಣದ ಬಹುದಿನಗಳ ಕನಸಿದೆ. ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಮಂಗಳೂರಿನ ಸಂಪರ್ಕ ಜಾಲ ಮತ್ತು ಸಾಮರ್ಥ್ಯ ಕಂಡು ಅತ್ಯಂತ ಉತ್ಸಾಹದಿಂದ ಸ್ಪಂದಿಸಿದ್ದಾರೆ. ಈಗಾಗಲೇ ಚೇಳ್ಯಾರು ಹಾಗೂ ಎನ್‌ಎಂಪಿಎ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸಲಾಗಿದೆ. ವೆಂಕಟೇಶ್ ಪ್ರಸಾದ್ ಅವರು ಶೀಘ್ರವೇ ಮಂಗಳೂರಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಹಾಗೂ ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಜಾಗ ಅಂತಿಮಗೊಳಿಸಿ, ಈ ಯೋಜನೆಗೆ ಗಟ್ಟಿ ಬುನಾದಿ ಹಾಕುತ್ತೇವೆ.” ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೊರತುಪಡಿಸಿದರೆ, ರಾಜ್ಯದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಕ್ರೀಡಾಂಗಣಗಳ ಕೊರತೆ ಬಹಳಷ್ಟಿದೆ. ಇದೀಗ ಮಂಗಳೂರಿನಲ್ಲಿ ಮೂಡಾ ಹಾಗೂ ಕೆಎಸ್‌ಸಿಎ ಕೈಜೋಡಿಸಿ ಹೆಜ್ಜೆಯಿಟ್ಟಿರುವುದು ಕರಾವಳಿಯ ಪಾಲಿಗೆ ಅತ್ಯಂತ ಭರವಸೆಯ ಬೆಳವಣಿಗೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಹಾಗೂ ಆಡಳಿತ ವ್ಯವಸ್ಥೆ ಇಚ್ಛಾಶಕ್ತಿಯಿಂದ ಕೈಜೋಡಿಸಿದರೆ, ಮುಂದಿನ ದಿನಗಳಲ್ಲಿ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆಯರು ಅಬ್ಬರಿಸುವ, ಐಪಿಎಲ್ ಹಬ್ಬ ಕರಾವಳಿಯ ಕಡಲತೀರದಲ್ಲಿ ಮೇಳೈಸುವ ದಿನಗಳು ದೂರವಿಲ್ಲ ಎಂಬದು ಮಂಗಳೂರಿಗರ ಮನದ ಮಾತಾಗಿದೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಸಂತ ಅಲೋಶಿಯಸ್ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟ ಸಂಭ್ರಮ

November 21, 2026

ಪರಿಸರಕ್ಕೆ ಹಾನಿಯಾಗದಂತೆ ಉತ್ಸವಗಳು ನಡೆಯಲಿ: ಕೆ.ಎನ್. ಆಳ್ವ

November 21, 2026

ಎಸ್‌ಎಸ್‌ಎಫ್ ತಲಪಾಡಿ ಯೂನಿಟ್ ಸದಸ್ಯತ್ವ ಸಂಭ್ರಮ

November 21, 2026

Comments are closed.

Advertise
ಸಂಪರ್ಕಿಸಿ

ಮೈಸೂರು ಬಾವ ಜನ್ಮದಿನಕ್ಕೆ ಹಿಂದೂ ಗೆಳೆಯರಿಂದ ಸೌಹಾರ್ದದ ಸಂಭ್ರಮ; ಆಶ್ರಮದಲ್ಲಿ ಅನ್ನದಾನ, ಸಾರ್ವಜನಿಕರಿಗೆ ಪಾನೀಯ ವಿತರಣೆ ನಾಟೆಕಲ್‌ನಿಂದ ದೇರಳಕಟ್ಟೆವರೆಗೆ ಬ್ಯಾನರ್‌ಗಳ ಮೂಲಕ ಶುಭಾಶಯ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

November 15, 2026

ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಕೊಳೆತ ತರಕಾರಿ, ಕಲಬೆರಕೆ ಟೀ ಪುಡಿ ಪತ್ತೆ

October 28, 2026

ವೆನ್ಲಾಕ್‌ನಲ್ಲಿ ಕೇರಳದ ರೋಗಿಗಳು; ದ.ಕ ಬಡ ರೋಗಿಗಳಗೆ ಐಸಿಯು ಕೊರತೆ

September 29, 2026

ಅಡ್ಯಾರ್‌ನ ದಿ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ‘ದಿ ಅಲ್ಫಾಸ್’ ಥ್ರೋಬಾಲ್‌ ಪಂದ್ಯಾಟ

September 26, 2026
suddi

ಸಂತ ಅಲೋಶಿಯಸ್ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟ ಸಂಭ್ರಮ

By UllalaVaniNovember 21, 20260

ಉರ್ವ: ಸಂತ ಅಲೋಶಿಯಸ್ ಶಾಲೆ, ಉರ್ವದಲ್ಲಿ ಪೋಷಕರಿಗಾಗಿ ಕ್ರೀಡಾ ದಿನಾಚರಣೆಯನ್ನು ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಮುಖ್ಯ…

ಪರಿಸರಕ್ಕೆ ಹಾನಿಯಾಗದಂತೆ ಉತ್ಸವಗಳು ನಡೆಯಲಿ: ಕೆ.ಎನ್. ಆಳ್ವ

November 21, 2026

ಎಸ್‌ಎಸ್‌ಎಫ್ ತಲಪಾಡಿ ಯೂನಿಟ್ ಸದಸ್ಯತ್ವ ಸಂಭ್ರಮ

November 21, 2026

ಮಂಗಳೂರು ವಿವಿಯಲ್ಲಿ ಐದು ದಿನಗಳಮಕ್ಕಳ ಚಲನಚಿತ್ರೋತ್ಸವಕ್ಕೆ ಚಾಲನೆ

November 19, 2026
1 2 3 … 2,174 Next
Automatic YouTube Gallery
Error 403 The request cannot be completed because you have exceeded your quota. : quotaExceeded
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version