ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಸಮುದ್ರ ಪಾಲಾಗುತ್ತಿದ್ದ ಬೆಂಗಳೂರು ಮೂಲದ ಮೂವರು ಮಹಿಳೆಯರನ್ನು ಈಜುರಕ್ಷಕ ದಳದ ಯುವಕರು ರಕ್ಷಿಸಿದ ಘಟನೆ ಉಳ್ಳಾಲ ಮೋಗವೀರಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಬೆಂಗಳೂರು ಹಾಗೂ ಮಡಿಕೇರಿ ಮೂಲದ ಕುಟುಂಬವೊಂದರ ಹತ್ತು ಜನ ಸದಸ್ಯರು ಉಳ್ಳಾಲ ದರ್ಗಾಕ್ಕೆ ಬೇಟಿ ನೀಡಿದ್ದರು. ನಂತರ ಸಮುದ್ರ ವಿಹಾರಕ್ಕೆಂದು ತೆರಳಿದ್ದ ಇವರು ಸಮುದ್ರಕ್ಕೆ ಇಳಿದಿದ್ದು, ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ನೀರು ಪಾಲಾಗುತ್ತಿದ್ದ ಇವರನ್ನು ಸ್ಥಳೀಯ ಈಜುಗಾರರ ತಂಡದ ಯುವಕರು ರಕ್ಷಿಸಿದ್ದಾರೆ.
ಬೆಂಗಳೂರು ಮೂಲದ ನೂರ್ ಜಹಾನ್ (45) ನಾಫೀಯಾ (30) ಮಡಿಕೇರಿಯ ಖೈರುನ್ನೀಸಾ (28) ಸಮುದ್ರ ಪಾಲಾಗುತ್ತಿದ್ದವರು ಎಂದು ತಿಳಿದು ಬಂದಿದೆ.
sಸ್ಥಳೀಯ ಮೊಗವೀರ ಪಟ್ಣದ ಈಜುಗಾರ ದೀಕ್ಷಿತ್ ಕರ್ಕೆರಾ ,ಶಿವನ್ ಬಂಗೇರ ,ಧನರಾಜ್ ಪುತ್ರನ್ ,ರೋಶನ್ ಸುವರ್ಣ , ಸುಧೀರ್ ,ಕಿಶೋರ್ ಸಮುದ್ರ ಪಾಲಾಗುತ್ತಿದ್ದ ಮಹಿಳೆಯರನ್ನು ರಕ್ಷಿಸಿದ ಯುವಕರು.
ಘಟನೆಯಲ್ಲಿ ನಾಫಿಯಾ ತೀವ್ರ ಅಸ್ವಸ್ಥಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದರೆ, ನೂರ್ ಜಹಾನ್ ಮತ್ತು ಖೈರುನ್ನೀಸಾ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಾಲಾಗಿದ್ದಾರೆ. ಉಳ್ಳಾಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



