ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಅಂಬಿಕಾರೋಡ್: ನೇತ್ರಾವತಿ ನದಿ ತಿರುವು ವಿರೋಧಿಸಿ ಸಮಾನ ಮನಸ್ಕರ ಚಿಂತನ-ಮಂತನ ಸಭೆ ಅ.8 ರ ಸಂಜೆ 4.00ಗಂಟೆಗೆ ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ನಡೆಯಲಿದೆ.
ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರದಲ್ಲಿ ಗುತ್ತಿಗೆದಾರರು, ಜನಪ್ರತಿನಿಧಿಗಳಿಗೆ , ಅಧಿಕಾರಿಗಳಿಗೆ ಕೋಟ್ಯಂತರ ರೂ ಲಂಚದ ರೂಪದಲ್ಲಿ ಹೋಗಿರುವ ಸಂಶಯವಿದೆ. 5 ವರ್ಷದ ವಾರಾಹಿ ಯೋಜನೆಗೆ 35 ವರ್ಷ ತೆಗೆದುಕೊಂಡು 50 ಕೋಟಿಯ ಯೋಜನೆಗೆ 500 ಕೋಟಿ ಖರ್ಚು ಮಾಡಿದಂತೆ ಇನ್ನೂ ನೆನೆಗುದಿಗೆ ಬಿದ್ದಿರುವ ಕಳಸ-ಬಂಡೂರಿ ಯೋಜನೆಯಂತೆ ಇದು ಕುಡ ದುಡ್ಡು ಹೊಡೆಯುವ ಯೋಜನೆ.
ಮುಂದಿನ ಜನಾಂಗಕ್ಕಾಗಿ ಸಮೃದ್ಧ ಕರಾವಳಿ ಮೀನುಗಾರಿಕೆ, ಕೃಷಿ ಉಳಿವಿಗಾಗಿ ಧಾರ್ಮಿಕ ಕ್ಷೇತ್ರದಲ್ಲಿನ ಪವಿತ್ರ ನೀರು ಬತ್ತಿ ಹೋಗದಂತೆ ನೋಡಿಕೊಳ್ಳಲು ಜನರನ್ನು ತೋಳಿನಲ್ಲಿ ರಕ್ಷಣೆ ಮಾಡುತ್ತಿರುವ ಪಶ್ಚಿಮ ಘಟ್ಟದ ರಕ್ಷಣೆಗಾಗಿ ಹೋರಾಟ ನಡೆಸುವ ತೀರ್ಮಾನ ಕೈಗೊಂಡು ಸಭೆಯನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


