ನೂತನ ಪದಾಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಅಭಿನಂದನೆ
ಮಂಗಳೂರು, ಆ. 11: ಕರ್ನಾಟಕ ಮುಸ್ಲಿಂ ಅಡ್ವಕೇಟ್ಸ್ ಫೋರಂ (ರಿ.) ಕರ್ನಾಟಕ ರಾಜ್ಯದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹೈಕೋರ್ಟ್ ವಕೀಲ ಅಡ್ವೋಕೇಟ್ ಮುಜಫರ್ ಅಹ್ಮದ್ ಹಾಗೂ ನೂತನ ಪದಾಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮ ಮಂಗಳೂರಿನ ಫಳ್ನೀರ್‌ನ ಅಲ್-ಎಹ್ಸಾನ್ ಮಸೀದಿಯ HIF ಆಡಿಟೋರಿಯಂನಲ್ಲಿ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಕೀಲ ಹಾಗೂ ನೋಟರಿ ಅಡ್ವೋಕೇಟ್ ಅಬ್ದುಲ್ ಅಝೀಜ್ ವಹಿಸಿದ್ದರು. ಹಾಫೀಜ್ ಅಬ್ದುಲ್ ಮುಹೈಮೀನ್ ನದ್ವಿ ಕೆಂಪಿ ಖುರಾನ್ ಪಠಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ವಕೀಲ ಅಡ್ವೋಕೇಟ್ ಇಸ್ಮಾಯಿಲ್ ನೆಲ್ಯಾಡಿ ಸ್ವಾಗತಿಸಿದರು. ಹಿರಿಯ ವಕೀಲ ನೂರುದ್ದೀನ್ ಸಾಲ್ಮರ ಪುತ್ತೂರು ಪ್ರಸ್ತಾವಿಕವಾಗಿ ಮಾತನಾಡಿ, ಫೋರಂನ ಚುನಾವಣಾ ಪ್ರಕ್ರಿಯೆ ಹಾಗೂ ಜಿಲ್ಲೆಯ ಮುಸ್ಲಿಂ ವಕೀಲರು ಸಮುದಾಯದ ಕಷ್ಟದ ಸಂದರ್ಭಗಳಲ್ಲಿ ಸಲ್ಲಿಸಿದ ಸೇವೆಗಳ ಕುರಿತು ವಿವರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಮುಜಫರ್ ಅಹ್ಮದ್, ಸಮುದಾಯದಲ್ಲಿ ಕಾನೂನು ಜಾಗೃತಿ ಮೂಡಿಸುವುದು ಹಾಗೂ ವಕೀಲರ ಹಕ್ಕುಗಳ ರಕ್ಷಣೆಗೆ ಕರ್ನಾಟಕ ಮುಸ್ಲಿಂ ಅಡ್ವಕೇಟ್ಸ್ ಫೋರಂ ಬದ್ಧವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಾದ ಉಪಾಧ್ಯಕ್ಷೆ ಶ್ರೀಮತಿ ತರನ್ನುಮ್, ಪ್ರಧಾನ ಕಾರ್ಯದರ್ಶಿ ಮೊಯೀನುಲ್ಲಾ ಅಬ್ಬಾಸಿ, ಕೋಶಾಧಿಕಾರಿ ವಾಸೀಮ್ ಅಹ್ಮದ್ ಹಾಗೂ ಜೊತೆ ಕಾರ್ಯದರ್ಶಿ ಸಿರಾಜುದ್ದೀನ್ ಅಹ್ಮದ್ ಅವರನ್ನು ಸನ್ಮಾನಿಸಲಾಯಿತು. ಪ್ರಧಾನ ಕಾರ್ಯದರ್ಶಿ ಮೊಯೀನುಲ್ಲಾ ಅಬ್ಬಾಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲರು ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಮಾಜಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ಮಾಜಿ ಮೇಯರ್ ಅಶ್ರಫ್, ರಫೀಕ್ ಮಾಸ್ಟರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಅಭಿನಂದನಾ ಮಾತುಗಳನ್ನಾಡಿದರು.
ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಸ್ತಫಾ ಸುಳ್ಯ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಹಿದಾಯ ಫೌಂಡೇಶನ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲ್, ರಾಜಕೀಯ ಮುಖಂಡ ಶಾನವಾಝ್ ಕುಳೂರು, ಬಿ-ಹ್ಯೂಮನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಇಮ್ರಾನ್ ಬಂದರ್, ಉಳ್ಳಾಲ ನಗರಸಭೆಯ ಮಾಜಿ ಸದಸ್ಯ ಯು.ಎಚ್. ಫಾರೂಕ್ ಉಳ್ಳಾಲ, ವಕ್ಫ್ ಬೋರ್ಡ್ ಮಾಜಿ ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್, ಜಮಾಲುದ್ದೀನ್, ಸೈದುದ್ದೀನ್ ಬೈಕಂಪಾಡಿ, ಓಸಿಯನ್ ಗ್ಲೋಬಲ್ ಸ್ಕೂಲ್ ಜೆಪ್ಪಿನಮೊಗೇರು ಸಂಚಾಲಕರು, ಜಮಿಯ್ಯತುಲ್ ಫಲಾಹ್ ಮುಖಂಡ ಅಬ್ಬಾಸ್ ಉಚ್ಚಿಲ್, ಕಾರುಣ್ಯ ಕೋ-ಆಪರೇಟಿವ್ ಸೊಸೈಟಿ ಸಿಇಒ ಕಾಸಿಂ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಹಮೀದ್ ಕಣ್ಣೂರ್, ಗಲ್ಫ್ ಉದ್ಯಮಿ ಕಬೀರ್ ಲಕ್ಕಿಸ್ಟಾರ್, ಬಿ-ಹ್ಯೂಮನ್ ಟ್ರಸ್ಟಿಗಳಾದ ಹಾಫೀಜ್ ಕಣ್ಣಂಗಾರ್ ಹಾಗೂ ಶಾಹುಲ್ ಹಮೀದ್ ಉಜಿರೆ, ಸಾಮಾಜಿಕ ಕಾರ್ಯಕರ್ತರಾದ ಉಮ್ಮರ್ ಕುಂಞಿ ಸಾಲೆತ್ತೂರ್ ಮತ್ತು ಹನೀಫ್ ತೋಡಾರ್ ಸೇರಿದಂತೆ ಜಿಲ್ಲೆಯ ಹಲವು ಹಿರಿಯ-ಕಿರಿಯ ವಕೀಲರು ಹಾಗೂ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಧ್ಯಕ್ಷೀಯ ಭಾಷಣವನ್ನು ಅಡ್ವೋಕೇಟ್ ಅಬ್ದುಲ್ ಅಝೀಜ್ ನೆರವೇರಿಸಿದರು. ಅಡ್ವೋಕೇಟ್ ಸರ್ಫ್ರಾಜ್ ವಂದಿಸಿದರು. ಅಡ್ವೋಕೇಟ್ ಜೀಷನ್ ಅಲಿ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ, ಹಿದಾಯ ಫೌಂಡೇಶನ್ ಹಾಗೂ ಬಿ-ಹ್ಯೂಮನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದಲೂ ನೂತನ ಅಧ್ಯಕ್ಷ ಮುಜಫರ್ ಅಹ್ಮದ್ ಹಾಗೂ ಪದಾಧಿಕಾರಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

