ಕೊಣಾಜೆ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಿವ್ಯಶಕ್ತಿ ತೇಂಬೂರು ಪಾವೂರು ಇದರ ಆಶ್ರಯದಲ್ಲಿ ಹೊಸಬೆಟ್ಟು ಮೈದಾನದಲ್ಲಿ ಆಯೋಜಿಸಿದ್ದ ನಾಲ್ಕನೇ ವರ್ಷದ ಆಟೋಟ ಸ್ಪರ್ಧೆಗೆ ರಕ್ಷಿತ್ ರೈ ಪಾವೂರುಗುತ್ತು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಯೋಗೀಶ್ ಹೆಗ್ಡೆ ತೇಂಬೂರು, ಪ್ರದೀಪ್ ಶೆಟ್ಟಿ ತೇಂಬೂರು, ಪುಷ್ಪರಾಜ್ ಶೆಟ್ಟಿ ಪಾವೂರು, ಉದಯ ಕುಮಾರ್ ಶೆಟ್ಟಿ ಮಂಚವುದಡಿ, ಪ್ರಜ್ವಲ್ ಪಾವೂರು ಭಂಡಾರಮನೆ, ಪಾವೂರು ಪಂಚಾಯತ್ ಸದಸ್ಯ ರಿಯಾಝ್ ಗಾಡಿಗದ್ದೆ, ನಿತೇಶ್ ಭಂಡಾರಮನೆ, ಧೀರಜ್ ಶೆಟ್ಟಿ ಮಟ್ಟ, ಸತೀಶ್ ಪೋಡಾರ್ ಸೈಟ್, ಸಿತೇಶ್ ಭಂಡಾರಮನೆ, ಜಿತೇಶ್ ಕಡವಿನ ಬಳಿ ಮತ್ತಿತರರು ಉಪಸ್ಥಿತರಿದ್ದರು.

ಪ್ರೇಮ್ ರಾಜ್ ಪಾವೂರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರ್ವಹಿಸಿದರು.



