Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಕುಂಟಿಕಾನ ಲಿಫ್ಟ್ ದುರಂತ: ಮೂರು ದಿನವಾದರೂ ತನಿಖೆ ಎಲ್ಲಿದೆ? ಹೊಣೆ ಯಾರದು?

UllalaVaniBy UllalaVaniMay 20, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರಿನ ಕುಂಟಿಕಾನದಲ್ಲಿರುವ ಮಾರ್ಟ್‌ವೊಂದರಲ್ಲಿ ಸಂಭವಿಸಿದ ಲಿಫ್ಟ್ ಅವಘಡದಲ್ಲಿ ಬೆಳಾಲು ಗ್ರಾಮದ ಪೂಂಜಕೆರೆ ನಿವಾಸಿ ನೌಫಾಲ್ (28) ಮೃತಪಟ್ಟ ಘಟನೆ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ. ಕೆಲಸದಲ್ಲಿ ನಿರತರಾಗಿದ್ದ ಯುವಕನೊಬ್ಬ ಲಿಫ್ಟ್ ಅವಘಡದಲ್ಲಿ ಪ್ರಾಣ ಕಳೆದುಕೊಳ್ಳುವುದು ಕೇವಲ ಅಪಘಾತವಲ್ಲ, ಇದು ಸಾರ್ವಜನಿಕ ಸುರಕ್ಷತೆ ವ್ಯವಸ್ಥೆಯ ವೈಫಲ್ಯ ಎನ್ನುವ ಪ್ರಶ್ನೆ ಈಗ ಜನರ ಮನಸ್ಸಿನಲ್ಲಿ ಮೂಡುತ್ತಿದೆ.

ಘಟನೆ ನಡೆದಿದ್ದು ಶನಿವಾರ ಸಂಜೆ. ಸಹೋದ್ಯೋಗಿಗಳು ನೌಫಾಲ್ ಅವರನ್ನು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಪ್ರಕರಣ ಉರ್ವ ಠಾಣೆಯಲ್ಲಿ ದಾಖಲಾಗಿದ್ದರೂ, ಮೂರು ದಿನ ಕಳೆದರೂ ತನಿಖೆಯ ಪ್ರಗತಿ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಿಲ್ಲ. ಲಿಫ್ಟ್‌ಗೆ ಮಾನ್ಯ ಸುರಕ್ಷತಾ ಪ್ರಮಾಣಪತ್ರ ಇದೆಯೇ? ನಿಯಮಿತ ತಪಾಸಣೆ ನಡೆದಿತ್ತೇ? ಕಟ್ಟಡಕ್ಕೆ ಅಗ್ನಿಶಾಮಕ ಮತ್ತು ಸುರಕ್ಷತಾ ಅನುಮತಿಗಳು ಸರಿಯಾಗಿದ್ದವೆಯೇ? ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಒಬ್ಬ ಯುವಕ ಪ್ರಾಣ ಕಳೆದುಕೊಂಡಿದ್ದರೂ ಜಿಲ್ಲಾಡಳಿತದ ಮೌನ ಜನರಲ್ಲಿ ಅನುಮಾನ ಹುಟ್ಟಿಸುತ್ತಿದೆ. ಜಿಲ್ಲಾಧಿಕಾರಿಗಳು ಯಾಕೆ ಸಾರ್ವಜನಿಕವಾಗಿ ಮಾಹಿತಿ ನೀಡುತ್ತಿಲ್ಲ? ಮಹಾನಗರ ಪಾಲಿಕೆಯ ಕಟ್ಟಡ ಮತ್ತು ಸುರಕ್ಷತಾ ವಿಭಾಗದ ಅಧಿಕಾರಿಗಳ ವಿರುದ್ಧ ತನಿಖೆ ಆರಂಭವಾಗಿದೆಯೇ? ತಪ್ಪಿತಸ್ಥರ ವಿರುದ್ಧ ಅಮಾನತು ಕ್ರಮ ಯಾಕೆ ಕೈಗೊಳ್ಳಲಾಗಿಲ್ಲ? ಜನಪ್ರತಿನಿಧಿಗಳಾದ ಶಾಸಕರು, ಸಂಸದರು ಹಾಗೂ ಉಸ್ತುವಾರಿ ಸಚಿವರು ಈ ವಿಷಯದಲ್ಲಿ ಮೌನವಾಗಿರುವುದು ಯಾಕೆ?

ನಗರದಲ್ಲಿ ಎತ್ತರದ ಕಟ್ಟಡಗಳು, ಮಾಲ್‌ಗಳು, ವಾಣಿಜ್ಯ ಸಂಕೀರ್ಣಗಳು ವೇಗವಾಗಿ ಹೆಚ್ಚುತ್ತಿವೆ. ಆದರೆ ಸುರಕ್ಷತಾ ನಿಯಮಗಳ ಅನುಷ್ಠಾನ ಎಷ್ಟು ಗಂಭೀರವಾಗಿ ನಡೆಯುತ್ತಿದೆ ಎಂಬುದನ್ನು ಈ ದುರಂತ ಪ್ರಶ್ನಿಸಿದೆ. ಲಿಫ್ಟ್‌ಗಳ ನಿರ್ವಹಣೆ ಮತ್ತು ತಾಂತ್ರಿಕ ಪರಿಶೀಲನೆ ಕೇವಲ ದಾಖಲೆಗಳಿಗೆ ಸೀಮಿತವಾಗಿದೆಯೇ ಎಂಬ ಅನುಮಾನ ಜನರಲ್ಲಿ ಮೂಡಿದೆ.

ಪ್ರತಿ ಬಾರಿ ಇಂತಹ ದುರಂತ ಸಂಭವಿಸಿದಾಗ ಕೆಲವು ದಿನ ಚರ್ಚೆ ನಡೆಯುತ್ತದೆ. ನಂತರ ಪ್ರಕರಣ ಮೌನದಲ್ಲಿ ಮರೆಯಾಗುತ್ತದೆ. ಮೃತ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡುವುದರಿಂದ ಮಾತ್ರ ನ್ಯಾಯ ಸಿಗುವುದಿಲ್ಲ. ಜೀವ ಕಳೆದುಕೊಂಡ ಯುವಕನ ಸಾವಿಗೆ ನಿಜವಾದ ಕಾರಣವೇನು? ಯಾರು ಹೊಣೆ? ಯಾವ ಅಧಿಕಾರಿಯ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿತು? ಎಂಬುದನ್ನು ಬಹಿರಂಗಪಡಿಸುವುದು ಸರ್ಕಾರದ ಕರ್ತವ್ಯ.

ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಚರ್ಚೆ ಮಾಡುವ ಯುವಕರು, ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಈಗ ಎಲ್ಲಿವೆ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ. ಸಾಮಾನ್ಯ ನಾಗರಿಕರ ಜೀವ ಭದ್ರತೆ ವಿಷಯದಲ್ಲಿ ಎಲ್ಲಾ ಪಕ್ಷಗಳೂ ಒಂದೇ ಧ್ವನಿಯಲ್ಲಿ ಮಾತನಾಡಬೇಕಾದ ಅಗತ್ಯ ಇದೆ.

ನೌಫಾಲ್ ಸಾವಿನ ಪ್ರಕರಣವನ್ನು ಕೇವಲ ಪೊಲೀಸ್ ದಾಖಲೆಯಾಗಿ ಉಳಿಸದೇ, ನ್ಯಾಯಾಂಗ ಅಥವಾ ಉನ್ನತ ಮಟ್ಟದ ತಾಂತ್ರಿಕ ತನಿಖೆಗೆ ಒಪ್ಪಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಇಲ್ಲವಾದರೆ ನಾಳೆ ಮತ್ತೊಂದು ಕಟ್ಟಡ, ಮತ್ತೊಂದು ಲಿಫ್ಟ್ ಮತ್ತು ಮತ್ತೊಂದು ಕುಟುಂಬ ಇದೇ ನೋವನ್ನು ಅನುಭವಿಸಬೇಕಾಗಬಹುದು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲವಾಣಿ ವರದಿ ಫಲಶ್ರುತಿ ಶಾರದಾ ಬಸ್‌ ಮಾಲೀಕರಿಗೆ ಧನ್ಯವಾದ ಸಲ್ಲಿಸಿದ ಪ್ರಯಾಣಿಕರು

May 20, 2026

ಕೋಣಾಜೆ ಪಂಚಾಯತ್ ದೂರು ಕೊಟ್ಟರೂ ಪೊಲೀಸ್ ಇಲಾಖೆ ಮೌನ: ಮಂಗಳೂರು ವಿಶ್ವವಿದ್ಯಾಲಯ ತ್ಯಾಜ್ಯ ನಿರ್ವಹಣೆ ಪ್ರಕರಣದಲ್ಲಿ FIR ಯಾಕಿಲ್ಲ?

May 20, 2026

ಆನ್‌ಲೈನ್‌ ಔಷಧ ಮಾರಾಟ ವಿರುದ್ಧ ದೇಶವ್ಯಾಪಿ ಪ್ರತಿಭಟನೆ: ದಕ್ಷಿಣ ಕನ್ನಡದಲ್ಲಿ 1100 ಮೆಡಿಕಲ್‌ ಶಾಪ್‌ ಬಂದ್ ಜಿಲ್ಲೆಯ ಸಂಸದರು ಏನು ಹೇಳುತ್ತಾರೆ?

May 20, 2026

Comments are closed.

Advertise
ಸಂಪರ್ಕಿಸಿ

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025
All News

ಉಳ್ಳಾಲವಾಣಿ ವರದಿ ಫಲಶ್ರುತಿ ಶಾರದಾ ಬಸ್‌ ಮಾಲೀಕರಿಗೆ ಧನ್ಯವಾದ ಸಲ್ಲಿಸಿದ ಪ್ರಯಾಣಿಕರು

By UllalaVaniMay 20, 20260

ತೊಕ್ಕೊಟ್ಟು: ಮಂಗಳೂರು-ಬಿ.ಸಿ.ರೋಡ್‌ ನಡುವೆ ಚಲಿಸುವ ಶಾರದಾ ಬಸ್ಸಿನ ಅವ್ಯವಸ್ಥೆ ಕುರಿತು ಉಳ್ಳಾಲವಾಣಿ ನಡೆಸಿದ ವರದಿಯನ್ನು ಗಮನಿಸಿದ ಮಾಲೀಕರು ತಕ್ಷಣವೇ ಸ್ಪಂಧಿಸಿ…

ಕೋಣಾಜೆ ಪಂಚಾಯತ್ ದೂರು ಕೊಟ್ಟರೂ ಪೊಲೀಸ್ ಇಲಾಖೆ ಮೌನ: ಮಂಗಳೂರು ವಿಶ್ವವಿದ್ಯಾಲಯ ತ್ಯಾಜ್ಯ ನಿರ್ವಹಣೆ ಪ್ರಕರಣದಲ್ಲಿ FIR ಯಾಕಿಲ್ಲ?

May 20, 2026

ಕುಂಟಿಕಾನ ಲಿಫ್ಟ್ ದುರಂತ: ಮೂರು ದಿನವಾದರೂ ತನಿಖೆ ಎಲ್ಲಿದೆ? ಹೊಣೆ ಯಾರದು?

May 20, 2026

ಆನ್‌ಲೈನ್‌ ಔಷಧ ಮಾರಾಟ ವಿರುದ್ಧ ದೇಶವ್ಯಾಪಿ ಪ್ರತಿಭಟನೆ: ದಕ್ಷಿಣ ಕನ್ನಡದಲ್ಲಿ 1100 ಮೆಡಿಕಲ್‌ ಶಾಪ್‌ ಬಂದ್ ಜಿಲ್ಲೆಯ ಸಂಸದರು ಏನು ಹೇಳುತ್ತಾರೆ?

May 20, 2026
1 2 3 … 1,930 Next
Automatic YouTube Gallery

ಉಳ್ಳಾಲ ಮೊಗವೀರ ಪಟ್ಣ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವ

ಉಳ್ಳಾಲ ಮೊಗವೀರ ಪಟ್ಣ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನ; ವರ್ಷಂಪ್ರತಿ ನಡೆಯುವಂತೆ ಈ ಬಾರಿಯೂ ದೇವಳದ ವಾರ್ಷಿಕೋತ್ಸವ

ದುರ್ಗಾನಮಸ್ಕಾರ ಪೂಜೆ ಸೇರಿದಂತೆ ಧಾರ್ಮಿಕ ಪೂಜಾಕೈಂಕರ್ಯಗಳು

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಉಳ್ಳಾಲ ಮೊಗವೀರ ಪಟ್ಣ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವ
Now Playing
ಉಳ್ಳಾಲ ಮೊಗವೀರ ಪಟ್ಣ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವ
ಉಳ್ಳಾಲ ಮೊಗವೀರ ಪಟ್ಣ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನ; ವರ್ಷಂಪ್ರತಿ ...
ಉಳ್ಳಾಲ ಮೊಗವೀರ ಪಟ್ಣ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನ; ವರ್ಷಂಪ್ರತಿ ನಡೆಯುವಂತೆ ಈ ಬಾರಿಯೂ ದೇವಳದ ವಾರ್ಷಿಕೋತ್ಸವ

ದುರ್ಗಾನಮಸ್ಕಾರ ಪೂಜೆ ಸೇರಿದಂತೆ ಧಾರ್ಮಿಕ ಪೂಜಾಕೈಂಕರ್ಯಗಳು

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮೇ.22ರಿoದ ಕೊಂಡಾಣ ಶ್ರೀಪಿಲಿಚಾಮುಂಡಿ ದೈವಸ್ಥಾನದಲ್ಲಿ ವರ್ಷಾವಧಿ ಬಂಡಿ ಉತ್ಸವ
Now Playing
ಮೇ.22ರಿoದ ಕೊಂಡಾಣ ಶ್ರೀಪಿಲಿಚಾಮುಂಡಿ ದೈವಸ್ಥಾನದಲ್ಲಿ ವರ್ಷಾವಧಿ ಬಂಡಿ ಉತ್ಸವ
ಕೊಂಡಾಣ ಶ್ರೀಪಿಲಿಚಾಮುಂಡಿ ದೈವಸ್ಥಾನದಲ್ಲಿ ಮೇ.22ರಿಂದ ವರ್ಷಾವಧಿ ಬಂಡಿ ಉತ್ಸವ ...
ಕೊಂಡಾಣ ಶ್ರೀಪಿಲಿಚಾಮುಂಡಿ ದೈವಸ್ಥಾನದಲ್ಲಿ ಮೇ.22ರಿಂದ ವರ್ಷಾವಧಿ ಬಂಡಿ ಉತ್ಸವ ಆರಂಭ;ಕೊoಡಾಣ ಕಾರಣಿಕ ಕ್ಷೇತ್ರದಲ್ಲಿ ಮೂರು ದಿನಗಳ ಬಂಡಿ ಉತ್ಸವ

ಮೇ.24ರಂದು ವೈಭವದ ಬಂಟ ನೇಮ, ಪಿಲಿಚಾಮುಂಡಿ ದೈವದ ನೇಮಕ್ಕೆ ಸಕಲ ಸಿದ್ಧತೆ

📍 Ullal | Dakshina Kannada | Coastal Karnataka News ...
Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version