ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಲ್ಯ: ದ.ಕ.ಜಿಲ್ಲೆಗೆ ಮಾರಕವಾಗಿರುವ ಎತ್ತಿನಹೊಳೆ ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಕೊಲ್ಯ ಸೋಮೇಶ್ವರ ಬಿಲ್ಲವ ಸಂಘ ಸಭೆಯಲ್ಲಿ ನಿರ್ಣಯಿಸಿದ್ದು, ಜಿಲ್ಲೆಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ವಿರುದ್ಧದ ಹೋರಾಟದಲ್ಲಿ ಸರ್ವ ಸದಸ್ಯರು ಭಾಗವಹಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ತುಳುನಾಡಿನ ಪ್ರಕೃತಿದತ್ತವಾದ ನೇತ್ರಾವತಿ ನದಿಯನ್ನು ನುಂಗಿ, ಜಲಮೂಲವನ್ನು ನಾಶಮಾಡಿ ಮುಂದಿನ ದಿನಗಳಲ್ಲಿ ತೀವ್ರ ಜಲಕ್ಷಾಮ ತಂದೊಡ್ಡುವ ಗೊತ್ತು ಗುರಿಯಿಲ್ಲದ ಎತ್ತಿನ ಹೊಳೆ ಯೋಜನೆಯನ್ನು ಕೈ ಬಿಡಬೇಕು . ಜಿಲ್ಲೆಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸರ್ವಸದಸ್ಯರು ಹೋರಾಟದಲ್ಲಿ ಭಾಗವಹಿಸಬೇಕು , ಈ ಅವೈಜ್ಞಾನಿಕ ಯೋಜನೆಯನ್ನು ತಕ್ಷಣ ನಿಲ್ಲಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಹಾಗೂ ಮಂಗಳೂರು ದಸರಾ ಕಾರ್ಯಕ್ರಮದಲ್ಲಿ ಎಲ್ಲಾ ಸದಸ್ಯರು ಸ್ವಯಂ ಸೇವಕರಾಗಿ ಭಾಗವಹಿಸಲು ನಿರ್ಧರಿಸಲಾಯಿತು.
ಟೈಲರ್ಸ್ ಅಸೋಸಿಯೇಷನ್ ಬೆಂಬಲ: ನೇತ್ರಾವತಿ ಉಳಿಸಿ ಹೋರಾಟಕ್ಕೆ ಉಳ್ಳಾಲ ವಲಯದ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಬೆಂಬಲ ವ್ಯಕ್ತಪಡಿಸಿದೆ ಎಂದು ಅಧ್ಯಕ್ಷ ಬಿ.ನಾರಾಯಣ ಕುಂಪಲ ಹೇಳಿದ್ದಾರೆ.


