ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಪ್ಪಿನಂಗಡಿ: ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಈ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಉಚಿತ ಕೃತಕ ಕಾಲುಜೋಡಣೆ, ಉಚಿತ ಕೃತಕ ದಂತಪಂಕ್ತಿ ಜೋಡಣಾ , ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರವು ಅ.19ರಿಂದ ಅ.25ರ ವರೆಗೆ ಹಾಗೂ ಅ.28ರಿಂದ ಅ.30ರವರೆಗೆ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿಯ ಶಾಲಾ ವಠಾರದಲ್ಲಿ ನಡೆಯಲಿದೆ.
ಈ ಶಿಬಿರದಲ್ಲಿ ಭಗವಾನ್ ಮಹಾವೀರ್ ಅಂಗವಿಕಲರ ಸಹಕಾರ ಸಮಿತಿ ಜೈಪುರ್ ಇವರ ಸಹಕಾರದೊಂದಿಗೆ ಉಚಿತ ಕೃತಕ ಕಾಲುಜೋಡಣೆ ಅ.28ರಿಂದ ಅ.30ರವರೆಗೆ ನಡೆಯಲಿದೆ. ಹಾಗೂ ಪ್ರಾಸ್ಧೊಡೋಂಟಿಕ್ಸ್ ವಿಭಾಗ ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ನಿಟ್ಟೆ ಮಂಗಳೂರು ಇಲ್ಲಿನ ದಂತ ವೈದ್ಯರಿಂದ ಉಚಿತ ದಂತಪಂಕ್ತಿ ಜೋಡಣಾ ಶಿಬಿರ ಅ.19ರಂದು ನಡೆಯಲಿದ್ದು. ಮೊದಲ ಹಂತದ ಬಾಯಿ ತಪಾಸಣೆ ಹಾಗೂ ಆಳತೆಯನ್ನು ಮಾಡಲಾಗುವುದು. ಈ ದಿನ ಆಯ್ದ ಫಲಾನುಭವಿಗಳಿಗೆ ಅ.25ರಂದು ಕೃತಕ ದಂತಪಂಕ್ತಿಯನ್ನು ಜೋಡಿಸಲಾಗುವುದು. ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆಯುವಂತೆ ಪ್ರಕಟನೆ ತಿಳಿಸಿದೆ.
ಉಚಿತ ಕೃತಕ ಕಾಲುಜೋಡಣೆಗೆ ಸಾರ್ವಜನಿಕರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: ವಿಜೇತ್-9632878157, ನಾಗರಾಜು-8277403054, ನಿಶಿತ ಕೆ.ಕೆ-9741160565, ಉಮಾ ಆರ್.ಕಜೆ-7899579902
ಉಚಿತ ಕೃತಕ ದಂತಪಂಕ್ತಿ ಜೋಡಣೆಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: ಜಯಶ್ರೀ-9844106477, ಶೈಲಶ್ರೀ ಶೆಟ್ಟಿ-9686143846, ಕೃಷ್ಣಪ್ರಸಾದ್ ವಿ-9480153711


