Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಜು.17ರಂದು ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿರುವ ಸೈಬರ್ ಕ್ರೈಂ ಕುರಿತ ಭಾವನಾತ್ಮಕ ಥ್ರಿಲ್ಲರ್ ಚಿತ್ರ ʻಅಚ್ಚುತ ಅವತಾರಂ ʼಮಂಗಳೂರಿನ ಬಿಗ್ ಸಿನಿಮಾಸ್‌ನಲ್ಲಿ ನಿರ್ಮಾಪಕ ರುದ್ರಮೂರ್ತಿ ಮಾಹಿತಿ

UllalaVaniBy UllalaVaniJuly 14, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು: ಸೈಬರ್ ಅಪರಾಧದ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ನಿರ್ಮಾಣಗೊಂಡಿರುವ ಭಾವನಾತ್ಮಕ ಥ್ರಿಲ್ಲರ್ ಕಥಾಹಂದರ ಹೊಂದಿರುವ ಪ್ಯಾನ್ ಇಂಡಿಯಾ ʻಅಚ್ಚುತ ಅವತಾರಂ ʼ ಚಲನಚಿತ್ರವು ಜುಲೈ 17ರಂದು ದೇಶಾದ್ಯಂತ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ರುದ್ರಮೂರ್ತಿ ತಿಳಿಸಿದರು.
ನಗರದ ಬಿಗ್ ಸಿನಿಮಾಸ್ನಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಈ ಚಿತ್ರವು ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಮಾಜಮುಖಿ ಸಂದೇಶವನ್ನು ಒಳಗೊಂಡಿದೆ ಎಂದರು.
ಚಿತ್ರದ ಕಥೆಯಲ್ಲಿ ಸಂಪ್ರದಾಯಬದ್ಧ ಕುಟುಂಬದಲ್ಲಿ ಬೆಳೆದ ಯುವತಿಯೊಬ್ಬಳು ಸೈಬರ್ ಅಪರಾಧದಿಂದ ತನ್ನ ಆತ್ಮೀಯ ವ್ಯಕ್ತಿಯನ್ನು ಕಳೆದುಕೊಳ್ಳುತ್ತಾಳೆ. ಈ ದುರ್ಘಟನೆಯಿಂದ ಕುಗ್ಗದೆ, ಧೈರ್ಯದಿಂದ ಎದ್ದು ನಿಂತು ಸೈಬರ್ ವಂಚಕರ ವಿರುದ್ಧ ಹೋರಾಟ ಆರಂಭಿಸುತ್ತಾಳೆ. ಆಕೆಯ ಜೀವನದಲ್ಲಿ ನಡೆಯುವ ಪರಿವರ್ತನೆ, ನ್ಯಾಯಕ್ಕಾಗಿ ನಡೆಸುವ ಹೋರಾಟ ಹಾಗೂ ಸಮಾಜವನ್ನು ಡಿಜಿಟಲ್ ವಂಚನೆಗಳಿಂದ ರಕ್ಷಿಸುವ ಸಂಕಲ್ಪವೇ ಚಿತ್ರದ ಪ್ರಮುಖ ಕಥಾವಸ್ತುವಾಗಿದೆ.
ಆಧ್ಯಾತ್ಮ, ಭಾರತೀಯ ಸಂಸ್ಕೃತಿ, ಕುಟುಂಬ ಮೌಲ್ಯಗಳು, ಆಧುನಿಕ ತಂತ್ರಜ್ಞಾನ ಮತ್ತು ಸಸ್ಪೆನ್ಸ್‌ ಅಂಶಗಳನ್ನು ಸಮನ್ವಯಗೊಳಿಸಿರುವ ಈ ಚಿತ್ರವು ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಸಾಮಾಜಿಕ ಕಾಳಜಿಯ ಸಂದೇಶವನ್ನು ತಲುಪಿಸಲಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ವಂಚನೆಗಳು, ಡಿಜಿಟಲ್ ಮೋಸಗಳು ಹಾಗೂ ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವನ್ನು ಚಿತ್ರ ಪರಿಣಾಮಕಾರಿಯಾಗಿ ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ದೇಶದ ಪ್ರತಿಯೊಬ್ಬ ಪ್ರೇಕ್ಷಕರಿಗೂ ಈ ಕಥೆ ತಲುಪಬೇಕು ಎಂಬ ಉದ್ದೇಶದಿಂದ ಚಿತ್ರವನ್ನು ಐದು ಪ್ರಮುಖ ಭಾರತೀಯ ಭಾಷೆಗಳಲ್ಲಿ ನಿರ್ಮಿಸಲಾಗಿದೆ. ಎಲ್ಲ ವರ್ಗದ ಪ್ರೇಕ್ಷಕರ ಮನಸ್ಸನ್ನು ಸ್ಪರ್ಶಿಸುವ ಭಾವನಾತ್ಮಕ ಕಥೆ, ರೋಚಕ ನಿರೂಪಣೆ ಹಾಗೂ ಸಾಮಾಜಿಕ ಜವಾಬ್ದಾರಿಯ ಸಂದೇಶ ಈ ಚಿತ್ರದ ವಿಶೇಷತೆಯಾಗಿದೆ ಎಂದು ನಿರ್ಮಾಪಕ ರುದ್ರಮೂರ್ತಿ ಹೇಳಿದರು. ಜುಲೈ 17ರಂದು ದೇಶಾದ್ಯಂತ ಬಿಡುಗಡೆಯಾಗಲಿರುವ ಈ ಪ್ಯಾನ್ ಇಂಡಿಯಾ ಚಿತ್ರವು ಸೈಬರ್ ಜಾಗೃತಿಯೊಂದಿಗೆ ಹೊಸ ರೀತಿಯ ಸಿನಿ ಅನುಭವವನ್ನು ಪ್ರೇಕ್ಷಕರಿಗೆ ನೀಡಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ನಿರ್ದೇಶಕ ಪುನೀತ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ಈಗಾಗಲೇ ತನ್ನ ವಿಭಿನ್ನ ಕಥಾಹಂದರ, ಭಾವನಾತ್ಮಕ ನಿರೂಪಣೆ ಹಾಗೂ ಸಾಮಾಜಿಕ ಸಂದೇಶದ ಮೂಲಕ ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕೆವಿಎನ್ (KVN) ಸಂಸ್ಥೆಯು ದಕ್ಷಿಣ ಭಾರತದಾದ್ಯಂತ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಲಿದೆ. ವಿದೇಶಗಳಲ್ಲಿಯೂ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವುದರಿಂದ ವಿಶ್ವದಾದ್ಯಂತ ಭಾರತೀಯ ಸಿನಿಪ್ರೇಕ್ಷಕರು ಚಿತ್ರವನ್ನು ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ.
ಕಾಂತಾರ ಚಿತ್ರದಲ್ಲಿ ಅಭಿನಯಿಸಿ ಜನಮನ್ನಣೆ ಗಳಿಸಿದ ತುಳುನಾಡಿನ ‘ಕಾಡಿನ ಸೊಪ್ಪು ಬೇಕಾ’ ಖ್ಯಾತಿಯ ಚಂದ್ರಕಲಾ ಮೇಡಂ ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಟ ಅವಿನಾಶ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವುದು ಚಿತ್ರತಂಡಕ್ಕೆ ದೊಡ್ಡ ಬಲವಾಗಿದೆ. ಅಲ್ಲದೆ, ಕನ್ನಡ ಚಿತ್ರರಂಗದ ಪ್ರಸಿದ್ಧ ವಿತರಣಾ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಚಿತ್ರದ ವಿತರಣೆಯ ಹೊಣೆ ಹೊತ್ತು ಬೆಂಬಲ ಸೂಚಿಸಿರುವುದು ಚಿತ್ರದ ಆರಂಭಿಕ ಯಶಸ್ಸಿನ ಪ್ರಮುಖ ಹೆಜ್ಜೆಯಾಗಿದೆ ಎಂದು ಚಿತ್ರದ ನಿರ್ದೇಶಕ ರುದ್ರಮೂರ್ತಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಕಲ್ಲಾಪು ಬುರ್ದುಗೋಳಿ ಕ್ಷೇತ್ರದಲ್ಲಿ ಹರಕೆ ಕೋಲ ತೀರಿಸಿದ ಮಾಜಿ ಸಚಿವ ವಿ.ಸುನಿಲ್‌ ಕುಮಾರ್‌

July 14, 2026

ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷರಾಗಿ ರಾಜೇಶ್ ಪುತ್ರನ್ ಅವಿರೋಧ ಆಯ್ಕೆ

July 14, 2026

ಬಿಜೆಪಿ ಹಿರಿಯ ಮುಖಂಡ ಸಂಜೀವ ಶೆಟ್ಟಿ ಅಂಬ್ಲಮೊಗರು ನಿಧನ..!

July 7, 2026

Comments are closed.

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
All News

ಜು.17ರಂದು ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿರುವ ಸೈಬರ್ ಕ್ರೈಂ ಕುರಿತ ಭಾವನಾತ್ಮಕ ಥ್ರಿಲ್ಲರ್ ಚಿತ್ರ ʻಅಚ್ಚುತ ಅವತಾರಂ ʼಮಂಗಳೂರಿನ ಬಿಗ್ ಸಿನಿಮಾಸ್‌ನಲ್ಲಿ ನಿರ್ಮಾಪಕ ರುದ್ರಮೂರ್ತಿ ಮಾಹಿತಿ

By UllalaVaniJuly 14, 20260

ಮಂಗಳೂರು: ಸೈಬರ್ ಅಪರಾಧದ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ನಿರ್ಮಾಣಗೊಂಡಿರುವ ಭಾವನಾತ್ಮಕ ಥ್ರಿಲ್ಲರ್ ಕಥಾಹಂದರ ಹೊಂದಿರುವ ಪ್ಯಾನ್ ಇಂಡಿಯಾ ʻಅಚ್ಚುತ…

ಕಲ್ಲಾಪು ಬುರ್ದುಗೋಳಿ ಕ್ಷೇತ್ರದಲ್ಲಿ ಹರಕೆ ಕೋಲ ತೀರಿಸಿದ ಮಾಜಿ ಸಚಿವ ವಿ.ಸುನಿಲ್‌ ಕುಮಾರ್‌

July 14, 2026

ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷರಾಗಿ ರಾಜೇಶ್ ಪುತ್ರನ್ ಅವಿರೋಧ ಆಯ್ಕೆ

July 14, 2026

ಬೆಳ್ತಂಗಡಿ: ದಿಡುಪೆ ಜಲಪಾತದಲ್ಲಿ ನೈತಿಕ ಪೊಲೀಸ್‌ಗಿರಿ- ಐವರ ವಿರುದ್ಧ ಪ್ರಕರಣ ದಾಖಲು

July 14, 2026
1 2 3 … 2,015 Next
Automatic YouTube Gallery

| Ullalavani| ಕರಾವಳಿ-ಕಾಸರಗೋಡು ಸೊಬಗಿನ ಕಥೆಯಾಧಾರಿತ `ಅಚ್ಯುತ ಅವತಾರಂ' ಜು.17ಕ್ಕೆ ರಿಲೀಸ್

ಪಂಚ ಭಾಷೆಗಳಲ್ಲಿ ಸೆಟ್ ಏರಲಿದೆ `ಅಚ್ಯುತ ಅವತಾರಂ'; ಈ ಸಿನಿಮಾಗೆ ದೈವಿಕ ಟೈಟಲ್ ಕೊಟ್ಟಿದ್ಯಾಕೆ..??

ಕಾಡಿನಲ್ಲಿ ಸೊಪ್ಪು ಸಿಗ್ತದೆ ಖ್ಯಾತಿಯ ಚಂದ್ರಕಲಾ ಹಾಗು ಕನ್ನಡ ಹಿರಿಯ ನಟ ಅವಿನಾಶ್ ನಟನೆ ಸಿನಿಮಾ

📍 Ullal | Dakshina Kannada | Coastal Karnataka News ...
Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
| Ullalavani| ಕರಾವಳಿ-ಕಾಸರಗೋಡು ಸೊಬಗಿನ ಕಥೆಯಾಧಾರಿತ `ಅಚ್ಯುತ ಅವತಾರಂ' ಜು.17ಕ್ಕೆ ರಿಲೀಸ್
Now Playing
| Ullalavani| ಕರಾವಳಿ-ಕಾಸರಗೋಡು ಸೊಬಗಿನ ಕಥೆಯಾಧಾರಿತ `ಅಚ್ಯುತ ಅವತಾರಂ' ಜು.17ಕ್ಕೆ ರಿಲೀಸ್
ಪಂಚ ಭಾಷೆಗಳಲ್ಲಿ ಸೆಟ್ ಏರಲಿದೆ `ಅಚ್ಯುತ ಅವತಾರಂ'; ಈ ಸಿನಿಮಾಗೆ ದೈವಿಕ ಟೈಟಲ್ ...
ಪಂಚ ಭಾಷೆಗಳಲ್ಲಿ ಸೆಟ್ ಏರಲಿದೆ `ಅಚ್ಯುತ ಅವತಾರಂ'; ಈ ಸಿನಿಮಾಗೆ ದೈವಿಕ ಟೈಟಲ್ ಕೊಟ್ಟಿದ್ಯಾಕೆ..??

ಕಾಡಿನಲ್ಲಿ ಸೊಪ್ಪು ಸಿಗ್ತದೆ ಖ್ಯಾತಿಯ ಚಂದ್ರಕಲಾ ಹಾಗು ಕನ್ನಡ ಹಿರಿಯ ನಟ ಅವಿನಾಶ್ ನಟನೆ ಸಿನಿಮಾ

📍 Ullal | Dakshina Kannada | Coastal Karnataka News ...
Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ವಿರೋಧ ಪಕ್ಷದ ನಾಯಕರಾಗಿ ಪಟ್ಟಕ್ಕೇರಲಿದ್ದಾರಾ ಕಾರ್ಕಳ ಶಾಸಕ ಸುನೀಲ್‌ ಕುಮಾರ್...?
Now Playing
ವಿರೋಧ ಪಕ್ಷದ ನಾಯಕರಾಗಿ ಪಟ್ಟಕ್ಕೇರಲಿದ್ದಾರಾ ಕಾರ್ಕಳ ಶಾಸಕ ಸುನೀಲ್‌ ಕುಮಾರ್...?
ಗುಳಿಗ ಕೊರಗಜ್ಜ ದೈವಗಳ ಉದ್ಭವಶಿಲೆಯ ಪ್ರಧಾನ ಆದಿಸ್ಥಳ ಕಲ್ಲಾಪುಗೆ ಭೇಟಿ ನೀಡಿದ ...
ಗುಳಿಗ ಕೊರಗಜ್ಜ ದೈವಗಳ ಉದ್ಭವಶಿಲೆಯ ಪ್ರಧಾನ ಆದಿಸ್ಥಳ ಕಲ್ಲಾಪುಗೆ ಭೇಟಿ ನೀಡಿದ ಶಾಸಕ ವಿ.ಸುನೀಲ್‌ ಕುಮಾರ್‌ ; ವಿಶೇಷ ಪ್ರಾರ್ಥನೆ ಸಲ್ಲಿಕೆ

ವಿರೋಧ ಪಕ್ಷದ ನಾಯಕರಾಗಿ ಆಯ್ಕೆಗೊಳ್ಳಲಿದ್ದಾರೆ ಎಂಬ ಊಹಪೋಹಗಳ ನಡುವೆ ಶಾಸಕರ ಭೇಟಿ ಕೂತೂಹಲ ಮೂಡಿಸಿದೆ

📍 Ullal | Dakshina ...
Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version