ಉಳ್ಳಾಲ: ತಾಲೂಕಿನ ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈರಂಗಳ ಗ್ರಾಮದ ನಡುಪದವು ಶಾಲಾ ಆವರಣದಲ್ಲಿ ಆ.20ರಂದು ಪಂಚಾಯಿತಿ ಮಟ್ಟದ ಭಾರತ್ ಜೋಡೋ ಯುವ ಸಮಿತಿಗೆ ಚಾಲನೆ ನೀಡಲಾಯಿತು.

ನಿಕಟಪೂರ್ವ ಪಂಚಾಯಿತಿ ಉಪಾಧ್ಯಕ್ಷ ಸಿಎಂ ಶರೀಫ್ ಪಟ್ಟೋರಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಯುವ ಉದ್ಯಮಿ ನಾಸಿರ್ ನಡುಪದವು ಉದ್ಘಾಟಿಸಿದರು. ಇಬ್ರಾಹಿಂ ನಡುಪದವು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಳೆಪುಣಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಹಾಗೂ ಕಾರ್ಯದರ್ಶಿ ಆಯಿಷಾ ಬಿ.ಎ. ಅವರು ಸಲಹೆ, ಸೂಚನೆಗಳನ್ನು ನೀಡಿದರು.
ಕೆಲವು ಆಧಾರ್ ಒಟಿಪಿ ಸಮಸ್ಯೆಗಳನ್ನು ಹೊರತುಪಡಿಸಿ ನೋಂದಣಿ ಪ್ರಕ್ರಿಯೆ ಸುಗಮವಾಗಿ ನಡೆಯಿತು. ನಡುಪದವು ವಾರ್ಡ್ನ ಪ್ರತಿ ಮನೆಯಿಂದ ಕನಿಷ್ಠ ಮೂವರನ್ನು ಭಾರತ್ ಜೋಡೋ ಯುವ ಸಮಿತಿಗೆ ನೋಂದಾಯಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ‘ಭಾರತ್ ಜೋಡೋ ಯಂಗ್ ಬ್ರಿಗೇಡ್ ನಡುಪದವು’ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಹಮ್ಸೀಫ್ ಸಿ.ಎ. ನಡುಪದವು, ಪ್ರಧಾನ ಕಾರ್ಯದರ್ಶಿಯಾಗಿ ಹರ್ಷಾದ್ ಮೂಲೆ ನಡುಪದವು ಹಾಗೂ ಕೋಶಾಧಿಕಾರಿಯಾಗಿ ಶಾಝಿಲ್ ಎನ್.ಎಸ್. ನಡುಪದವು ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಫಯಾಝ್ ಕೆ. ನಡುಪದವು ಹಾಗೂ ನೌಶಾದ್ ಎಂ. ನಡುಪದವು, ಜೊತೆ ಕಾರ್ಯದರ್ಶಿಗಳಾಗಿ ಶಾಝ್ ಎ.ಎಂ. ನಡುಪದವು ಹಾಗೂ ಶಹಝಾದ್ ಸಿ.ಎಂ. ನಡುಪದವು, ಮಾಧ್ಯಮ ಕಾರ್ಯದರ್ಶಿಯಾಗಿ ಜಝೀಲ್ ನಡುಪದವು ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಿಫಾಲ್ ನಡುಪದವು, ಸಫ್ವಾನ್ ಸಿ.ಎಂ. ನಡುಪದವು ಹಾಗೂ ಅರಫಾ ನಡುಪದವು ಅವರನ್ನು ಆಯ್ಕೆ ಮಾಡಲಾಯಿತು.
ಹಮ್ಸೀಫ್ ಸಿ.ಎ. ಕಾರ್ಯಕ್ರಮ ನಿರೂಪಿಸಿದರು. ಸಿಎಂ ಶರೀಫ್ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

