ಮುಡಿಪು: ಮುಡಿಪು ಗೋವರ್ಧನ ಗಿರಿಯ ಶ್ರೀ ಕೃಷ್ಣ ಧ್ಯಾನ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಭಜನಾ ಸಂಕೀರ್ತನೆಗೆ ಟ್ರಸ್ಟಿ ಭರತ್ ನಾಯ್ಕ್ ನಕ್ರೆಗುತ್ತು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಧ್ಯಾ ಮಂದಿರದ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲು, ಪ್ರ. ಕಾರ್ಯದರ್ಶಿ ವಿಕಾಸ್ ಎಂ., ಭಜನಾ ಸಂಚಾಲಕ ರಾಜಶೇಖರ ಶೆಟ್ಟಿ ಇರಾ, ರವಿ ರೈ ಪಜೀರು, ಸುಮಲತಾ ಕೊಣಾಜೆ, ನವೀನ್ ಶೆಟ್ಟಿ ಕುಂಟು ಪುಣಿ, ಭುಜಂಗ ಜೋಗಿ ಕಣಂತೂರು, ಹರಿಪ್ರಸಾದ್ ಶೆಟ್ಟಿ ಪಾದೆ, ಜಗದೀಶ್ ಆಚಾರ್ಯ, ಗೋಪಾಲ ಆಚಾರ್ಯ, ಮಾಪಣ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.


