Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

ಮಕ್ಕಳಿಗೆ ದೈಹಿಕ ಶಿಕ್ಷೆ ನೀಡಿದ ಆರೋಪ: ಶಿಕ್ಷಕಿ ವಿರುದ್ಧದ ಪ್ರಕರಣ ಕೈಬಿಡಲು ಸಾಧ್ಯವಿಲ್ಲ – ಕರ್ನಾಟಕ ಹೈಕೋರ್ಟ್

UllalaVaniBy UllalaVaniJuly 8, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು: ಶಾಲೆಯಲ್ಲಿ ಎಲ್‌ಕೆಜಿ ವಿದ್ಯಾರ್ಥಿನಿಗೆ ದೈಹಿಕ ಶಿಕ್ಷೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣವನ್ನು ಈ ಹಂತದಲ್ಲಿ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣದ ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆ ಮುಂದುವರಿಯಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿರುವುದು ಮಕ್ಕಳ ಹಕ್ಕುಗಳ ರಕ್ಷಣೆಗೆ ಮಹತ್ವದ ಸಂದೇಶವೆಂದು ಪರಿಗಣಿಸಲಾಗಿದೆ.

ಪ್ರಕರಣದ ವಿವರಗಳ ಪ್ರಕಾರ, ಸುರತ್ಕಲ್‌ನ ಖಾಸಗಿ ಶಾಲೆಯೊಂದರಲ್ಲಿ ಎಲ್‌ಕೆಜಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ತರಗತಿ ವೇಳೆ ಶಿಕ್ಷಕಿ ಆಶಾ ಕಾಸ್ತ ಅವರು ಕೋಲಿನಿಂದ ಹೊಡೆದಿದ್ದಾರೆ ಎಂದು ಮಗುವಿನ ತಾಯಿ ಪ್ರತೀನಾ ಅವರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರಂಭದಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರು ಮಧ್ಯಸ್ಥಿಕೆ ವಹಿಸಿ ವಿಷಯವನ್ನು ಬಗೆಹರಿಸಿರುವುದಾಗಿ ಹೇಳಲಾಗಿದ್ದರೂ, ಬಳಿಕ ಮತ್ತೆ ಮಗುವಿಗೆ ದೈಹಿಕ ಶಿಕ್ಷೆ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಗುವಿನ ತಾಯಿ ಶಫ್ರೀನಾ ದೂರು ಸಲ್ಲಿಸಿದ್ದರು.

ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಬಳಿಕ ಮಂಗಳೂರು 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಶಿಕ್ಷಕಿ ಆಶಾ ಕ್ರಾಸ್ತಾ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಹಂತದಲ್ಲಿ ಪ್ರಕರಣವನ್ನು ಕೈಬಿಡಲು ಅವಕಾಶವಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿಗಳಾದ ನಾಗಪ್ರಸನ್ನ ಅವರ ಏಕ ಸದಸ್ಯ ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಶಾಲೆ ಎಂಬುದು ಮಕ್ಕಳ ಜ್ಞಾನ, ವ್ಯಕ್ತಿತ್ವ ಮತ್ತು ಸಂಸ್ಕಾರ ರೂಪುಗೊಳ್ಳುವ ಪವಿತ್ರ ತಾಣ. ಅಂತಹ ಸ್ಥಳದಲ್ಲಿ ಭಯ, ಹಿಂಸೆ ಅಥವಾ ದೈಹಿಕ ಶಿಕ್ಷೆಗೆ ಯಾವುದೇ ಸ್ಥಾನವಿಲ್ಲ. ಮಕ್ಕಳಿಗೆ ಹೊಡೆಯುವ ಮೂಲಕ ಶಿಸ್ತು ಕಲಿಸುವ ವಿಧಾನವನ್ನು ಕಾನೂನು ಮತ್ತು ಆಧುನಿಕ ಶಿಕ್ಷಣ ವ್ಯವಸ್ಥೆ ಎರಡೂ ತಿರಸ್ಕರಿಸುತ್ತವೆ.

ಭಾರತದ ಸಂವಿಧಾನದ ಪರಿಚ್ಛೇದ 21 ಪ್ರತಿಯೊಬ್ಬ ಮಗುವಿಗೂ ಘನತೆಯಿಂದ ಬದುಕುವ ಹಕ್ಕನ್ನು ಖಾತರಿಪಡಿಸುತ್ತದೆ. ಪರಿಚ್ಛೇದ 21ಎ ಶಿಕ್ಷಣದ ಹಕ್ಕನ್ನು ನೀಡುವುದರ ಜೊತೆಗೆ ಸುರಕ್ಷಿತ ಮತ್ತು ಗೌರವಯುತ ಶಿಕ್ಷಣ ವಾತಾವರಣವನ್ನು ಒತ್ತಿಹೇಳುತ್ತದೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ, 2009ರ ಕಲಂ 17 ಶಾಲೆಗಳಲ್ಲಿ ದೈಹಿಕ ಶಿಕ್ಷೆ ಹಾಗೂ ಮಾನಸಿಕ ಕಿರುಕುಳವನ್ನು ಸ್ಪಷ್ಟವಾಗಿ ನಿಷೇಧಿಸಿದೆ. ಜೊತೆಗೆ ಜುವೆನೈಲ್ ಜಸ್ಟಿಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಹಾಗೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಮಾರ್ಗಸೂಚಿಗಳೂ ಮಕ್ಕಳ ಮೇಲಿನ ಯಾವುದೇ ರೀತಿಯ ಹಿಂಸೆಯನ್ನು ಅನುಮತಿಸುವುದಿಲ್ಲ.

ಶಿಕ್ಷಕರು ಮಕ್ಕಳನ್ನು ಪ್ರೀತಿ, ಸಹಾನುಭೂತಿ ಮತ್ತು ಮನೋವೈಜ್ಞಾನಿಕ ಅರಿವಿನ ಮೂಲಕ ಮಾರ್ಗದರ್ಶನ ಮಾಡಬೇಕೇ ಹೊರತು, ದೈಹಿಕ ಶಿಕ್ಷೆಯ ಮೂಲಕ ಅಲ್ಲ. ಇಂತಹ ಶಿಕ್ಷೆಗಳು ಮಕ್ಕಳಲ್ಲಿ ಭಯ, ಆತಂಕ, ಆತ್ಮವಿಶ್ವಾಸದ ಕೊರತೆ ಹಾಗೂ ಶಾಲೆಯ ಬಗ್ಗೆ ನಕಾರಾತ್ಮಕ ಮನೋಭಾವವನ್ನು ಉಂಟುಮಾಡುವ ಸಾಧ್ಯತೆ ಇದೆ.

ಹೈಕೋರ್ಟ್‌ನ ಈ ಅಭಿಪ್ರಾಯವು ಕೇವಲ ಒಂದು ಪ್ರಕರಣಕ್ಕೆ ಸೀಮಿತವಾಗದೆ, ರಾಜ್ಯದ ಎಲ್ಲಾ ಶಿಕ್ಷಣ ಸಂದೇಶವಾಗಿದೆ ಸಂಸ್ಥೆಗಳಿಗೆ ಎಚ್ಚರಿಕೆಯ . ಶಾಲಾ ಆಡಳಿತ ಮಂಡಳಿಗಳು ಮಕ್ಕಳ ಸುರಕ್ಷತೆ, ಹಕ್ಕುಗಳು ಮತ್ತು ಕಾನೂನುಬದ್ಧ ಜವಾಬ್ದಾರಿಗಳ ಕುರಿತು ಶಿಕ್ಷಕರಿಗೆ ನಿರಂತರ ತರಬೇತಿ ನೀಡುವುದು ಹಾಗೂ ಪ್ರತಿಯೊಂದು ಶಾಲೆಯಲ್ಲೂ ಪರಿಣಾಮಕಾರಿ ಮಕ್ಕಳ ಸುರಕ್ಷತಾ ನೀತಿ ಮತ್ತು ದೂರು ನಿವಾರಣಾ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅಗತ್ಯವಾಗಿದೆ.

ಮಕ್ಕಳಿಗೆ ಹೊಡೆದು ಶಿಕ್ಷಣ ನೀಡುವ ಕಾಲ ಮುಗಿದಿದೆ. ಸಂವಿಧಾನ, ಕಾನೂನು ಮತ್ತು ಮಾನವೀಯ ಮೌಲ್ಯಗಳು ಹೇಳುವುದು ಒಂದೇ—ಮಕ್ಕಳಿಗೆ ಭಯವಲ್ಲ, ಪ್ರೀತಿ, ಗೌರವ ಮತ್ತು ಸುರಕ್ಷಿತ ವಾತಾವರಣದ ಮೂಲಕ ಶಿಕ್ಷಣ ನೀಡಬೇಕು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಕಿನ್ಯಾ ಗ್ರಾಮ ಪಂಚಾಯತ್ ಕಾರ್ಯದರ್ಶಿ ವಾಣಿಶ್ರೀ ಅವರಿಗೆ ಬೀಳ್ಕೊಡುಗೆ ಸಮಾರಂಭ

July 8, 2026

ರದ್ದಾದ ಬಿಪಿಎಲ್ ಕಾರ್ಡ್‌ದಾರರಿಗೆ ರಾಜ್ಯ ಸರ್ಕಾರದ ಸಿಹಿಸುದ್ದಿ: ಮರು ಸಕ್ರಿಯಗೊಳಿಸಲು ಅವಕಾಶ

July 8, 2026

ವಯನಾಡಿನಲ್ಲಿ ಭೀಕರ ಗುಡ್ಡ ಕುಸಿತ: ನಾಪತ್ತೆಯಾದ ಐವರ ಶೋಧಕ್ಕೆ ಮಳೆ ಅಡ್ಡಿ..!

July 8, 2026

Comments are closed.

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ಕಿನ್ಯಾ ಗ್ರಾಮ ಪಂಚಾಯತ್ ಕಾರ್ಯದರ್ಶಿ ವಾಣಿಶ್ರೀ ಅವರಿಗೆ ಬೀಳ್ಕೊಡುಗೆ ಸಮಾರಂಭ

By UllalaVaniJuly 8, 20260

ಉಳ್ಳಾಲ, ಜು. 8: ಮಹಾತ್ಮ ಗಾಂಧಿ ಕಿನ್ಯಾ ಗ್ರಾಮ ಪಂಚಾಯತ್‌ನ ಪಂಚಾಯತ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾಗುತ್ತಿರುವ ವಾಣಿಶ್ರೀ ಅವರಿಗೆ…

ರದ್ದಾದ ಬಿಪಿಎಲ್ ಕಾರ್ಡ್‌ದಾರರಿಗೆ ರಾಜ್ಯ ಸರ್ಕಾರದ ಸಿಹಿಸುದ್ದಿ: ಮರು ಸಕ್ರಿಯಗೊಳಿಸಲು ಅವಕಾಶ

July 8, 2026

ಮಕ್ಕಳಿಗೆ ದೈಹಿಕ ಶಿಕ್ಷೆ ನೀಡಿದ ಆರೋಪ: ಶಿಕ್ಷಕಿ ವಿರುದ್ಧದ ಪ್ರಕರಣ ಕೈಬಿಡಲು ಸಾಧ್ಯವಿಲ್ಲ – ಕರ್ನಾಟಕ ಹೈಕೋರ್ಟ್

July 8, 2026

ವಯನಾಡಿನಲ್ಲಿ ಭೀಕರ ಗುಡ್ಡ ಕುಸಿತ: ನಾಪತ್ತೆಯಾದ ಐವರ ಶೋಧಕ್ಕೆ ಮಳೆ ಅಡ್ಡಿ..!

July 8, 2026
1 2 3 … 2,004 Next
Automatic YouTube Gallery

ಮೊಂತಿಮಾರು ಘಟನೆ; ಬಾಲಕಿ ಪ್ರಾಣಾಪಾಯದಿಂದ ಪಾರು.. ಆದ್ರೆ ಆಕೆಯ ಮುಂದಿನ ಸ್ಥಿತಿ..!

"ಒಂದು ಕ್ಷಣದ ಕೋಪ, ಅನೇಕ ಜೀವಗಳ ಬದುಕನ್ನೇ ಬದಲಾಯಿಸುತ್ತದೆ"; ಹಿಂಸೆಯಲ್ಲ, ಮಾನವೀಯತೆಯೇ ನಮ್ಮ ಸಮಾಜದ ಗುರುತಾಗಲಿ."

ಆಯುಧ ಹಿಡಿಯುವುದು ಧೈರ್ಯವಲ್ಲ; ಕೋಪವನ್ನು ನಿಯಂತ್ರಿಸುವುದೇ ನಿಜವಾದ ಧೈರ್ಯ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮೊಂತಿಮಾರು ಘಟನೆ; ಬಾಲಕಿ ಪ್ರಾಣಾಪಾಯದಿಂದ ಪಾರು.. ಆದ್ರೆ ಆಕೆಯ ಮುಂದಿನ ಸ್ಥಿತಿ..!
Now Playing
ಮೊಂತಿಮಾರು ಘಟನೆ; ಬಾಲಕಿ ಪ್ರಾಣಾಪಾಯದಿಂದ ಪಾರು.. ಆದ್ರೆ ಆಕೆಯ ಮುಂದಿನ ಸ್ಥಿತಿ..!
"ಒಂದು ಕ್ಷಣದ ಕೋಪ, ಅನೇಕ ಜೀವಗಳ ಬದುಕನ್ನೇ ಬದಲಾಯಿಸುತ್ತದೆ"; ಹಿಂಸೆಯಲ್ಲ, ...
"ಒಂದು ಕ್ಷಣದ ಕೋಪ, ಅನೇಕ ಜೀವಗಳ ಬದುಕನ್ನೇ ಬದಲಾಯಿಸುತ್ತದೆ"; ಹಿಂಸೆಯಲ್ಲ, ಮಾನವೀಯತೆಯೇ ನಮ್ಮ ಸಮಾಜದ ಗುರುತಾಗಲಿ."

ಆಯುಧ ಹಿಡಿಯುವುದು ಧೈರ್ಯವಲ್ಲ; ಕೋಪವನ್ನು ನಿಯಂತ್ರಿಸುವುದೇ ನಿಜವಾದ ಧೈರ್ಯ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮಂದಿರವನ್ನೇ ರಕ್ಷಿಸಲು ಸಾಧ್ಯವಾಗದವರು ದೇಶವನ್ನು ಹೇಗೆ ರಕ್ಷಿಸುತ್ತಾರೆ?
Now Playing
ಮಂದಿರವನ್ನೇ ರಕ್ಷಿಸಲು ಸಾಧ್ಯವಾಗದವರು ದೇಶವನ್ನು ಹೇಗೆ ರಕ್ಷಿಸುತ್ತಾರೆ?
ಹಿಂದೂಗಳ ಅಸ್ಮಿತೆ ಮತ್ತು ಭಾವನೆಗಳನ್ನು ಮುಂದಿಟ್ಟುಕೊoಡು ಅಧಿಕಾರಕ್ಕೆ ಬಂದ ...
ಹಿಂದೂಗಳ ಅಸ್ಮಿತೆ ಮತ್ತು ಭಾವನೆಗಳನ್ನು ಮುಂದಿಟ್ಟುಕೊoಡು ಅಧಿಕಾರಕ್ಕೆ ಬಂದ ಬಿಜೆಪಿ; ರಾಮಮಂದಿರದ ವಿಚಾರದಲ್ಲೇ ಮೌನವೇಕೆ..?

ಕೊಲ್ಯ ಶ್ರೀ ರಾಮ ಫ್ರೆಂಡ್ಸ್ ಸರ್ಕಲ್ ಕಾರ್ಯದರ್ಶಿ ಅಭಿಷೇಕ್ ಉಳ್ಳಾಲ್ ಪ್ರಶ್ನೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version