ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಮಿನಿಸ್ಕ್ರಿವ್ಸ್ ಫಾರ್ ಆರ್ಥಡಾಂಟಿಕ್ಸ್ ಎಂಬ ವಿಷಯದ ಕುರಿತ ನಿರಂತರ ಕಲಿಕಾ ಕಾರ್ಯಗಾರ ದೇರಳಕಟ್ಟೆಯ ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ವಿಂಶತಿ ಭವನದಲ್ಲಿ ನಡೆಯಿತು.
ನವದೆಹಲಿಯ ಏಮ್ಸ್ ಆಸ್ಪತ್ರೆಯ ದಂತ ಸಂಶೋಧನಾ ಮತ್ತು ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಪ್ರೊ.ಖರ್ಬಾಂದ ಕಾರ್ಯಗಾರವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಆಧುನಿಕ ತಂತ್ರಜ್ಞಾನದಲ್ಲಿ ವೈದ್ಯರು ನಿಸ್ಸೀಮರಾಗಬೇಕಿದ್ದು, ಈ ಮೂಲಕ ರೋಗಿಗಳಿಗೆ ಚಿಕಿತ್ಸೆಗಳು ಪರಿಣಾಮಕಾರಿಯಾಗುವುದು ಎಂದರು.
ಈ ಸಂದರ್ಭ ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಸ್ಥಾಪಕ ಡೀನ್ ಪ್ರೊ.ಡಾ.ಯನ್ ಶ್ರೀಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದಂತ ಮಹಾವಿದ್ಯಾಲಯದ ಡೀನ್ ಡಾ.ಯು.ಎಸ್.ಕೃಷ್ಣ ನಾಯಕ್ ನಿಟ್ಟೆ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕಲಿಕಾ ವಿಭಾಗದ ನಿರ್ದೇಶಕ ಡಾ.ರಾಜೇಂದ್ರ ಪ್ರಸಾದ್ , ದಂತ ಮಹಾವಿದ್ಯಾಲಯದ ಉಪಪ್ರಾಂಶುಪಾಲೆ ಡಾ.ಎನ್.ಮಿತ್ರಾ ಹೆಗ್ಡೆ ಹಾಗೂ ಎ.ಬಿ ಶೆಟ್ಟಿ ಆರ್ಥೊ ಅಲುಮಿನಿಯ ಕಾರ್ಯದರ್ಶಿ ಡಾ.ಎಂ.ಯನ್ ಕುಟ್ಟಪ್ಪ ಉಪಸ್ಥಿತರಿದ್ದರು.


