ಮುಡಿಪು :ಆನೆಕಲ್ಲು ಛತ್ರ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ದಾರ, ಬ್ರಹ್ಮಕಲಶ ಹಾಗೂ ಸಭಾಂಗಣ ಇತ್ಯಾದಿಗಳ ನಿರ್ಮಾಣದಲ್ಲಿ ನಾನಿಲ್ತಡಿ ತಿಮ್ಮಪ್ಪ ರೈ ಯವರ ಪಾತ್ರ ಹಿರಿದಾಗಿದೆ.ಧಾರ್ಮಿಕ ಕರ್ಯಗಳಲ್ಲಿ ಅಪಾರ ಶ್ರದ್ದೆಯಿದ್ದ ಅವರು ಹಲವಾರು ದಾನಿಗಳನ್ನು ಜೋಡಿಸಿಕೊಂಡು ರಾತ್ರಿ ಹಗಲೆನ್ನದೆ ದುಡಿದು ಪ್ರತಿಫಲವಾಗಿ ಇಂತಹ ಸುಂದರ ದೇವಸ್ಥಾನ ನಿರ್ಮಾಣವಾಗಿದೆ ಎಂದು ನಿವೃತ್ತ ಶಿಕ್ಷಕ ಎಸ್.ಎನ್ ಭಟ್ ಹೇಳಿದ್ದಾರೆ.

ಅವರು ಇತ್ತೀಚೆಗೆ ನಿಧನರಾದ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾದ ಎನ್.ಟಿ.ರೈ ಯವರಿಗೆ ನುಡಿನಮನ ಸಲ್ಲಿಸಿ ಮಾತನಾಡುತ್ತಿದ್ದರು.
ಪತ್ರಕರ್ತ ಶಶಿಧರ್ ಪೊಯ್ಯತ್ತಬೈಲ್ ಮಾತನಾಡಿ ಟೀಕೆಗಳನ್ನು ಮೂಟೆಕಟ್ಟಿ ಅದರ ಮೇಲೆ ನಿಂತು ತಮ್ಮ ಕರ್ತವ್ಯ ನಿರ್ವಹಿಸಿದಾಗ ಯಶಸ್ಸು ಸಾಧ್ಯ ಎಂಬುದಕ್ಕೆ ಎನ್ ಟಿ ರೈ ಸದಾ ಮಾದರಿಯಾಗಿದ್ದರು ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದ ಎನ್ ಆರ್ ಐ ಮಲ್ಲಿಕಾ ಆರ್ ಚೌಟ ಅವರ ಸಂದೇಶ ವಾಚಿಸಲಾಯಿತು.
ಆಡಳಿತ ಮೊಕ್ತೇಸರರಾದ ಕೃಷ್ಣನಾಯ್ಕ ಸೊಡಂಕೂರು, ರಾಮ ನೋಂಡ, ಜಯಂತ ಗಾಂಭೀರ್ ಪಾವೂರುಗುತ್ತು. ಮಹಾಲಿಂಗ ನಾಯ್ಕ ಪಜ್ವ, ಮಾತೃ ಮಂಡಳಿ ಅಧ್ಯಕ್ಷೆ ಉಷಾ ಕಜೆ ಮುಂತಾದವರಿದ್ದರು.
ಕಾರ್ತಿಕ್ ನಾಣಿಲ್ತಡಿ ಸ್ವಾಗತಿಸಿ ವಂದನಾರ್ಪಣೆಯಿತ್ತರು.

