Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

ನಾರಾಯಣ ಗುರುಗಳ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ : ಚಂದ್ರಹಾಸ್‌ ಪಂಡಿತ್‌ಹೌಸ್

UllalaVaniBy UllalaVaniAugust 28, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ: ಹಿಂದುಳಿದ ಸಮಾಜವನ್ನು ಸಂಘಟಿಸಿ ಸಮಾಜದ ಮುಖ್ಯವಾಹಿನಿಗೆ ತಂದು, ಎಲ್ಲರಿಗೂ ಗೌರವದ ಸ್ಥಾನ ದೊರಕಿಸಿಕೊಟ್ಟ ನಾರಾಯಣ ಗುರುಗಳ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. “ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎಂಬ ಗುರುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿಂದೂ ಧರ್ಮದ ದೊಡ್ಡ ಸಮಾಜವಾಗಿರುವ ಬಿಲ್ಲವ ಸಮಾಜ ಎಲ್ಲರಿಗೂ ಮಾದರಿಯಾಗಬೇಕು ಎಂದು ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷರಾದ ಚಂದ್ರಹಾಸ್‌ ಪಂಡಿತ್‌ ಹೌಸ್‌ ಹೇಳಿದರು.

ಕೊಲ್ಯ–ಸೋಮೇಶ್ವರದ ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮದಿನಾಚರಣೆ ಪ್ರಯುಕ್ತ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಜಯಾನಂದ ಎಂ. ಮಾತನಾಡಿ, ಬಿಲ್ಲವ ಮಹಾಮಂಡಲದ ಕಾರ್ಯದರ್ಶಿ ಹಾಗೂ ನಿವೃತ್ತ ಮೆಸ್ಕಾಂ ಅಧಿಕಾರಿ ದಯಾನಂದ ಎಂ. ಮಾತನಾಡಿ, ಕೇರಳದಲ್ಲಿ ಆಚರಿಸುವ ಓಣಂ ಹಬ್ಬದ ಸಂದರ್ಭದಲ್ಲಿ, ಮೂರನೇ ದಿನ ಶತಭಿಷಾ ನಕ್ಷತ್ರದಲ್ಲಿ ವಿಶ್ವಮಾನವ ನಾರಾಯಣ ಗುರುಗಳು ಜನಿಸಿದರು. ಅವರ ದೈವ ದರ್ಶನಂ ಕೃತಿಯು ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಅನಾವರಣಗೊಂಡಿರುವುದು ಸಂತಸದ ಸಂಗತಿ. ಈ ಕೃತಿ 137 ಭಾಷೆಗಳಿಗೆ ಅನುವಾದಗೊಂಡು ಅಧ್ಯಯನದ ವಸ್ತುವಾಗಿದೆ.

ವೃದ್ಧಾಪ್ಯದಲ್ಲಿ ತಂದೆ-ತಾಯಂದಿರು ಆಶ್ರಮವಾಸಿಗಳಾಗದಂತೆ ಮಕ್ಕಳು ಅವರನ್ನು ನೋಡಿಕೊಳ್ಳಬೇಕು. ಹೆತ್ತವರ ಜವಾಬ್ದಾರಿಯನ್ನು ಪೂರ್ಣಗೊಳಿಸಿ ಗುರುಗಳ ಸಂದೇಶವನ್ನು ಪಾಲಿಸಬೇಕು. ಜೀವನದ ವಿವಿಧ ಹಂತಗಳಲ್ಲಿ ಹೆತ್ತವರನ್ನು ಸಲಹುವುದು ಮತ್ತು ಅವರ ಆರೈಕೆ ಮಾಡುವುದು ಮಕ್ಕಳ ಕರ್ತವ್ಯವಾಗಿದೆ .ಗುರು ಚಾರಿಟೇಬಲ್ ಟ್ರಸ್ಟ್ ಹಲವು ವರ್ಷಗಳಿಂದ ಅಶಕ್ತ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತಾ ಬಂದಿದೆ. ಕಠಿಣ ಪರಿಸ್ಥಿತಿಯಲ್ಲಿರುವ ಮಕ್ಕಳ ಬದುಕನ್ನು ಸಮೀಕ್ಷೆಗಳ ಮೂಲಕ ಗುರುತಿಸಿ ಅವರಿಗೆ ನೆರವಾಗುವ ಕಾರ್ಯ ಮುಂದುವರಿಯಬೇಕು ಎಂದರು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರಕುವಲ್ಲಿ ಗುರುಗಳ ಹೋರಾಟವೂ ಮಹತ್ವದ ಪಾತ್ರ ವಹಿಸಿದೆ. ಸಮಾಜದಲ್ಲಿ ಪ್ರತಿಯೊಬ್ಬರೂ ಗೌರವಯುತವಾಗಿ ಬದುಕಬೇಕು ಎಂಬ ನಿಟ್ಟಿನಲ್ಲಿ ನಾರಾಯಣ ಗುರುಗಳ ತತ್ವಗಳು ಮಾರ್ಗದರ್ಶನ ನೀಡುತ್ತವೆ. ಗುರುಗಳು ಕೊಲ್ಯಕ್ಕೆ ಭೇಟಿ ನೀಡಿದ ಹಿನ್ನೆಲೆ ಕೊಲ್ಯ ಪವಿತ್ರ ಮಣ್ಣಿನ ಪ್ರದೇಶವಾಗಿದ್ದು, ಅವರ ಹೆಸರಿನಲ್ಲಿ ನಡೆಯುತ್ತಿರುವ ಸಮಾಜಸೇವಾ ಕಾರ್ಯಗಳು ಶ್ಲಾಘನೀಯ .ಸಾಮಾಜಿಕ ಬದುಕಿನಲ್ಲಿ ನಾರಾಯಣ ಗುರುಗಳ ಮಂದಿರ ಸ್ಥಾಪನೆಯಾಗಲು ಜನಾರ್ದನ ಪೂಜಾರಿ ಅವರ ಕೊಡುಗೆ ಮಹತ್ವದ್ದಾಗಿದೆ. ಅದ್ದೂರಿ ಮದುವೆ ಸೇರಿದಂತೆ ಅನಗತ್ಯ ಆಡಂಬರಗಳಿಗೆ ಅವರು ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದು, ಸರಳತೆ ಶಾಶ್ವತ, ಪ್ರಾಮಾಣಿಕತೆ ಮಾತ್ರ ಶಾಶ್ವತ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕರು ಸಿ. ಎ. ಶ್ರೀವತ್ಸ ಎನ್. ಬಲ್ಲಕುರಾಯ, ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರು ದಿವ್ಯ ಸತೀಶ್ ಶೆಟ್ಟಿ, ಆತ್ಮಶಕ್ತಿ ಪತ್ರಿಕೆಯ ಸಹಾಯಕ ಸಂಪಾದಕರು ವಿಶ್ವನಾಥ ಪೂಜಾರಿ ರೆಂಜಾಳ , ಬಿಲ್ಲವ ಸೇವಾ ಸಮಾಜದ ಅಧ್ಯಕ್ಷರು ಗೋಪಾಲ ಕೊಂಡಾಣ, ಟ್ರಸ್ಟ್ ಗೌರವಾಧ್ಯಕ್ಷರು ಈಶ್ವರ್ ಸುವರ್ಣ, ನಾರಾಯಣ ಗುರುಗಳ ಮಹಿಳಾ ಮಂಡಳಿ ಅಧ್ಯಕ್ಷೆ ತ್ರಿವೇಣಿ ಕುಂಪಲ, ಸಾಂಸ್ಕೃತಿಕ ಸಂಚಾಲಕರು ಜೀವನ್ ಕೊಲ್ಯ‌ ಉಪಸ್ಥಿತರಿದ್ದರು.
ಕುಸುಮಾಕರ ಕುಂಪಲ, ಲತೀಶ್ ಎಂ. ಸಂಕೊಳಿಗೆ ನಿರೂಪಿಸಿದರು. ಟ್ರಸ್ಟ್ ಅಧ್ಯಕ್ಷರು ಶೇಷಪ್ಪ ಬೈದ್ಯಮನೆ ಸ್ವಾಗತಿಸಿದರು. ಸುಂದರ್ ಸುವರ್ಣ ವಂದಿಸಿದರು.
ಇದೇ ಸಂದರ್ಭ ನಾರಾಯಣ ಗುರು ಯಕ್ಷಗಾನ ಕಲಾ ಸಂಘ ಕೊಲ್ಯ ಇವರಿಂದ ಯಕ್ಷಗಾನ ತಾಳಮದ್ದಳೆ ಬ್ರಾಣೆ ಶರ್ತ್‌ ಹಾಗೂ ಶ್ರೀ ಗುರು ಕುಣಿತ ಭಜನಾ ತಂಡ ಕೊಲ್ಯ ಇವರಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ‌‌ ವ್ಯವಹಾರಿಕ ಪ್ರಬಂಧ ಮಂಡಣೆಯಲ್ಲಿ ರಾಷ್ಟ್ರಮಟ್ಟದಲ್ಲಿ ವಿಜೇತ ರಕ್ಷಿತ್ ಜೈ ಕುಮಾರ್‌ ಕೊಲ್ಯ ಸೇರಿದಂತೆ ಪಿಯುಸಿ, ಎಸ್‌ ಎಸ್‌ ಎಲ್‌ ಸಿಯಲ್ಲಿ ಅಧಿಕ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಕ್ರೀಡಾ ವಿಜೇತರ ಪ್ರಶಸ್ತಿಗಳನ್ನು ವಿತರಿಸಲಾಯಿತು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಕುಂದಾಪುರ : ಗಂಗೊಳ್ಳಿ ಸಮುದ್ರದಲ್ಲಿ ಮುಳುಗಿದ್ದ ದೋಣಿಯ ಅವಶೇಷ ಪತ್ತೆ

August 28, 2026

ಕೋಟೆಕಾರ್ ಮರ್ಕಝುಲ್ ಹಿದಾಯ ಶಾಲೆಗೆ ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ

August 28, 2026

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಹಾಗೂ ವಿಶ್ವ ಬಿಲ್ಲವ ಮಹಿಳಾ ಮಂಡಳಿ ವತಿಯಿಂದ ಆ.28ರಂದು ಬೆಳಗ್ಗೆ 8ರಿಂದ ಕುದ್ರೋಳಿ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

August 27, 2026

Comments are closed.

Advertise
ಸಂಪರ್ಕಿಸಿ

ಕೋಟೆಕಾರು ಪಟ್ಟಣ ಪಂಚಾಯತ್‌ 80 ನೇ ಸ್ವಾತಂತ್ರೋತ್ಸವ

August 16, 2026

ಮಾಡೂರು ಶಾಲೆಯಲ್ಲಿ ವಿಭಿನ್ನವಾಗಿ ಜರಗಿದ 80 ರ ಸ್ವಾತಂತ್ರ್ಯ

August 16, 2026

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026
suddi

ನಾರಾಯಣ ಗುರುಗಳ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ : ಚಂದ್ರಹಾಸ್‌ ಪಂಡಿತ್‌ಹೌಸ್

By UllalaVaniAugust 28, 20260

ಉಳ್ಳಾಲ: ಹಿಂದುಳಿದ ಸಮಾಜವನ್ನು ಸಂಘಟಿಸಿ ಸಮಾಜದ ಮುಖ್ಯವಾಹಿನಿಗೆ ತಂದು, ಎಲ್ಲರಿಗೂ ಗೌರವದ ಸ್ಥಾನ ದೊರಕಿಸಿಕೊಟ್ಟ ನಾರಾಯಣ ಗುರುಗಳ ತತ್ವಗಳು ಇಂದಿಗೂ…

ಕುಂದಾಪುರ : ಗಂಗೊಳ್ಳಿ ಸಮುದ್ರದಲ್ಲಿ ಮುಳುಗಿದ್ದ ದೋಣಿಯ ಅವಶೇಷ ಪತ್ತೆ

August 28, 2026

ಕೋಟೆಕಾರ್ ಮರ್ಕಝುಲ್ ಹಿದಾಯ ಶಾಲೆಗೆ ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ

August 28, 2026

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಹಾಗೂ ವಿಶ್ವ ಬಿಲ್ಲವ ಮಹಿಳಾ ಮಂಡಳಿ ವತಿಯಿಂದ ಆ.28ರಂದು ಬೆಳಗ್ಗೆ 8ರಿಂದ ಕುದ್ರೋಳಿ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

August 27, 2026
1 2 3 … 2,078 Next
Automatic YouTube Gallery

ಸೆ.4, 5ರಂದು ಮುದುಂಗಾರುಕಟ್ಟೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

ಸೆ.4, 5ರಂದು ಮುದುಂಗಾರುಕಟ್ಟೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ; ಹರಿ ಭಜನೆ, ಭಕ್ತಿಗೀತೆ ಹಾಗೂ ಮುದ್ದುಕೃಷ್ಣ ಸ್ಪರ್ಧೆ

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು ಟಿ.ಜಿ. ರಾಜಾರಾಮ್ ಭಟ್‌ಗೆ ಸನ್ಮಾನ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಸೆ.4, 5ರಂದು ಮುದುಂಗಾರುಕಟ್ಟೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ
Now Playing
ಸೆ.4, 5ರಂದು ಮುದುಂಗಾರುಕಟ್ಟೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ
ಸೆ.4, 5ರಂದು ಮುದುಂಗಾರುಕಟ್ಟೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ; ಹರಿ ಭಜನೆ, ...
ಸೆ.4, 5ರಂದು ಮುದುಂಗಾರುಕಟ್ಟೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ; ಹರಿ ಭಜನೆ, ಭಕ್ತಿಗೀತೆ ಹಾಗೂ ಮುದ್ದುಕೃಷ್ಣ ಸ್ಪರ್ಧೆ

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು ಟಿ.ಜಿ. ರಾಜಾರಾಮ್ ಭಟ್‌ಗೆ ಸನ್ಮಾನ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಸೆ.6ರಂದು ತೌಡುಗೋಳಿ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಚಾಲನೆ
Now Playing
ಸೆ.6ರಂದು ತೌಡುಗೋಳಿ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಚಾಲನೆ
ಸೆ.6ರಂದು ತೌಡುಗೋಳಿ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಚಾಲನೆ;ಶ್ರೀ ಮಹಾಗಣಪತಿ ಹೋಮ, ...
ಸೆ.6ರಂದು ತೌಡುಗೋಳಿ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಚಾಲನೆ;ಶ್ರೀ ಮಹಾಗಣಪತಿ ಹೋಮ, ಧಾರ್ಮಿಕ ಸಭೆ

ಜೀರ್ಣೋದ್ಧಾರಕ್ಕೆ ನಿಧಿ ಸಂಚಯನ ಚಾಲನೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು ...
Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version