
ತೊಕ್ಕೊಟ್ಟು: ಇಲ್ಲಿನ ಕೃಷ್ಣನಗರ ನಿವಾಸಿ ಕವಿತ್ (35) ಮೈಸೂರಿಗೆ ನಾಸಿಕ್ ಬ್ಯಾಂಡ್ ತಂಡದ ಜೊತೆಗೆ ತೆರಳಿದ್ದ ಸಂದರ್ಭ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಫರ್ನಿಚರ್ ಕೆಲಸವನ್ನು ನಡೆಸುತ್ತಿದ್ದ ಕವಿತ್, ದೇವಸ್ಥಾನ, ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದರು. ಮೈಸೂರಿನ ಹಳ್ಳಿಯೊಂದರಲ್ಲಿ ನಡೆಯುತ್ತಿದ್ದ ಗಣೇಶೋತ್ಸವ ಕಾರ್ಯಕ್ರಮಕ್ಕೆ ನಾಸಿಕ್ ಬ್ಯಾಂಡ್ ತಂಡದ ಜೊತೆಗೆ ಬಸ್ಸಿನಲ್ಲಿ ತೆರಳಿದ್ದ ಸಂದರ್ಭ ಅಲ್ಲಿ ಅಸೌಖ್ಯಕ್ಕೀಡಾಗಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಮೃತ ಕವಿತ್ ಅವಿವಾಹಿತರಾಗಿದ್ದು, ತಾಯಿ ಮತ್ತು ಓರ್ವ ಸಹೋದರನನ್ನು ಅಗಲಿದ್ದಾರೆ.

