ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಪಡಿಲ್: ತಮಿಳುನಾಡಿನಿಂದ ಕುಂದಾಪುರಕ್ಕೆ ಆಕ್ರಮವಾಗಿ ಸಾಗಟ ಮಾಡುತ್ತಿದ್ದು ಸುಮಾರು 13 ಲಕ್ಷ ಮೌಲ್ಯ ಬೆಲೆಬಾಳುವ ಮರದ ಲಾರಿಯನ್ನು ಮಂಗಳೂರು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿರುವ ಘಟನೆ ಪಡಿಲ್ ಸಮೀಪದದಲ್ಲಿ ಶನಿವಾರ ನಡೆದಿದೆ.
ಆರೋಪಿಗಳನ್ನು ತಮಿಳುನಾಡು ಮೂಲದ ಮುದ್ದೆ ಬಿಹಾಳ್ ತಾಲೂಕಿನ ರಮೇಶ್ ಎಂದು ಗುರುತಿಸಲಾಗಿದೆ.
ಸುಮಾರು 40 ಜಾತಿಯ ದಿಮ್ಮಿ ಬಾಗೆ ಮರವನ್ನು ತಮಿಳುನಾಡಿನಿಂದ ಅಕ್ರಮವಾಗಿ ಸಾಗಾಟಮಾಡುತ್ತಿದ್ದ ವೇಳೆ ಲಾರಿಯಲ್ಲಿ ಕರ್ನಾಟಕ ಮೂಲದ ಯಾವುದೇ ರಹದಾರಿ ಪತ್ತೆಯಾಗದೇ ಇದ್ದುದರಿಂದ ಲಾರಿಯನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗಿತ್ತು.
ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ನೇತೃತ್ವದಲ್ಲಿ ನಡೆದ ಈ ಕಾರ್ಯಚರಣೆಯಲ್ಲಿ ಮಂಗಳೂರು ಉಪವಲಯಣ್ಯಾಧಿಕಾರಿಗಳಾದ ಅಶ್ವಿತ್ ಗಟ್ಟಿ, ಪ್ರೀತಮ್ ಎಸ್.ಪೂಜಾರಿ, ವೆಂಕಟೇಶ್ ಭಟ್, ರವಿಕುಮಾರ್, ಜಗರಾಜ್, ಮತ್ತು ವಾಹನ ಚಾಲಕ ಸೂರಜ್ ಕೊಲ್ಯ ಉಪಸ್ಥಿತರಿದ್ದರು.






