ಇಂದಿನ ಈ ಒತ್ತಡದ ಕಾಲ ಘಟ್ಟದಲ್ಲಿ ಮನಸ್ಸಿಗೆ ನೆಮ್ಮದಿಯನ್ನು, ಮುದವನ್ನು ನೀಡುವಲ್ಲಿ ಉತ್ಸವಗಳು, ಜಾತ್ರೆಗಳು ಸಹಕಾರಿಯಾಗುತ್ತದೆ. ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಉತ್ತಮ ಅರೋಗ್ಯವನ್ನು ಕಾಪಾಡಬೇಕಾದರೇ ಸಾಂಸ್ಕೃತಿಕ, ಕ್ರೀಡಾ, ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಅದರೊಂದಿಗೆ ಧಾರ್ಮಿಕ ಆಚರಣೆಗಳು, ವಿಧಿ ವಿಧಾನಗಳನ್ನು ಕೂಡ ಅರಿತಿರಬೇಕು. ಇದರಿಂದ ಮುಂದಿನ ಪೀಳಿಗೆಗೂ ನಮ್ಮ ಸಂಸ್ಕಾರ ವನ್ನು ಕಲಿಸಿ ಕೊಟ್ಟಂತೆ ಆಗುತ್ತದೆ.ಮಾತ್ರವಲ್ಲದೇ ಮುದ್ದುಕೃಷ್ಣ ಸ್ಪರ್ಧೆಯನ್ನು ಆಯೋಜನೆ ಮಾಡುವುದರಿಂದ ಸಣ್ಣ ಪುಟಾಣಿಗಳು ಎಳವೆಯಲ್ಲೇ ಶ್ರೀಕೃಷ್ಣ ಪರಮಾತ್ಮನ ಆದರ್ಶವನ್ನು ಪಾಲನೆ ಮಾಡಲು ಪ್ರೇರಕವಾಗಿದೆ ಎಂದು ಶ್ರೀಕೃಷ್ಣ ಸಾಂಸ್ಕೃತಿಕ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ರವಿ ರೈ ಫಜೀರು ಅಭಿಪ್ರಾಯ ಪಟ್ಟರು.

ಇವರು ಶೃತಿ ಲಯ ಕಲಾ ಕೇಂದ್ರ ಕುತ್ತಾರು ಮತ್ತು ಶ್ರೀ ಕೃಷ್ಣ ಸಾಂಸ್ಕೃತಿಕ ಮಹೋತ್ಸವ ಸಮಿತಿ ವತಿಯಿಂದ ನಡೆಯಲಿರುವ ಕುತ್ತಾರು ಮುದ್ದುಕೃಷ್ಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಪ್ರಕಾಶ್ ಸಿಂಪೋನಿ, ಸಲಹೆಗಾರಾದ ನರೇಶ್ ಬಬ್ಬುಕಟ್ಟೆ, ಶೃತಿ ಲಯ ಕಲಾ ಕೇಂದ್ರ ಕುತ್ತಾರು ಇದರ ಅಧ್ಯಕ್ಷ ಹರೀಶ್ ಕುಮಾರ್ ಕುತ್ತಾರ್, ಮಹಿಳಾ ಕಲಾ ಕೇಂದ್ರದ ಅಧ್ಯಕ್ಷರು ಶೋಭಾ ಶೆಟ್ಟಿ, ನಿರ್ದೇಶಕರಾದ ಭಾಸ್ಕರ್ ಕುತ್ತಾರ್ ,ಪ್ರಧಾನ ಕಾರ್ಯದರ್ಶಿ ತ್ಯಾಗಮ್ ಹರೇಕಳ , ಕೋಶಾಧಿಕಾರಿ ನವೀನ್ ಕುತ್ತಾರ್
ಉಪಾಧ್ಯಕ್ಷರುಗಳಾದ ಭೋಜಾನಂದ ಬಾಳೆಪುಣಿ, ಶಿವಕುಮಾರ್ ಟಿ ಹರೇಕಳ, ಶ್ರೀದೇವಿ ರೈ, ಭಾರತಿ ಶೆಟ್ಟಿ, ಚಂದ್ರಕಲಾ ಎಸ್ ,ಪೂಜಾ ಶೆಟ್ಟಿ, ನಾಗವೇಣಿ ಶೆಟ್ಟಿ, ,ರಶ್ಮಿ ,ಸೋನಿ ರೈ,ಚಂದ್ರಕಲಾ ಶೆಟ್ಟಿ ಸಂಚಾಲಕರುಗಳಾದ ರಾಜೇಶ್ ಆಚಾರ್ಯ, ದೇವಿಪ್ರಸಾದ್ ರೈ ಜೊತೆ ಕಾರ್ಯದರ್ಶಿ ಅಭಿಷೇಕ್ ಬೇಕಲ್ ಮುಂತಾದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ತ್ಯಾಗಮ್ ಹರೇಕಳ ಪ್ರಸ್ತಾವಿಸಿ ಸರ್ವರನ್ನು ಸ್ವಾಗತಿಸಿದರು. ನಿರ್ದೇಶಕರಾದ ಭಾಸ್ಕರ್ ರಾವ್ ವಂದಿಸಿದರು.

