Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

ವೆನ್ಲಾಕ್‌ನಲ್ಲಿ ಕೇರಳದ ರೋಗಿಗಳು; ದ.ಕ ಬಡ ರೋಗಿಗಳಗೆ ಐಸಿಯು ಕೊರತೆ

UllalaVaniBy UllalaVaniSeptember 29, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು: ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಅಧೀನದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕೇರಳ ಸೇರಿದಂತೆ ಇತರ ರಾಜ್ಯಗಳ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ನಡುವೆಯೇ, ಪುತ್ತೂರು, ಸುಳ್ಯ, ಬಂಟ್ವಾಳ, ಮೂಡುಬಿದಿರೆ ಮತ್ತು ಮಂಗಳೂರು ಭಾಗದ ಬಡ ರೋಗಿಗಳಿಗೆ ಐಸಿಯು ಸೌಲಭ್ಯ ಸಿಗದೆ ಪರದಾಡುವ ಪರಿಸ್ಥಿತಿ ಇದೆ ಎಂಬ ಪ್ರಶ್ನೆ ಸಾಮಾಜಿಕ ಕಾರ್ಯಕರ್ತರಿಂದ ಕೇಳಿಬಂದಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಸಾಮಾಜಿಕ ಕಾರ್ಯಕರ್ತ ಸಂಜೀವ್ ಅವರು ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ವೆನ್ಲಾಕ್‌ನಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದ ಕೇರಳದ ಒಳರೋಗಿ ಮತ್ತು ಹೊರರೋಗಿಗಳ ಸಂಖ್ಯೆ, ವಿಳಾಸ, ಒಟ್ಟು ಅಂಕಿ-ಅಂಶ ಹಾಗೂ ಚಿಕಿತ್ಸೆಗೆ ತಗಲಿದ ಅಂದಾಜು ವೆಚ್ಚದ ವಿವರಗಳನ್ನು ಕೇಳಿದ್ದರು. ವೆನ್ಲಾಕ್ ಆರೋಗ್ಯ ರಕ್ಷಾ ಸಮಿತಿಗೆ ಕೇರಳ ಸರ್ಕಾರದಿಂದ ಹಣಕಾಸು ಸಹಕಾರ ದೊರೆತಿದೆಯೇ ಎಂಬ ಮಾಹಿತಿಯನ್ನೂ ಕೋರಲಾಗಿತ್ತು.

ಈ ಅರ್ಜಿಗೆ ಸಂಬಂಧಿಸಿ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರು, ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆ, ಮಂಗಳೂರು ಅವರು ವೆನ್ಲಾಕ್/ಜಿಎನ್‌ಎಲ್/ಮಾಹಿ/33/2026-27, ದಿನಾಂಕ 24-09-2026ರ ಪತ್ರದಲ್ಲಿ ಉತ್ತರ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸಹಾಯಕ ಆಡಳಿತಾಧಿಕಾರಿಯವರ ಅಎ(2)ಮಾಹಿ/30/2026-27, ದಿನಾಂಕ 10-09-2026ರ ಪತ್ರವು 15-09-2026ರಂದು ಕಚೇರಿಗೆ ತಲುಪಿತ್ತು ಎಂದು ತಿಳಿಸಲಾಗಿದೆ.

ಅಧಿಕಾರಿಗಳ ಉತ್ತರದ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆಯುವ ಪ್ರಕರಣಗಳು ಅಥವಾ ಇತರ ರಾಜ್ಯಗಳ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿಲ್ಲ. ಹಾಗದರೆ ಹಣ ಪಡೆದು ಚಿಕಿತ್ಸೆ ಕೊಡಲಾಗುತ್ತಿದೆಯೇ ? ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ಕೇರಳ ಸರ್ಕಾರದಿಂದ ಯಾವುದೇ ಹಣಕಾಸು ಸಹಕಾರವೂ ದೊರೆತಿಲ್ಲ ಎಂದು ತಿಳಿಸಲಾಗಿದೆ.

ಆದರೆ ಕೇರಳದಿಂದ ಎಷ್ಟು ಮಂದಿ ರೋಗಿಗಳು ವೆನ್ಲಾಕ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ ಅಥವಾ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮೂಲಭೂತ ಮಾಹಿತಿಗೆ ಸ್ಪಷ್ಟ ಉತ್ತರ ನೀಡಲಾಗಿಲ್ಲ. ರೋಗಿಗಳ ಸಂಖ್ಯೆ, ವಿಳಾಸ, ಚಿಕಿತ್ಸಾ ವೆಚ್ಚ ಸೇರಿದಂತೆ ಸಂಬಂಧಿತ ಅಂಕಿ-ಅಂಶ ಅಥವಾ ದಾಖಲೆಗಳನ್ನು ಒದಗಿಸಲಾಗಿಲ್ಲ. ಇದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಇತರ ರಾಜ್ಯಗಳ ರೋಗಿಗಳ ಚಿಕಿತ್ಸೆಯ ಪ್ರಮಾಣ ಮತ್ತು ವೆಚ್ಚವನ್ನು ಹೇಗೆ ಪರಿಶೀಲಿಸಲಾಗುತ್ತದೆ ಎಂಬ ಪ್ರಶ್ನೆ ಮೂಡಿದೆ.

ಕೇರಳದ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದಾದರೆ, ಅವರಿಂದ ಹಣ ಪಡೆದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಯಾವ ಸರ್ಕಾರಿ ಆದೇಶ ಅಥವಾ ನಿಯಮ ಅನ್ವಯಿಸುತ್ತದೆ? ಎಷ್ಟು ಹಣ ಸಂಗ್ರಹಿಸಲಾಗಿದೆ? ಆ ಹಣ ಯಾವ ಖಾತೆಗೆ ಜಮೆಯಾಗುತ್ತದೆ? ಎಂಬುದನ್ನು ಆರೋಗ್ಯ ಇಲಾಖೆ ಸ್ಪಷ್ಟಪಡಿಸಬೇಕಾಗಿದೆ.

ವೆನ್ಲಾಕ್ ಸರ್ಕಾರಿ ಜಿಲ್ಲಾ ಆಸ್ಪತ್ರೆಯಾಗಿರುವಾಗ, ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಬಜೆಟ್ ಮತ್ತು ಸಾರ್ವಜನಿಕ ಸಂಪನ್ಮೂಲಗಳಿಂದ ನಡೆಯುವ ಆಸ್ಪತ್ರೆಯಲ್ಲಿ ಕೇರಳದ ಎಷ್ಟು ಮಂದಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ದಾಖಲೆ ಇಲ್ಲದಿರುವುದು ಏಕೆ? ಎಂಬ ಪ್ರಶ್ನೆಯೂ ಎದುರಾಗಿದೆ. ಕೇರಳದ ಬಡ ರೋಗಿಗಳಿಗೆ ಚಿಕಿತ್ಸೆ ನೀಡಬಾರದು ಎಂಬುದು ಪ್ರಶ್ನೆಯಲ್ಲ; ಆದರೆ ಸರ್ಕಾರಿ ಸಂಪನ್ಮೂಲ ಬಳಕೆಯಾಗುತ್ತಿದ್ದರೆ ಅದರ ಸಂಪೂರ್ಣ ಲೆಕ್ಕ ಮತ್ತು ದಾಖಲೆ ಇರಬೇಕೆಂಬುದು ಸಾಮಾಜಿಕ ಕಾರ್ಯಕರ್ತರ ಆಗ್ರಹವಾಗಿದೆ.

ಇನ್ನೊಂದೆಡೆ, ಸ್ಥಳೀಯ ಬಡ ಕುಟುಂಬಗಳು ಖಾಸಗಿ ಆಸ್ಪತ್ರೆಗಳ ದುಬಾರಿ ಚಿಕಿತ್ಸಾ ವೆಚ್ಚ ಭರಿಸಲು ಜಮೀನು ಅಥವಾ ಆಸ್ತಿ ಮಾರಾಟ ಮಾಡುವ ಪರಿಸ್ಥಿತಿಯ ಉದಾಹರಣೆಗಳಿವೆ. ಇಂತಹ ಸಂದರ್ಭದಲ್ಲಿ ಸ್ಥಳೀಯರಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ಐಸಿಯು ಸಿಗದೆ ಪರದಾಡುವ ಪರಿಸ್ಥಿತಿ ಏಕೆ? ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕಾಗಿದೆ.

ಆರೋಗ್ಯ ಇಲಾಖೆ ಕಳೆದ ಮೂರು ವರ್ಷಗಳ ಕೇರಳ ಸೇರಿದಂತೆ ಇತರ ರಾಜ್ಯಗಳ ರೋಗಿಗಳ ಸಂಖ್ಯೆ, ಐಸಿಯು ಬಳಕೆ, ಚಿಕಿತ್ಸಾ ವೆಚ್ಚ, ಸಂಗ್ರಹಿಸಲಾದ ಶುಲ್ಕ ಹಾಗೂ ಅನ್ವಯಿಸುವ ಸರ್ಕಾರಿ ಆದೇಶಗಳ ವಿವರಗಳನ್ನು ಸಾರ್ವಜನಿಕಗೊಳಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಕೇರಳದ ರೋಗಿಗಳ ಸಂಖ್ಯೆ ಎಷ್ಟು? ಚಿಕಿತ್ಸಾ ವೆಚ್ಚ ಎಷ್ಟು? ಹಣವನ್ನು ಯಾರು ಭರಿಸುತ್ತಿದ್ದಾರೆ? ಯಾವ ನಿಯಮದಡಿ ಚಿಕಿತ್ಸೆ ನೀಡಲಾಗುತ್ತಿದೆ?ವೆನ್ಲಾಕ್ ಕುರಿತು ಆರೋಗ್ಯ ಇಲಾಖೆ ದಾಖಲೆ ಸಹಿತ ಸ್ಪಷ್ಟ ಉತ್ತರ ನೀಡಬೇಕಾಗಿದೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ದೇಶದ ಹಿತಾಸಕ್ತಿ ರಕ್ಷಣೆಗೆ ವಾಯುಶಕ್ತಿಯೇ ಪ್ರಮುಖ ಅಸ್ತ್ರ – ವಾಯುಪಡೆ ಮುಖ್ಯಸ್ಥ ಎ.ಪಿ. ಸಿಂಗ್

October 8, 2026

‘ನನ್ನನ್ನೇ ಟ್ರ್ಯಾಪ್ ಮಾಡಲು ಯತ್ನಿಸಿದ್ದರು’ – ಸ್ಟಿಂಗ್ ಆಪರೇಷನ್ ಬಗ್ಗೆ ಸಿಎಂ ಡಿಕೆಶಿ ಸ್ಫೋಟಕ ಹೇಳಿಕೆ

October 8, 2026

‘ಅಡುಗೆ ಎಣ್ಣೆ ಮರುಬಳಕೆ ವಿರುದ್ಧ ಶೀಘ್ರ ಕ್ರಮ’- ಯು.ಟಿ.ಖಾದರ್

October 8, 2026

Comments are closed.

Advertise
ಸಂಪರ್ಕಿಸಿ

ವೆನ್ಲಾಕ್‌ನಲ್ಲಿ ಕೇರಳದ ರೋಗಿಗಳು; ದ.ಕ ಬಡ ರೋಗಿಗಳಗೆ ಐಸಿಯು ಕೊರತೆ

September 29, 2026

ಅಡ್ಯಾರ್‌ನ ದಿ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ‘ದಿ ಅಲ್ಫಾಸ್’ ಥ್ರೋಬಾಲ್‌ ಪಂದ್ಯಾಟ

September 26, 2026

ರಾತ್ರಿ ಮಲಗುವಾಗ ಕಾಲುಗಳನ್ನು ಹೊದಿಕೆಯ ಹೊರಗೆ ಇಡುತ್ತೀರಾ?

September 25, 2026

ಇನ್ನುಂದೆ ಕೃತಕ ಪನೀರ್‌ಗೆ ಅನಲಾಗ್ ಪನೀರ್ ಎಂದು ಹೆಸರು ಬದಲಿಸುವಂತೆ ಕೇಂದ್ರ ನೋಟಿಫಿಕೇಷನ್

September 25, 2026
suddi

ದೇಶದ ಹಿತಾಸಕ್ತಿ ರಕ್ಷಣೆಗೆ ವಾಯುಶಕ್ತಿಯೇ ಪ್ರಮುಖ ಅಸ್ತ್ರ – ವಾಯುಪಡೆ ಮುಖ್ಯಸ್ಥ ಎ.ಪಿ. ಸಿಂಗ್

By UllalaVaniOctober 8, 20260

ಗಾಜಿಯಾಬಾದ್, ಅ.08 : ಭಾರತೀಯ ವಾಯುಪಡೆ ಇಂದು ಅತ್ಯಾಧುನಿಕ, ಸಮರ್ಥ, ನೆಟ್‌ವರ್ಕ್ ಕೇಂದ್ರಿತ ಹಾಗೂ ಬಹು-ಡೊಮೇನ್ ಸಾಮರ್ಥ್ಯ ಹೊಂದಿರುವ ಪಡೆಯಾಗಿ…

‘ನನ್ನನ್ನೇ ಟ್ರ್ಯಾಪ್ ಮಾಡಲು ಯತ್ನಿಸಿದ್ದರು’ – ಸ್ಟಿಂಗ್ ಆಪರೇಷನ್ ಬಗ್ಗೆ ಸಿಎಂ ಡಿಕೆಶಿ ಸ್ಫೋಟಕ ಹೇಳಿಕೆ

October 8, 2026

‘ಅಡುಗೆ ಎಣ್ಣೆ ಮರುಬಳಕೆ ವಿರುದ್ಧ ಶೀಘ್ರ ಕ್ರಮ’- ಯು.ಟಿ.ಖಾದರ್

October 8, 2026

ಮಂಗಳೂರು : ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಮಹಿಳೆಗೆ 2 ಕೋ.ರೂ. ವಂಚನೆ

October 8, 2026
1 2 3 … 2,128 Next
Automatic YouTube Gallery

ರಾಜಕಾರಣದಲ್ಲಿ ಸಚಿವ ಯು.ಟಿ.ಖಾದರ್‌ ಅವರಂತಹ ವ್ಯಕ್ತಿ ಇರುವುದು ಬಲು ಅಪರೂಪ: ಡಾ. ಮೋಹನ್‌ ಆಳ್ವ

ರಾಜಕಾರಣದಲ್ಲಿ ಸಚಿವ ಯು.ಟಿ.ಖಾದರ್‌ ಅವರಂತಹ ವ್ಯಕ್ತಿ ಇರುವುದು ಬಲು ಅಪರೂಪ: ಸಚಿವ ಯು.ಟಿ.ಖಾದರ್‌ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ. ಮೋಹನ್‌ ಆಳ್ವ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ರಾಜಕಾರಣದಲ್ಲಿ  ಸಚಿವ ಯು.ಟಿ.ಖಾದರ್‌ ಅವರಂತಹ ವ್ಯಕ್ತಿ ಇರುವುದು ಬಲು ಅಪರೂಪ:  ಡಾ. ಮೋಹನ್‌ ಆಳ್ವ
Now Playing
ರಾಜಕಾರಣದಲ್ಲಿ ಸಚಿವ ಯು.ಟಿ.ಖಾದರ್‌ ಅವರಂತಹ ವ್ಯಕ್ತಿ ಇರುವುದು ಬಲು ಅಪರೂಪ: ಡಾ. ಮೋಹನ್‌ ಆಳ್ವ
ರಾಜಕಾರಣದಲ್ಲಿ ಸಚಿವ ಯು.ಟಿ.ಖಾದರ್‌ ಅವರಂತಹ ವ್ಯಕ್ತಿ ಇರುವುದು ಬಲು ಅಪರೂಪ: ಸಚಿವ ...
ರಾಜಕಾರಣದಲ್ಲಿ ಸಚಿವ ಯು.ಟಿ.ಖಾದರ್‌ ಅವರಂತಹ ವ್ಯಕ್ತಿ ಇರುವುದು ಬಲು ಅಪರೂಪ: ಸಚಿವ ಯು.ಟಿ.ಖಾದರ್‌ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ. ಮೋಹನ್‌ ಆಳ್ವ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಅವಕಾಶವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಕೊಂಡಾಗ ಸಾಧನೆ ಸಾಧ್ಯ - ಮಮತ ಡಿ.ಎಸ್ ಗಟ್ಟಿ
Now Playing
ಅವಕಾಶವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಕೊಂಡಾಗ ಸಾಧನೆ ಸಾಧ್ಯ - ಮಮತ ಡಿ.ಎಸ್ ಗಟ್ಟಿ
14,17ವರ್ಷ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ಕುಸ್ತಿ ...
14,17ವರ್ಷ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟ;ಪAದ್ಯಾಟಕ್ಕೆ ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ ಚಾಲನೆ

ಮಂಗಳೂರಿನ ಮಂಗಳ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜನೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version