ಓರ್ವ ಆದರ್ಶ ಗೃಹಣಿಯಾಗಿ ಸಾಮರಸ್ಯದ ದಾಂಪತ್ಯ ಜೀವನ ನಡೆಸಿದ ಇಂದಿರಾ ಆನಂದ ಶೆಟ್ಟಿಯವರು ಸ್ವಾತಂತ್ರ್ಯ ಹೋರಾಟಗಾರ ಕುಳಾಲು ಅಣ್ಣಪ್ಪ ಭಂಡಾರಿ ಹಾಗೂ ಅಗರಿ ಲೀಲಾವತಿ ಭಂಡಾರಿ ಅವರ ಸುಪುತ್ರಿಯಾಗಿ ಇವರು ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಬದುಕು ಸಾಗಿಸಿದವರು ಎಂದು ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷರಾದ ರವೀಂದ್ರ ರೈ ಕಳ್ಳಿಮಾರು ಹೇಳಿದರು.

ಇವರು ಸಾಮಾಜಿಕ, ಧಾರ್ಮಿಕ ಮುಂದಾಳು ಅಗರಿ ಇಂದಿರಾ ಆನಂದ ಶೆಟ್ಟಿ ಅವರ 75 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಅಸೈಗೋಳಿ ಅಭಯ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಾವೇರಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳು ಜನಪದ ವಿದ್ಯಾಂಸರಾದ ಡಾ. ಕೆ ಚಿನ್ನಪ್ಪಗೌಡ, ಅಭಯಾಶ್ರಮದ ಮುಖ್ಯಸ್ಥರಾದ ಶ್ರೀನಾಥ್ ಹೆಗಡೆ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಅವರ ಸಹೋದರಿ ವಿಜಯಲಕ್ಷ್ಮಿ ಆರ್ ಕಾಜವ, ಕುಳಾಲು ರಾಮದಾಸ್ ಭಂಡಾರಿ, ಗಿರೀಶ್ ಭಂಡಾರಿ, ಶ್ರೀನಾಥ್ ಕೊಂಡೆ, ವಾಣಿ ಆರ್ ಭಂಡಾರಿ, ಶಾಂಭವಿ ಜಿ ಭಂಡಾರಿ, ಮೈನಾ ಎಸ್ ಕೊಂಡೆ, ಸ್ವರ್ಣಲತಾ ಆರ್ ರೈ, ಉಪಸಿತರಿದ್ದರು.
ಈ ಸಂದರ್ಭದಲ್ಲಿ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ತಾಳ ಮದ್ದಲೆ ನಡೆಯಿತು. ಈ ಸವಿ ನೆನಪಿಗಾಗಿ ಆಶ್ರಮ ವಾಸಿಗಳಿಗೆ ದೂರದರ್ಶನವನ್ನು ನೀಡಲಾಯಿತು
ಅಭಯಾಶ್ರಮದ ಜೊತೆ ಕಾರ್ಯದರ್ಶಿ ಆನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ತೋಡರ್ ಆನಂದ ಶೆಟ್ಟಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

