Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಮಂಗಳೂರು

ಮಂಜನಾಡಿ ದುರಂತ: ಗುಡ್ಡ ಕುಸಿದು ಮನೆ ಬೀಳಲು ಅಶ್ವಿನಿಯೇ ಕಾರಣವೇ? —ಕೊಣಾಜೆ ಪೊಲೀಸರ ಹಿಂಬರಹದ ವಿರುದ್ಧ ತಾಯಿಯ ಕಾನೂನು ಸಮರ

UllalaVaniBy UllalaVaniJuly 24, 2026Updated:July 24, 2026No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು, ಜುಲೈ 23: ಮಂಜನಾಡಿಯಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಇಬ್ಬರು ಎಳೆಯ ಮಕ್ಕಳು ಹಾಗೂ ಅತ್ತೆಯನ್ನು ಕಳೆದುಕೊಂಡು, ತಾನೇ ಎರಡೂ ಕಾಲುಗಳನ್ನು ಕಳೆದುಕೊಂಡಿರುವಆಶ್ವಿನಿ, ಕೋಣಾಜೆ ಪೊಲೀಸ್ ಠಾಣೆಯ ತನಿಖಾ ವರದಿ ಮತ್ತು ದಿ.23-07-2026ರ ಹಿಂಬರಹದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ಮಂಜನಾಡಿ ದುರಂತಕ್ಕೆ ಗುಡ್ಡ ಕುಸಿತ ಮತ್ತು ಮಾನವ ಹಸ್ತಕ್ಷೇಪದ ನಿಜವಾದ ಕಾರಣಗಳನ್ನು ತನಿಖೆ ಮಾಡಬೇಕಾದ ಬದಲು, ತನಿಖೆಯ ದೋಷಗಳನ್ನೇ ಮುಚ್ಚಿಹಾಕುವ ರೀತಿಯಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆಯೇ?” ಎಂಬ ಗಂಭೀರ ಪ್ರಶ್ನೆಯನ್ನು ಆಶ್ವಿನಿ ಎತ್ತಿದ್ದಾರೆ.

ಕೋಣಾಜೆ ಪೊಲೀಸ್ ಠಾಣೆಯ ಹಿಂಬರಹದಲ್ಲಿ ಮಂಜನಾಡಿ ಗ್ರಾಮ ಪಂಚಾಯತ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ಎನ್‌ಐಟಿಕೆ ಸುರತ್ಕಲ್ ಹಾಗೂ ಜಲಸಂಪನ್ಮೂಲ ಇಲಾಖೆಯ ವರದಿಗಳನ್ನು ಉಲ್ಲೇಖಿಸಲಾಗಿದೆ. ಭೂಕುಸಿತವು ನೈಸರ್ಗಿಕ ಹಾಗೂ ಮಾನವಸೃಷ್ಟಿ ಅಂಶಗಳ ಸಂಯೋಜಿತ ಪರಿಣಾಮವಾಗಿರಬಹುದೆಂಬ ಅಂಶಗಳು ವರದಿಗಳಲ್ಲಿ ಕಂಡುಬರುತ್ತವೆ ಎಂದು ತಿಳಿಸಲಾಗಿದೆ.

ಆದರೆ, ಆಶ್ವಿನಿಯ ಪ್ರಶ್ನೆ ಸರಳವಾಗಿದೆ: ಮಾನವ ಹಸ್ತಕ್ಷೇಪದ ಸಾಧ್ಯತೆ ಇದ್ದರೆ, ಆ ಹಸ್ತಕ್ಷೇಪ ಮಾಡಿದವರು ಯಾರು?

ಸುಮಾರು 70 ಅಡಿ ಎತ್ತರದ ಗುಡ್ಡವನ್ನು ಕತ್ತರಿಸಿ ರಸ್ತೆ ನಿರ್ಮಿಸಲಾಗಿತ್ತೇ? ಮಣ್ಣು ತೆರವುಗೊಳಿಸಲಾಗಿತ್ತೇ? ಮಳೆನೀರು ಹರಿಯುವ ಸ್ವಾಭಾವಿಕ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿತ್ತೇ? ಈ ಕಾಮಗಾರಿಗಳನ್ನು ನಡೆಸಿದವರು ಯಾರು? ಗುತ್ತಿಗೆದಾರರು ಯಾರು? ಭೂಮಾಲೀಕರು ಯಾರು? ಯಂತ್ರೋಪಕರಣಗಳನ್ನು ಒದಗಿಸಿದವರು ಯಾರು? ಕಾಮಗಾರಿಗೆ ಅನುಮತಿ ಇತ್ತೇ? ವರ್ಕ್ ಆರ್ಡರ್, ಒಪ್ಪಂದ, ಬಿಲ್‌ಗಳು ಹಾಗೂ ಇತರ ದಾಖಲೆಗಳು ಎಲ್ಲಿವೆ? ಸಂಬಂಧಪಟ್ಟವರ ಹೇಳಿಕೆಗಳನ್ನು ದಾಖಲಿಸಲಾಗಿದೆಯೇ?

ಈ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸದೆ, “ವಿವಿಧ ಗುಂಪುಗಳು ರಸ್ತೆ ಕಾಮಗಾರಿ ನಡೆಸಿವೆ” ಎಂಬ ಸಾಮಾನ್ಯ ಹೇಳಿಕೆಯ ಆಧಾರದ ಮೇಲೆ ತನಿಖೆಯನ್ನು ಮುಕ್ತಾಯಗೊಳಿಸುವುದು ನಿಜವಾದ ತನಿಖೆಯೇ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.

ಮಳೆ ಬಿದ್ದಿದೆ ಎಂಬ ಕಾರಣದಿಂದ ಮಾನವ ನಿರ್ಲಕ್ಷ್ಯವನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಮಳೆ ಒಂದು ನೈಸರ್ಗಿಕ ಕಾರಣವಾಗಿರಬಹುದು. ಆದರೆ, ಮಳೆಯ ಸಂದರ್ಭದಲ್ಲಿ ಗುಡ್ಡ ಕತ್ತರಿಸುವಿಕೆ, ರಸ್ತೆ ನಿರ್ಮಾಣ, ಮಳೆನೀರು ಹರಿವಿನ ಬದಲಾವಣೆ ಅಥವಾ ಅಸುರಕ್ಷಿತ ಕಾಮಗಾರಿ ಭೂಕುಸಿತದ ಅಪಾಯವನ್ನು ಹೆಚ್ಚಿಸಿತೇ? ಎಂಬ ಪ್ರಶ್ನೆಗೆ ವೈಜ್ಞಾನಿಕ ತನಿಖೆಯ ಮೂಲಕ ಉತ್ತರ ದೊರಕಬೇಕಾಗಿತ್ತು.

“ನನ್ನ ಇಬ್ಬರು ಮಕ್ಕಳು ಕೇವಲ ಸಂಖ್ಯೆಗಳಲ್ಲ. ಅವರು ಜೀವಂತ ವ್ಯಕ್ತಿಗಳಾಗಿದ್ದರು. ಅವರ ಸಾವಿನ ಹಿಂದೆ ಯಾವುದೇ ಮಾನವ ನಿರ್ಲಕ್ಷ್ಯ, ಅಸುರಕ್ಷಿತ ಕಾಮಗಾರಿ ಅಥವಾ ಕಾನೂನುಬಾಹಿರ ಹಸ್ತಕ್ಷೇಪ ಇದ್ದರೆ, ಆ ಸತ್ಯ ಹೊರಬರಬೇಕು” ಎಂದು ಆಶ್ವಿನಿ ತಮ್ಮ ಕಾನೂನು ನಿವೇದನೆಯಲ್ಲಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸರು ಘಟನಾ ಸ್ಥಳದ ಸಂಪೂರ್ಣ ವೈಜ್ಞಾನಿಕ ಪರಿಶೀಲನೆ ನಡೆಸಿದ್ದಾರೆಯೇ, ಸ್ಥಳ ಮಹಜರು ಅಥವಾ ಪಂಚನಾಮೆ ನಡೆಸಲಾಗಿದೆಯೇ, ದುರಂತದ ಮೊದಲು ಮತ್ತು ನಂತರದ ಛಾಯಾಚಿತ್ರಗಳು ಹಾಗೂ ವೀಡಿಯೊಗಳನ್ನು ಪರಿಶೀಲಿಸಲಾಗಿದೆಯೇ, ಗುಡ್ಡ ಕತ್ತರಿಸುವಿಕೆ ಮತ್ತು ರಸ್ತೆ ಕಾಮಗಾರಿಯ ಹಿಂದಿನ ದಾಖಲೆಗಳನ್ನು ಸಂಗ್ರಹಿಸಲಾಗಿದೆಯೇ ಎಂಬುದನ್ನು ಅವರು ಪ್ರಶ್ನಿಸಿದ್ದಾರೆ.

ಅದರ ಜೊತೆಗೆ, ಸಂಬಂಧಪಟ್ಟ ಭೂಮಾಲೀಕರು, ಗುತ್ತಿಗೆದಾರರು, ಕಾಮಗಾರಿ ನಿರ್ವಹಿಸಿದ ವ್ಯಕ್ತಿಗಳು ಅಥವಾ ಸಂಸ್ಥೆಗಳು ಮತ್ತು ಯಂತ್ರೋಪಕರಣಗಳ ಮಾಲೀಕರನ್ನು ಗುರುತಿಸಿ ವಿಚಾರಣೆ ನಡೆಸಲಾಗಿದೆಯೇ ಎಂಬುದಕ್ಕೂ ದಾಖಲೆ ಆಧಾರಿತ ಉತ್ತರವನ್ನು ಅವರು ಕೇಳಿದ್ದಾರೆ.

“ನಾಲ್ಕು ಜನರ ಜೀವಹಾನಿ ಮತ್ತು ಇಬ್ಬರು ವ್ಯಕ್ತಿಗಳ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾದ ದುರಂತವನ್ನು ಕೇವಲ ‘ನೈಸರ್ಗಿಕ ವಿಕೋಪ’ ಎಂದು ಹೇಳಿ ಮುಕ್ತಾಯಗೊಳಿಸಲಾಗದು. ನೈಸರ್ಗಿಕ ಕಾರಣ ಮತ್ತು ಮಾನವ ಹಸ್ತಕ್ಷೇಪದ ಪ್ರತ್ಯೇಕ ಪಾತ್ರವನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕು” ಎಂಬುದು ಆಶ್ವಿನಿಯ ಪ್ರಮುಖ ಒತ್ತಾಯವಾಗಿದೆ.

ಕೋಣಾಜೆ ಪೊಲೀಸರ ಹಿಂಬರಹದಲ್ಲಿ ಉಲ್ಲೇಖಿಸಿರುವ ಮಂಜನಾಡಿ ಗ್ರಾಮ ಪಂಚಾಯತ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ಎನ್‌ಐಟಿಕೆ ಸುರತ್ಕಲ್ ಮತ್ತು ಜಲಸಂಪನ್ಮೂಲ ಇಲಾಖೆಯ ವರದಿಗಳ ಪ್ರಮಾಣೀಕೃತ ಪ್ರತಿಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸ್ಥಳ ಪರಿಶೀಲನಾ ವರದಿ, ಸ್ಥಳ ಮಹಜರು, ಛಾಯಾಚಿತ್ರಗಳು, ವೀಡಿಯೊ ದಾಖಲೆಗಳು ಹಾಗೂ ಇತರ ತನಿಖಾ ದಾಖಲೆಗಳನ್ನೂ ಒದಗಿಸುವಂತೆ ಮನವಿ ಮಾಡಿದ್ದಾರೆ.

ಅಲ್ಲದೆ, ತನಿಖೆಯನ್ನು ಸಂಬಂಧಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಮರುಪರಿಶೀಲಿಸಿ, ತನಿಖೆಯಲ್ಲಿ ಉಳಿದಿರುವ ಎಲ್ಲಾ ಪ್ರಮುಖ ಅಂಶಗಳನ್ನು ಪೂರ್ಣಗೊಳಿಸಬೇಕು. ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಅಧಿಕಾರಿಯ ನಿರ್ಲಕ್ಷ್ಯ, ಕಾನೂನುಬಾಹಿರ ಕೃತ್ಯ ಅಥವಾ ಅಪರಾಧಾತ್ಮಕ ಹೊಣೆಗಾರಿಕೆ ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಒಬ್ಬ ತಾಯಿ ತನ್ನ ಇಬ್ಬರು ಮಕ್ಕಳ ಸಾವಿನ ನಿಜವಾದ ಕಾರಣವನ್ನು ತಿಳಿದುಕೊಳ್ಳಲು ಕೇಳುತ್ತಿರುವುದು ಪ್ರತೀಕಾರವಲ್ಲ; ಅದು ನ್ಯಾಯದ ಮೂಲಭೂತ ಹಕ್ಕು.

ಮಂಜನಾಡಿ ದುರಂತದ ತನಿಖೆ ನಿಜವಾಗಿಯೂ ಸಂಪೂರ್ಣವಾಗಿದೆಯೇ? ಅಥವಾ ನೈಸರ್ಗಿಕ ವಿಕೋಪದ ಹೆಸರಿನಲ್ಲಿ ಸಂಭವನೀಯ ಮಾನವ ಹೊಣೆಗಾರಿಕೆಯನ್ನು ತನಿಖೆಯ ಹೊರಗೆ ಇಡಲಾಗಿದೆಯೇ?

ಈಗ ಈ ಪ್ರಶ್ನೆ ಕೇವಲ ಆಶ್ವಿನಿಯದ್ದಲ್ಲ. ನಾಲ್ಕು ಜೀವಗಳನ್ನು ಕಳೆದುಕೊಂಡ ಮಂಜನಾಡಿ ದುರಂತದ ಸತ್ಯವನ್ನು ತಿಳಿದುಕೊಳ್ಳಬೇಕೆಂದು ಬಯಸುವ ಪ್ರತಿಯೊಬ್ಬ ನಾಗರಿಕನ ಪ್ರಶ್ನೆಯಾಗಿದೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲದಿಂದ ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ವಿದ್ಯುತ್ ವಾಹನ, ಎಐ ರಿಸೆಪ್ಷನ್ ರೋಬೋಟ್ ಅನಾವರಣ

July 23, 2026

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ನೂತನ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ ಪಾಣಕ್ಕಾಡ್ ಸಯ್ಯದ್ ನಾಸಿರ್ ಅಬ್ದುಲ್ ಹಯ್ಯ್ ಶಿಹಾಬುದ್ದೀನ್ ತಂಙಳ್ ಬಾಅಲವಿ

July 22, 2026

ಶಾಂತಿಯುತ ಪ್ರತಿಭಟನಾಕಾರ ವಿದ್ಯಾರ್ಥಿಗಳ ಮೇಲಿನ ದಮನ ಖಂಡನೀಯ: ಎಐಸಿಯು ಕರ್ನಾಟಕ

July 22, 2026

Comments are closed.

Advertise
ಸಂಪರ್ಕಿಸಿ

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ- ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

July 22, 2026

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026
suddi

ರಸ್ತೆ ಅವ್ಯವಸ್ಥೆ: ಅರ್ಧದಲ್ಲೇ ನಿಂತ ಆಂಬ್ಯುಲೆನ್ಸ್; ಆಟೋದಲ್ಲಿ ವೃದ್ಧೆಯ ಸಾಗಾಟ

By UllalaVaniJuly 24, 20260

ಉಳ್ಳಾಲ, ಜು.24: ರಸ್ತೆ ದುರವಸ್ಥೆಯಿಂದಾಗಿ ಆಂಬ್ಯುಲೆನ್ಸ್ ಗ್ರಾಮದೊಳಗೆ ತಲುಪಲು ಸಾಧ್ಯವಾಗದೆ ಅರ್ಧದಲ್ಲೇ ನಿಲ್ಲಬೇಕಾದ ಪರಿಣಾಮ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೊಬ್ಬರನ್ನು…

ವಿಬಿ-ಜಿ ರಾಮ್-ಜಿ ಹಾಗೂ ಕೃಷಿ ಇಲಾಖೆಯ ಸೌಲಭ್ಯಗಳ ಮಾಹಿತಿ ಕಾರ್ಯಗಾರ

July 24, 2026

ಮುಡಿಪು; ಕಾರು ಢಿಕ್ಕಿ..! ಅಳೇಕಲ ನಿವಾಸಿ ಅಬ್ದುಲ್ ಖಾದರ್ ಪಾದಚಾರಿ ಮೃತ್ಯು

July 24, 2026

ಮಂಜನಾಡಿ ದುರಂತ: ಗುಡ್ಡ ಕುಸಿದು ಮನೆ ಬೀಳಲು ಅಶ್ವಿನಿಯೇ ಕಾರಣವೇ? —ಕೊಣಾಜೆ ಪೊಲೀಸರ ಹಿಂಬರಹದ ವಿರುದ್ಧ ತಾಯಿಯ ಕಾನೂನು ಸಮರ

July 24, 2026
1 2 3 … 2,033 Next
Automatic YouTube Gallery

ದ.ಕ.ಜಿಲ್ಲಾ ನೂತನ ಖಾಝಿಯಾಗಿ ಸೈಯದ್ ನಾಸಿರ್ ಅಬ್ದುಲ್ ಹಯ್ಯಾ ಶಿಹಾಬುದ್ದೀನ್ ಬಾಅಲವಿ ಅಧಿಕಾರ ಸ್ವೀಕಾರ

ದ.ಕ. ಜಿಲ್ಲಾ ಖಾಝಿಯಾಗಿ ಅಧಿಕಾರ ವಹಿಸಿಕೊಂಡ ಪಾಣಕ್ಕಾಡ್ ಕುಟುಂಬದ ಸೈಯದ್ ನಾಸಿರ್ ಬಾಅಲವಿ

ಬಂದರ್‌ನಲ್ಲಿ ದ.ಕ. ಜಿಲ್ಲಾ ಖಾಝಿ ಅಧಿಕಾರ ಸ್ವೀಕಾರ ಸಮಾರಂಭ; ಧಾರ್ಮಿಕ-ರಾಜಕೀಯ ಗಣ್ಯರ ಭಾಗಿ


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ದ.ಕ.ಜಿಲ್ಲಾ ನೂತನ ಖಾಝಿಯಾಗಿ ಸೈಯದ್ ನಾಸಿರ್ ಅಬ್ದುಲ್ ಹಯ್ಯಾ ಶಿಹಾಬುದ್ದೀನ್ ಬಾಅಲವಿ ಅಧಿಕಾರ ಸ್ವೀಕಾರ
Now Playing
ದ.ಕ.ಜಿಲ್ಲಾ ನೂತನ ಖಾಝಿಯಾಗಿ ಸೈಯದ್ ನಾಸಿರ್ ಅಬ್ದುಲ್ ಹಯ್ಯಾ ಶಿಹಾಬುದ್ದೀನ್ ಬಾಅಲವಿ ಅಧಿಕಾರ ಸ್ವೀಕಾರ
ದ.ಕ. ಜಿಲ್ಲಾ ಖಾಝಿಯಾಗಿ ಅಧಿಕಾರ ವಹಿಸಿಕೊಂಡ ಪಾಣಕ್ಕಾಡ್ ಕುಟುಂಬದ ಸೈಯದ್ ನಾಸಿರ್ ...
ದ.ಕ. ಜಿಲ್ಲಾ ಖಾಝಿಯಾಗಿ ಅಧಿಕಾರ ವಹಿಸಿಕೊಂಡ ಪಾಣಕ್ಕಾಡ್ ಕುಟುಂಬದ ಸೈಯದ್ ನಾಸಿರ್ ಬಾಅಲವಿ

ಬಂದರ್‌ನಲ್ಲಿ ದ.ಕ. ಜಿಲ್ಲಾ ಖಾಝಿ ಅಧಿಕಾರ ಸ್ವೀಕಾರ ಸಮಾರಂಭ; ಧಾರ್ಮಿಕ-ರಾಜಕೀಯ ಗಣ್ಯರ ಭಾಗಿ


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
| Ullalavani|| ದಕ್ಷಿಣ ಕನ್ನಡ-ಉಡುಪಿ ಐಎಟಿ ಜಿಲ್ಲಾ ಘಟಕಕ್ಕೆ ಚಾಲನೆ
Now Playing
| Ullalavani|| ದಕ್ಷಿಣ ಕನ್ನಡ-ಉಡುಪಿ ಐಎಟಿ ಜಿಲ್ಲಾ ಘಟಕಕ್ಕೆ ಚಾಲನೆ
📍 Ullal | Dakshina Kannada | Coastal Karnataka News Update ಉಳ್ಳಾಲ, ...
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version