ಜೂನ್ 25ರಂದು ಮಂಗಳೂರಿಗೆ ಬಾಲಿವುಡ್ ಬಾದ್ಶಾ ಶಾರುಖ್ ಖಾನ್; ರೋಹನ್ ಕಾರ್ಪೊರೇಷನ್ನ ‘ಅನ್ ಈವಿನಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮ
ಮಂಗಳೂರು: ಕರಾವಳಿ ಕರ್ನಾಟಕದ ಪ್ರಮುಖ ಮತ್ತು ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಸಂಸ್ಥೆ ರೋಹನ್ ಕಾರ್ಪೊರೇಷನ್ ವತಿಯಿಂದ ಜೂನ್ 25ರಂದು ಮಂಗಳೂರಿನಲ್ಲಿ ಬಾಲಿವುಡ್ ಸೂಪರ್ಸ್ಟಾರ್ ಹಾಗೂ ಜಾಗತಿಕ ಮನರಂಜನಾ ಕ್ಷೇತ್ರದ ಐಕಾನ್ ಶಾರುಖ್ ಖಾನ್ ಭಾಗವಹಿಸಲಿರುವ ವಿಶೇಷ ಕಾರ್ಯಕ್ರಮ ‘ಅನ್ ಈವಿನಿಂಗ್ ವಿತ್ ಶಾರುಖ್ ಖಾನ್’ ಆಯೋಜಿಸಲಾಗಿದೆ.
ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ನಡೆಯಲಿರುವ ಈ ಭವ್ಯ ಕಾರ್ಯಕ್ರಮಕ್ಕೆ ಸಂಜೆ 4 ಗಂಟೆಯಿಂದ ಪ್ರವೇಶ ಆರಂಭವಾಗಲಿದೆ. ಉದ್ಯಮಿಗಳು, ಗಣ್ಯರು, ಆಹ್ವಾನಿತ ಅತಿಥಿಗಳು ಹಾಗೂ ನೋಂದಾಯಿತ ಸಾರ್ವಜನಿಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಈ ಕಾರ್ಯಕ್ರಮವು ಕರಾವಳಿ ಭಾಗದಲ್ಲಿ ಇದುವರೆಗೆ ನಡೆದ ಅತ್ಯಂತ ಮಹತ್ವದ ಕಾರ್ಪೊರೇಟ್ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಒಂದಾಗಲಿದೆ.
ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ರೋಹನ್ ಕಾರ್ಪೊರೇಷನ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ರೋಹನ್ ಮೊಂತೇರೊ, “ಶಾರುಖ್ ಖಾನ್ ಅವರನ್ನು ಮಂಗಳೂರಿಗೆ ಸ್ವಾಗತಿಸುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ಕ್ಷಣವಾಗಿದೆ. ಅತಿಥಿಗಳು ಹಾಗೂ ಸಾರ್ವಜನಿಕರಿಗೆ ಸ್ಮರಣೀಯ ಅನುಭವವನ್ನು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ” ಎಂದು ಹೇಳಿದರು.
ರೋಹನ್ ಕಾರ್ಪೊರೇಷನ್ ನಿರ್ದೇಶಕ ಡಿಯೋನ್ ಮೊಂತೆರೊ ಮಾತನಾಡಿ, “ಮಂಗಳೂರಿನಲ್ಲಿ ಇದುವರೆಗೆ ನಡೆದ ಅತ್ಯಂತ ಪ್ರತಿಷ್ಠಿತ ಕಾರ್ಪೊರೇಟ್ ಕಾರ್ಯಕ್ರಮಗಳಲ್ಲಿ ಇದೂ ಒಂದಾಗಲಿದೆ. ಇದು ನಮ್ಮ ಸಂಸ್ಥೆ ಹಾಗೂ ನಗರದ ಪಾಲಿಗೆ ಐತಿಹಾಸಿಕ ಕ್ಷಣವಾಗಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ನಡೆಯಲು ಸಾರ್ವಜನಿಕರು ಹಾಗೂ ಸಂಬಂಧಿತ ಇಲಾಖೆಗಳ ಸಹಕಾರವನ್ನು ಕೋರುತ್ತೇವೆ” ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಲು ಪೂರ್ವ ನೋಂದಣಿ ಕಡ್ಡಾಯವಾಗಿದೆ ಎಂದು ರೋಹನ್ ಕಾರ್ಪೊರೇಷನ್ ಸ್ಪಷ್ಟಪಡಿಸಿದೆ. ಆಯೋಜಕರು ನೀಡುವ ಮಾನ್ಯ ನೋಂದಾಯಿತ ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶ ನೀಡಲಾಗುವುದು.
ಶಾರುಖ್ ಖಾನ್ ಅವರ ಮಂಗಳೂರು ಭೇಟಿ ಘೋಷಣೆಯಾದ ಬೆನ್ನಲ್ಲೇ ಅಭಿಮಾನಿಗಳು, ಉದ್ಯಮ ವಲಯ ಹಾಗೂ ಸಾರ್ವಜನಿಕರಲ್ಲಿ ಭಾರೀ ಉತ್ಸಾಹ ಮೂಡಿದ್ದು, ಈ ಕಾರ್ಯಕ್ರಮವು ಮಂಗಳೂರಿನ ಇತಿಹಾಸದಲ್ಲಿ ವಿಶೇಷ ಮೈಲಿಗಲ್ಲಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಸಂಸ್ಥೆಯ ಕುರಿತು
ರೋಹನ್ ಕಾರ್ಪೊರೇಷನ್ ಕರಾವಳಿ ಕರ್ನಾಟಕದ ಪ್ರಮುಖ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಸ್ಥೆಗಳಲ್ಲಿ ಒಂದಾಗಿದ್ದು, ವಸತಿ, ವಾಣಿಜ್ಯ ಹಾಗೂ ಮಿಶ್ರ ಬಳಕೆಯ ಅನೇಕ ಮಹತ್ವದ ಯೋಜನೆಗಳನ್ನು ಯಶಸ್ವಿಯಾಗಿ ರೂಪಿಸಿದೆ. ಗುಣಮಟ್ಟ, ನಂಬಿಕೆ, ನವೀನತೆ ಹಾಗೂ ಗ್ರಾಹಕ ಕೇಂದ್ರಿತ ಸೇವೆಯ ಮೂಲಕ ಸಂಸ್ಥೆ ವಿಶಿಷ್ಟ ಗುರುತನ್ನು ಪಡೆದಿದೆ.
ಹೆಚ್ಚಿನ ಮಾಹಿತಿಗಾಗಿ: +91 90355 64026


